RCB vs KKR, Virat Kohli: ಇಂದು ಇಂಡಿಯನ್ ಪ್ರೀಮಿಯರ್ ಲೀಗ್ 2024ರ 10 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಎದುರಿಸುತ್ತಿದೆ. ಬೆಂಗಳೂರಿನ ತವರು ಮೈದಾನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಕೋಲ್ಕತ್ತಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.


COMMERCIAL BREAK
SCROLL TO CONTINUE READING

ಕೋಲ್ಕತ್ತಾ ವಿರುದ್ಧ 3 ಸಿಕ್ಸರ್ ಬಾರಿಸಿದ ವಿರಾಟ್ ಐಪಿಎಲ್’ನಲ್ಲಿ 240 ಸಿಕ್ಸರ್’ಗಳನ್ನು ಪೂರೈಸಿದರು. ಇದರೊಂದಿಗೆ ಎಂಎಸ್ ಧೋನಿ, ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.


ಇದನ್ನೂ ಓದಿ: Virat Kohli: ಗೌತಮ್ ಗಂಭೀರ್’ನನ್ನೇ ಗುರಾಯಿಸಿ ನೋಡಿದ ವಿರಾಟ್ ಕೊಹ್ಲಿ! ಸೆನ್ಸೇಷನಲ್ ದೃಶ್ಯ


ಧೋನಿ 252 ಐಪಿಎಲ್ ಪಂದ್ಯಗಳ 218 ಇನ್ನಿಂಗ್ಸ್‌’ಗಳಲ್ಲಿ 239 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಆದರೆ ವಿರಾಟ್ ಇದುವರೆಗೆ ಐಪಿಎಲ್‌’ನ 240 ಪಂದ್ಯಗಳ 232 ಇನ್ನಿಂಗ್ಸ್‌’ಗಳಲ್ಲಿ 240 ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದಾರೆ. ಜೊತೆಗೆ ಐಪಿಎಲ್ ಲೀಗ್‌’ನಲ್ಲಿ ನಾಲ್ಕನೇ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ.


ಇದಲ್ಲದೆ ಆರ್‌ ಸಿ ಬಿ ಪರ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ (239) ಹೆಸರಿನಲ್ಲಿತ್ತು.


ಆರ್‌ ಸಿ ಬಿ ಪರ ಅತಿ ಹೆಚ್ಚು ಸಿಕ್ಸರ್‌


  • 242*= ವಿರಾಟ್ ಕೊಹ್ಲಿ

  • 239 = ಕ್ರಿಸ್ ಗೇಲ್

  • 238 = ಎಬಿ ಡಿವಿಲಿಯರ್ಸ್

  • 67 = ಗ್ಲೆನ್ ಮ್ಯಾಕ್ಸ್‌ವೆಲ್

  • 50 = ಫಾಫ್ ಡು ಪ್ಲೆಸಿಸ್


ಐಪಿಎಲ್‌’ನಲ್ಲಿ ಅತಿ ಹೆಚ್ಚು ಸಿಕ್ಸರ್‌


  • ಕ್ರಿಸ್ ಗೇಲ್: 357 ಸಿಕ್ಸರ್

  • ರೋಹಿತ್ ಶರ್ಮಾ: 261 ಸಿಕ್ಸರ್

  • ಎಬಿ ಡಿವಿಲಿಯರ್ಸ್: 251 ಸಿಕ್ಸರ್‌ಗಳು

  • ವಿರಾಟ್ ಕೊಹ್ಲಿ: 242* ಸಿಕ್ಸರ್‌ಗಳು


ಇದನ್ನೂ ಓದಿ: “ಕನಸಲ್ಲೂ ಯಾವುದಾದದರೂ ತಂಡವನ್ನು ಸೋಲಿಸುವುದಾದರೆ ನನ್ನ ಗುರಿ RCBಯೇ..”-ಗೌತಮ್ ಗಂಭೀರ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್