ವಿರಾಟ್ ಕೊಹ್ಲಿ ಕೊನೆಯ ಚಾನ್ಸ್, ಟೀಂ ಇಂಡಿಯಾ ನಾಯಕನ ಪಟ್ಟಕ್ಕೆ ಏರಲಿದ್ದಾರೆ ಈ ಆಟಗಾರ..!
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ, ಎಲ್ಲರ ಕಣ್ಣುಗಳು ವಿರಾಟ್ ಕೊಹ್ಲಿಯ ಮೇಲೆ ನೆಟ್ಟಿದೆ. ಏಕೆಂದರೆ ಇದು ಏಕದಿನ ನಾಯಕನಾಗಿ ವಿರಾಟ್ ಕೊಹ್ಲಿಗೆ ಕೊನೆಯ ಸರಣಿಯಾಗಬಹುದು.
ನವದೆಹಲಿ: ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ (Team India), ಇದೇ ತಿಂಗಳು ದಕ್ಷಿಣ ಆಫ್ರಿಕಾ ಸರಣಿಯನ್ನು (South Africa tour) ಆಡಲಿದೆ. ಈ ಸರಣಿಯು ಅನೇಕ ಅನುಭವಿ ಆಟಗಾರರಿಗೆ ಟೀಮ್ ಇಂಡಿಯಾದ ಜರ್ಸಿಯಲ್ಲಿ ಕಾಣಿಸಿಕೊಳ್ಳುವ ಕೊನೆಯ ಸರಣಿಯಾಗಬಹುದು. ಅದರಲ್ಲೂ ವಿರಾಟ್ (Virat Kohli) ನಾಯಕತ್ವ ಈ ಸರಣಿಯ ಮೇಲೆ ನಿರ್ಧರಿತವಾಗಿದೆ. ಒಂದೇ ಒಂದು ತಪ್ಪು ಕೂಡಾ, ವಿರಾಟ್ ನಾಯಕತ್ವವನ್ನು ಕಸಿದುಕೊಳ್ಳಲಿದೆ ಎಂದು ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿದೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ, ಎಲ್ಲರ ಕಣ್ಣುಗಳು ವಿರಾಟ್ ಕೊಹ್ಲಿಯ (Virat Kohli) ಮೇಲೆ ನೆಟ್ಟಿದೆ. ಏಕೆಂದರೆ ಇದು ಏಕದಿನ ನಾಯಕನಾಗಿ ವಿರಾಟ್ ಕೊಹ್ಲಿಗೆ ಕೊನೆಯ ಸರಣಿಯಾಗಬಹುದು. ಜನವರಿ 19 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಇನ್ನೇನು ತಂಡ ಕೂಡಾ ಸದ್ಯದಲ್ಲೇ ಪ್ರಕಟವಾಗಲಿದೆ. ಏಕದಿನ ನಾಯಕನಾಗಿ ವಿರಾಟ್ ಕೊಹ್ಲಿ ಭವಿಷ್ಯದ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಸರಣಿಯಲ್ಲಿ ಟೀಂ ಇಂಡಿಯಾ (Team India) ಸೋತರೆ, ವಿರಾಟ್ ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಲಾಗುವುದು ಎಂದು ಬಿಸಿಸಿಐ (BCCI) ಈಗಾಗಲೇ ಸ್ಪಷ್ಟಪಡಿಸಿದೆ.
ಇದನ್ನೂ ಓದಿ : MS Dhoni- ಬಹಳ ದಿನಗಳ ನಂತರ ಧೋನಿ-ಯುವರಾಜ್ ಕಂಡಿದ್ದು ಹೀಗೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಈ ಆಟಗಾರ ಆಗಲಿದ್ದಾರೆ ಹೊಸ ODI ನಾಯಕ :
ಭಾರತವು ದಕ್ಷಿಣ ಆಫ್ರಿಕಾದಲ್ಲಿ ಮೂರು ODIಗಳನ್ನು ಆಡಬೇಕಾಗಿದೆ. ಈಗ ದೇಶಕ್ಕೆ ವೈಟ್ ಬಾಲ್ (ಸೀಮಿತ ಓವರ್) ಮಾದರಿಯಲ್ಲಿ ಇಬ್ಬರು ನಾಯಕರ ಅಗತ್ಯವಿದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದು ತಂಡದಲ್ಲಿ ವಿಚಾರಗಳ ಘರ್ಷಣೆಗೆ ಕಾರಣವಾಗಬಹುದು. ರೋಹಿತ್ ಶರ್ಮಾ (Rohit Sharma) ಈಗಾಗಲೇ ಟಿ20 ತಂಡದ ನಾಯಕರಾಗಿದ್ದಾರೆ. 2023ರಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ನ ದೃಷ್ಟಿಯಿಂದ ಸೀಮಿತ ಓವರ್‌ಗಳ ಮಾದರಿಯಲ್ಲಿ ಹೊಸ ನಾಯಕನನ್ನು ಹೊಂದುವ ಬಗ್ಗೆ ಬಿಸಿಸಿಐ ಚರ್ಚಿಸುತ್ತಿದೆ.
ಬಿಸಿಸಿಐ (BCCI) ಮೂಲಗಳ ಪ್ರಕಾರ ಸದ್ಯಕ್ಕೆ ಏಕದಿನ ನಾಯಕತ್ವವನ್ನು ಉಳಿಸಿಕೊಳ್ಳಲು ವಿರಾಟ್‌ಗೆ ಕಷ್ಟವಾಗುತ್ತಿದೆ. ಈ ವರ್ಷ ಕೆಲವೇ ಪಂದ್ಯಗಳು ಇರುವುದರಿಂದ ಏಕದಿನ ಪಂದ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ವಿಳಂಬವಾಗಬಹುದು.ಆದರೆ, ವಾದದ ಪ್ರಕಾರ, ಒಂದೇ ರೀತಿಯ ಎರಡು ಮಾದರಿಗಳಿಗೆ ವಿಭಿನ್ನ ನಾಯಕರನ್ನು ಇರಿಸಿದರೆ, ಅಭಿಪ್ರಾಯಗಳ ಸಂಘರ್ಷ ಉಂಟಾಗುತ್ತದೆ. ಈ ನಿರ್ಧಾರಕ್ಕೆ ಸಂಬಂಧಿಸಿದಂತೆ, ಹೆಚ್ಚಿನವರು ರೋಹಿತ್‌ಗೆ ಈ ಜವಾಬ್ದಾರಿಯನ್ನು ಹಸ್ತಾಂತರಿಸಬೇಕು ಎನ್ನುತ್ತಾರೆ.
ಇದನ್ನೂ ಓದಿ : Vijay Hazare Trophy: ಐಪಿಎಲ್ ಮೆಗಾ ಹರಾಜಿನ ಮೊದಲು, ಈ ಆಟಗಾರರಿಗೆ ಸುವರ್ಣಾವಕಾಶ
ಇತ್ತೀಚೆಗಷ್ಟೇ ನೂತನ ಟಿ20 ನಾಯಕನ ನೇಮಕ :
ಟೀಂ ಇಂಡಿಯಾದ ನೂತನ ಟಿ20 ನಾಯಕನಾಗಿ ರೋಹಿತ್ ಶರ್ಮಾ (Rohit Sharma) ಅವರನ್ನು ಆಯ್ಕೆ ಮಾಡಿದ್ದಾರೆ. ಟಿ 20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಈ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ರೋಹಿತ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಬೇಕು ಎಂಬುದು ಅಭಿಮಾನಿಗಳ ಬಹು ದಿನದ ಬೇಡಿಕೆಯಾಗಿತ್ತು. ಈಗ ಟಿ20 ನಂತರ ರೋಹಿತ್ ಅವರನ್ನು ಏಕದಿನ ನಾಯಕನನ್ನಾಗಿ ಮಾಡಬೇಕು ಎಂಬ ಚರ್ಚೆ ನಿರಂತರವಾಗಿ ನಡೆಯುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ