ಬ್ರಾಡ್ ಹಾಗ್ ವಿಶ್ವ ಇಲೆವನ್ ಟೆಸ್ಟ್ ತಂಡದಲ್ಲಿ ವಿರಾಟ್ ಕೊಹ್ಲಿಗಿಲ್ಲ ಸ್ಥಾನ...!
ವಿರಾಟ್ ಕೊಹ್ಲಿ ತಮ್ಮ ಅತ್ಯುತ್ತಮ ಫಾರ್ಮ್ ನಿಂದಾಗಿ ವಿಶ್ವದ ಯಾವುದೇ ಸ್ವರೂಪದ ಕ್ರಿಕೆಟ್ ಮಾದರಿಯಲ್ಲಿಯೂ ಕೂಡ ಅವರು ಸ್ಥಾನ ಪಡೆಯಬಲ್ಲರು, ಆದರೆ ನಿಮ್ಮ ನಿರೀಕ್ಷೆ ಹೀಗಾಗಿದ್ದರೆ ಅದು ನಿಜಕ್ಕೂ ತಪ್ಪು ಎನ್ನಬಹುದು.
ನವದೆಹಲಿ: ವಿರಾಟ್ ಕೊಹ್ಲಿ ತಮ್ಮ ಅತ್ಯುತ್ತಮ ಫಾರ್ಮ್ ನಿಂದಾಗಿ ವಿಶ್ವದ ಯಾವುದೇ ಸ್ವರೂಪದ ಕ್ರಿಕೆಟ್ ಮಾದರಿಯಲ್ಲಿಯೂ ಕೂಡ ಅವರು ಸ್ಥಾನ ಪಡೆಯಬಲ್ಲರು, ಆದರೆ ನಿಮ್ಮ ನಿರೀಕ್ಷೆ ಹೀಗಾಗಿದ್ದರೆ ಅದು ನಿಜಕ್ಕೂ ತಪ್ಪು ಎನ್ನಬಹುದು.
ಹೌದು, ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಗ್ ಅವರು ತಮ್ಮ ವಿಶ್ವ ಇಲೆವನ್ ಟೆಸ್ಟ್ ತಂಡವನ್ನು ಪ್ರಕಟಿಸಿದ್ದಾರೆ. ಅಚ್ಚರಿ ಎಂದರೆ ಇದರಲ್ಲಿ ನಾಲ್ಕು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ ವಿರಾಟ್ ಕೊಹ್ಲಿ ಈ ತಂಡದ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡಿರುವುದೇ ಇದಕ್ಕೆ ಕಾರಣವಾಗಿದೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು "ವಿರಾಟ್ ಕೊಹ್ಲಿ ಈ ತಂಡದಲ್ಲಿ ಯಾಕೆ ಇಲ್ಲ ಎಂದು ಎಲ್ಲರೂ ಕೇಳುತ್ತಾರೆ?" ಆದರೆ ನೀವು ಅವರ ಕೊನೆಯ 15 ಟೆಸ್ಟ್ ಇನ್ನಿಂಗ್ಸ್ಗಳನ್ನು ನೋಡಿದರೆ, ಅವರು ಕೇವಲ 31 ರನ್ ಗಳಿಸಿದ್ದಾರೆ. ಅದಕ್ಕಾಗಿಯೇ ವಿರಾಟ್ ಕೊಹ್ಲಿ ಈ ವರ್ಷ ನನ್ನ ಟೆಸ್ಟ್ ತಂಡದಲ್ಲಿ ಇಲ್ಲ ”ಎಂದು ಹಾಗ್ ಹೇಳಿದ್ದಾರೆ.
ಹಾಗ್ ಅವರು ಭಾರತದ ಮಾಯಾಂಕ್ ಅಗರ್ವಾಲ್ ಮತ್ತು ರೋಹಿತ್ ಶರ್ಮಾ ಅವರನ್ನು ತಮ್ಮ ತಂಡದ ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಿದರು.
ಆಸ್ಟ್ರೇಲಿಯಾ ಪರ ಬ್ರಾಡ್ ಹಾಗ್ 7 ಟೆಸ್ಟ್, 123 ಏಕದಿನ ಮತ್ತು 15 ಟ್ವೆಂಟಿ -20 ಗಳನ್ನು ಆಡಿದ ಹಾಗ್, ಕ್ರಮವಾಗಿ 17 ವಿಕೆಟ್, 156 ವಿಕೆಟ್ ಮತ್ತು 7 ವಿಕೆಟ್ಗಳನ್ನು ಪಡೆದರು.
ಬ್ರಾಡ್ ಹಾಗ್ ಅವರ ಪ್ರಸ್ತುತ ಟೆಸ್ಟ್ ಇಲೆವೆನ್ ತಂಡ:
ಮಾಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಮಾರ್ನಸ್ ಲಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಬಾಬರ್ ಅಜಮ್, ಅಜಿಂಕ್ಯ ರಹಾನೆ, ಕ್ವಿಂಟನ್ ಡಿ ಕಾಕ್ , ಪ್ಯಾಟ್ ಕಮ್ಮಿನ್ಸ್, ಮೊಹಮ್ಮದ್ ಶಮಿ, ನೀಲ್ ವ್ಯಾಗ್ನರ್, ನಾಥನ್ ಲಿಯಾನ್.