Virat Kohli: ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ತಂಡ ಬಿಟ್ಟು ಹೊರನಡೆದ ವಿರಾಟ್ ಕೊಹ್ಲಿ!
ODI World Cup 2023: ಕ್ರಿಕ್’ಬಜ್ ವರದಿಯ ಪ್ರಕಾರ, ವಿರಾಟ್ ಕೊಹ್ಲಿ ತಂಡದ ಆಡಳಿತದಿಂದ ಅನುಮತಿ ಪಡೆದ ನಂತರ ಗುವಾಹಟಿಯಿಂದ ಮುಂಬೈಗೆ ಪ್ರಯಾಣಿಸಿದ್ದಾರೆ. ಇನ್ನು ಸೋಮವಾರದಂದು ತಂಡಕ್ಕೆ ಮರಳುವ ನಿರೀಕ್ಷೆ ಇದೆ.
ODI World Cup 2023: ಇಂಗ್ಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದಾದ ಬಳಿಕ ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಆಡಲು ಸಿದ್ಧವಾಗಿದೆ. ಈ ಪಂದ್ಯ ತಿರುವನಂತಪುರಂನ ಗ್ರೀನ್ ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಸ್ಟಾರ್’ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಟೀಂ ಇಂಡಿಯಾ ತೊರೆದು ಮುಂಬೈಗೆ ವಾಪಸಾಗಿದ್ದಾರೆ.
ಇದನ್ನೂ ಓದಿ: ಅಪಘಾತ ಪ್ರಕರಣದಲ್ಲಿ ನಟ ನಾಗಭೂಷಣ್‌ಗೆ ಮತ್ತೊಂದು ಬಿಗ್ ರಿಲೀಫ್!
ವಿರಾಟ್ ಕೊಹ್ಲಿ ದಿಢೀರ್ ನಿರ್ಧಾರ!
ಕ್ರಿಕ್’ಬಜ್ ವರದಿಯ ಪ್ರಕಾರ, ವಿರಾಟ್ ಕೊಹ್ಲಿ ತಂಡದ ಆಡಳಿತದಿಂದ ಅನುಮತಿ ಪಡೆದ ನಂತರ ಗುವಾಹಟಿಯಿಂದ ಮುಂಬೈಗೆ ಪ್ರಯಾಣಿಸಿದ್ದಾರೆ. ಇನ್ನು ಸೋಮವಾರದಂದು ತಂಡಕ್ಕೆ ಮರಳುವ ನಿರೀಕ್ಷೆ ಇದೆ.
ಇನ್ನು ಟೀಂ ಇಂಡಿಯಾ ಕಳೆದ ದಿನ ಸಂಜೆ ಗುವಾಹಟಿಯಿಂದ ನಾಲ್ಕು ಗಂಟೆಗಳ ಕಾಲ ವಿಶೇಷ ವಿಮಾನದ ಮೂಲಕ ಪ್ರಯಾಣಿಸಿ, ತಿರುವನಂತಪುರಂ ತಲುಪಿದೆ. ವೈಯಕ್ತಿಕ ತುರ್ತು ಪರಿಸ್ಥಿತಿಯಿಂದಾಗಿ ಕೊಹ್ಲಿ ಭಾರತ ತಂಡದ ಮಂಡಳಿಯಿಂದ ರಜೆ ಪಡೆದುಕೊಂಡಿದ್ದಾರೆ. ಸೋಮವಾರ ಸಂಜೆ ವೇಳೆಗೆ ಕೊಹ್ಲಿ ತಂಡಕ್ಕೆ ಸೇರ್ಪಡೆಗೊಂಡರೆ ಬಹುಶಃ ಅವರು ಪಂದ್ಯದ ಭಾಗವಾಗಲಿದ್ದಾರೆ.
ತಿರುವನಂತಪುರಂನಲ್ಲಿ ಹವಾಮಾನ ಹೇಗಿದೆ?
ಭಾರತ ಇನ್ನೂ ಅಭ್ಯಾಸ ಪಂದ್ಯವನ್ನು ಆಡಿಲ್ಲ. ಇಂಗ್ಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯವು ಮಳೆಯಿಂದ ಸ್ಥಗಿತಗೊಂಡಿತ್ತು. ಇನ್ನು ವೆದರ್’ಕಾಮ್ ಪ್ರಕಾರ, ಮಂಗಳವಾರ ತಿರುವನಂತಪುರದಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಇಡೀ ಪಂದ್ಯದ ವೇಳೆ ಶೇ.90ರಷ್ಟು ಮಳೆ ಬೀಳುವ ಸಾಧ್ಯತೆ ಇದ್ದು, ಮೋಡ ಕವಿದ ವಾತಾವರಣವೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯಕ್ಕೂ ಮಳೆಯ ಭೀತಿ ಎದುರಾಗಿದೆ.
2023ರ ವಿಶ್ವಕಪ್’ಗೆ ಟೀಂ ಇಂಡಿಯಾ ತಂಡ:
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಶುಭಮನ್ ಗಿಲ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್ ಮತ್ತು ಶಾರ್ದೂಲ್ ಠಾಕೂರ್.
ಇದನ್ನೂ ಓದಿ: World Cup 2023 ರಲ್ಲಿ ಈ Playing 11 ಆಡಿದರೆ.. ಭಾರತ ವಿಶ್ವ ಚಾಂಪಿಯನ್ ಆಗೋದು ನಿಸ್ಸಂಶಯ!!
ವಿಶ್ವಕಪ್’ನಲ್ಲಿ ಭಾರತದ ವೇಳಾಪಟ್ಟಿ:
ಭಾರತ vs ಆಸ್ಟ್ರೇಲಿಯಾ: ಭಾನುವಾರ, ಅಕ್ಟೋಬರ್ 8 - ಚೆನ್ನೈ
ಭಾರತ vs ಅಫ್ಘಾನಿಸ್ತಾನ: ಬುಧವಾರ, ಅಕ್ಟೋಬರ್ 11 - ದೆಹಲಿ
ಭಾರತ vs ಪಾಕಿಸ್ತಾನ: ಭಾನುವಾರ, ಅಕ್ಟೋಬರ್ 14 - ಅಹಮದಾಬಾದ್
ಭಾರತ vs ಬಾಂಗ್ಲಾದೇಶ: ಗುರುವಾರ, ಅಕ್ಟೋಬರ್ 19 - ಪುಣೆ
ಭಾರತ vs ನ್ಯೂಜಿಲೆಂಡ್: ಭಾನುವಾರ, ಅಕ್ಟೋಬರ್ 22 - ಧರ್ಮಶಾಲಾ
ಭಾರತ vs ಇಂಗ್ಲೆಂಡ್: ಭಾನುವಾರ, ಅಕ್ಟೋಬರ್ 29 - ಲಕ್ನೋ
ಭಾರತ vs ಶ್ರೀಲಂಕಾ: ಗುರುವಾರ, ನವೆಂಬರ್ 2 - ಮುಂಬೈ
ಭಾರತ vs ದಕ್ಷಿಣ ಆಫ್ರಿಕಾ: ಭಾನುವಾರ, ನವೆಂಬರ್ 5 - ಕೋಲ್ಕತ್ತಾ
ಭಾರತ vs ನೆದರ್ಲ್ಯಾಂಡ್ಸ್: ಶನಿವಾರ, ನವೆಂಬರ್ 11 - ಬೆಂಗಳೂರು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ