Virat Kohli-Rishab Pant Relay Catch Video: ಇಂದು ಬಾಂಗ್ಲಾ ಮತ್ತು ಭಾರತ ನಡುವಿನ ಎರಡನೇ ಇನಿಂಗ್ಸ್‌ನ 47ನೇ ಓವರ್‌ನಲ್ಲಿ ರಿಷಬ್‌ ಪಂತ್‌ ಮತ್ತು ವಿರಾಟ್‌ ಕೊಹ್ಲಿ ಜೊತೆಯಾಗಿ ಅದ್ಭುತ ಸಾಧನೆ ಮಾಡಿದ್ದರಿಂದ ಇಂದು ವಿಕೆಟ್‌ಕೀಪಿಂಗ್‌ ಬಗ್ಗೆ ಪ್ರಸ್ತಾಪಿಸಲೇ ಬೇಕು. ಟೀಂ ಇಂಡಿಯಾಗೆ ಅಗತ್ಯವಾಗಿ ಬೇಕಾಗಿದ್ದ ಕ್ಯಾಚ್ ಅನ್ನು ರಿಷಭ್ ಪಡೆಸಿದ್ದಾರೆ. ಈ ಕ್ಯಾಚ್ ಹಿಡಿಯುವುದು ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ವಿರಾಟ್ ಕೊಹ್ಲಿ ಕೈಯಿಂದ ಚೆಂಡು ನೆಲಕ್ಕೆ ಬೀಳುವ ಹಂತದಲ್ಲಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Ranji Tropgy 2022: 1ನೇ ಇನ್ನಿಂಗ್ಸ್ ನಲ್ಲಿ 389 ರನ್, 2ನೇ ಇನ್ನಿಂಗ್ಸ್ ನಲ್ಲಿ 25ಕ್ಕೆ ಆಲೌಟ್: ಮುಜುಗರದ ದಾಖಲೆ ನಿರ್ಮಿಸಿದ ಈ ಟೀಂ


ಬಾಂಗ್ಲಾದೇಶದ ಎರಡನೇ ಇನಿಂಗ್ಸ್‌ನ 47ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. 513 ರನ್‌ಗಳ ಬೃಹತ್ ಗುರಿಗೆ ಉತ್ತರವಾಗಿ ಆರಂಭಿಕರಿಬ್ಬರೂ ಕ್ರೀಸ್‌ನಲ್ಲಿ ಹೋರಾಡಲು ಸಜ್ಜಾಗಿದ್ದರು. ಭಾರತ ತಂಡ ಟೆನ್ಷನ್‌ನಲ್ಲಿತ್ತು. ಮೊದಲ ವಿಕೆಟ್‌ ಪಡೆಯಲಿ ಟೀಂ ಇಂಡಿಯಾ ಹೋರಾಡುತ್ತಿತ್ತು. ನಜ್ಮುಲ್ ಹಸನ್ ಶಾಂಟೊ ಮತ್ತು ಜಾಕಿರ್ ಹಸನ್ ಇಬ್ಬರೂ ಅರ್ಧಶತಕ ಗಳಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಉಮೇಶ್ ಯಾದವ್ ಉತ್ತಮ ಎಸೆತದಲ್ಲಿ ಶಾಂಟೊ ಅವರನ್ನು ಬಲೆಗೆ ಬೀಳಿಸಿದರು.


Team India : ಮೂರನೇ ಬಾರಿಗೆ ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡ ಟೀಂ ಇಂಡಿಯಾ!


ಬಾಂಗ್ಲಾದೇಶದ ಆರಂಭಿಕರು ಉತ್ತಮ ಆರಂಭ ನೀಡಿದ್ದರೂ, 513 ರನ್‌ಗಳ ಗುರಿಯನ್ನು ತಲುಪುವುದು ಇನ್ನೂ ಕಷ್ಟಕರವಾಗಿದೆ. ಶಾಂಟೊ ಅವರ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿಗಳನ್ನು ಬಾರಿಸಿದ್ದಾರೆ. ಜಾಕಿರ್ ಹಾಸನ್ ಚೆನ್ನಾಗಿ ಆಡಿದ್ದಾರೆ. ಇವರಿಬ್ಬರ ಶತಕದ ಜೊತೆಯಾಟ ಭಾರತದ ವಿರುದ್ಧ ಬಾಂಗ್ಲಾದೇಶದ ಮೊದಲ ವಿಕೆಟ್‌ಗೆ ಅತ್ಯಧಿಕ ಜೊತೆಯಾಟವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲೂ ರಿಷಬ್ ಪಂತ್ ಶಾಂಟೊ ಅವರ ಅದ್ಭುತ ಕ್ಯಾಚ್ ಪಡೆದರು. ಆಗ ಬೌಲರ್ ಮೊಹಮ್ಮದ್ ಸಿರಾಜ್ ಆಗಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.