ನವದೆಹಲಿ: ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬ್ರಿಯಾನ್ ಲಾರಾ ವಿರಾಟ್ ಕೊಹ್ಲಿ ಮನುಷ್ಯನಲ್ಲ ರನ್ ಮಷೀನ್ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈಗಾಗಲೇ ಏಕದಿನ ಪಂದ್ಯದಲ್ಲಿ 41 ಶತಕಗಳನ್ನು ಗಳಿಸಿರುವ ಕೊಹ್ಲಿ ಸದ್ಯದಲ್ಲೇ 11 ಸಾವಿರ ರನ್ ಗಳನ್ನು ತಲುಪುವ ಗುರಿ ಹೊಂದಿದ್ದಾರೆ. ಈಗ ಏಕದಿನ, ಟೆಸ್ಟ್ ಹಾಗೂ ಟ್ವೆಂಟಿ ಕ್ರಿಕೆಟ್ ಪಂದ್ಯದಲ್ಲಿ ಕೊಹ್ಲಿ  ಸ್ಥಿರ ಪ್ರದರ್ಶನಕ್ಕೆ ವೆಸ್ಟ್ ಇಂಡಿಸ್ ನ ದಂತಕತೆ ಬ್ರಿಯಾನ್ ಲಾರಾ ಶ್ಲಾಘಿಸಿದ್ದಾರೆ.


"ವಿರಾಟ್ ಕೊಹ್ಲಿ ಯಂತ್ರವಿದ್ದ ಹಾಗೆ 80, 90 ರ ದಶಕದಲ್ಲಿ ನಾವು ಅಳವಡಿಸಿಕೊಂಡಿದ್ದ ಕ್ರಿಕೆಟ್ ಆಟಗಾರನನ್ನು ಅವರು ಈಗ ಆಟಕ್ಕೆ ತಂದಿದ್ದಾರೆ, ಫಿಟ್ನೆಸ್ ಯಾವಾಗಲೂ ಮುಖ್ಯವಾದುದು, ಆದರೆ ಈ ಹಿಂದೆ ಇವಾಗಿರುವಷ್ಟು ಮುಖ್ಯವಾಗಿದ್ದಿರಲಿಲ್ಲ.ಅತಿ ಹೆಚ್ಚು ಕ್ರಿಕೆಟ್ ಆಡಿದಂತೆ ದೈಹಿಕವಾಗಿ ಫಿಟ್ ಆಗಿರುತ್ತಾರೆ.ಕೊಹ್ಲಿ  ಜೀಂ ನಲ್ಲಿ ಸಮಯವನ್ನು ಕಳೆಯುವುದರ ಮೂಲಕ ತಾವು ಫಿಟ್ನೆಸ್ ಎನ್ನುವುದು ಮುಖ್ಯವೆಂದು ತೋರಿಸಿದ್ದಾರೆ.ಆದ್ದರಿಂದ ಅವರು ರನ್ ಗಳಿಸುವ ಯಂತ್ರವಾಗಿದ್ದಾರೆ.


ಒಬ್ಬ ವ್ಯಕ್ತಿ ಪ್ರತಿ ಸಾರಿ ಬ್ಯಾಟ್ ಮಾಡಲು ಹೋದಾಗಲೆಲ್ಲಾ ರನ್ ಗಳನ್ನು ಗಳಿಸುತ್ತಾನೆ. ನನಗೆ ಸಚಿನ್ ತೆಂಡುಲ್ಕರ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಈ ಇಬ್ಬರು ಆಟಗಾರರನ್ನು ನಾನು ಹೋಲಿಕೆ ಮಾಡಲು ಹೋಗುವುದಿಲ್ಲ. ಅವರು ದೊಡ್ಡ ಪರಂಪರೆಯನ್ನು ಬಿಟ್ಟುಹೋಗಿದ್ದಾರೆ.ಆದರೆ ಕೊಹ್ಲಿಯಲ್ಲಿ  ವಿಶೇಷ ಪ್ರತಿಭೆಯಿದೆ ಅದು ಮುಂಬರುವ ಎಲ್ಲ ಕ್ರಿಕೆಟ್ ಆಟಗಾರರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.