Virat Kohli video calls Anushka after scoring century: ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಶತಕ ಬಾರಿಸಿದ ನಂತರ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಗುರುವಾರ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡುತ್ತಿರುವುದು ಕಂಡುಬಂದಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ಮ್ಯಾಂಗೋ ಬಾಯ್ ಎಲ್ಲಿದ್ದೀಯಪ್ಪಾ..!” ಕೊಹ್ಲಿ ಶತಕ ಬಾರಿಸುತ್ತಿದ್ದಂತೆ ವೈರಲ್ ಆದ ಪೋಸ್ಟ್: ಯಾರಿದು Mango Boy?


ವಿರಾಟ್ ಮತ್ತು ಅನುಷ್ಕಾ ವೀಡಿಯೋ ಕಾಲ್‌ ನಲ್ಲಿ ಮಾತನಾಡುತ್ತಿರುವ ಹಲವಾರು ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.


ವಿರಾಟ್ ಅವರ ಶತಕ ಸಂಭ್ರಮವನ್ನು ಅನುಷ್ಕಾ ಕೊಂಡಾಡಿದ್ದು, ಪತ್ನಿಯ ಸ್ಪೋಟಕ ಬ್ಯಾಟಿಂಗ್’ನ್ನು ಹೊಗಳಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಸ್ಪೋರಿ ಶೇರ್ ಮಾಡಿರುವ ಅನುಷ್ಕಾ, ಕೊಹ್ಲಿ ಫೋಟೋಗಳನ್ನು ಕೊಲಾಜ್ ಮಾಡಿ “What A Innings” ಎಂದು  ಬರೆದಿದ್ದಾರೆ.


RCB ಪ್ಲೇ-ಆಫ್ ಕನಸಿಗೆ ಟರ್ನಿಂಗ್ ಪಾಯಿಂಟ್ ನೀಡಿದ್ದು ಆ ‘ಬಾಲ್’: ಸ್ಪೋಟಕ ಇನ್ನಿಂಗ್ಸ್ ಶುರುವಾಗಿದ್ದೇ ಅಲ್ಲಿಂದ!


ಈ ಪಂದ್ಯದಲ್ಲಿ ಕೊಹ್ಲಿ ವಿಶ್ವದಾಖಲೆಯನ್ನೂ ಮಾಡಿದ್ದಾರೆ. ಟಿ20 ಕ್ರಿಕೆಟ್‌ ನಲ್ಲಿ ತಂಡದೊಂದಿಗೆ ಆಡುವಾಗ 7500 ರನ್ ಪೂರೈಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಕೊಹ್ಲಿ. ಇಷ್ಟೇ ಅಲ್ಲ, ವಿರಾಟ್ ಐಪಿಎಲ್‌ ನಲ್ಲಿ ಆರನೇ ಬಾರಿಗೆ 500 ಕ್ಕೂ ಹೆಚ್ಚು ವೈಯಕ್ತಿಕ ಸ್ಕೋರ್ ಮಾಡಿದ್ದಾರೆ ಮತ್ತು ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರರಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ