ನವದೆಹಲಿ:  ಇತ್ತೀಚಿಗೆ ಆಟಗಾರರ ವೇತನ ಹೆಚ್ಚಳ ಕುರಿತು ಧ್ವನಿ ಎತ್ತಿದ್ದ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರೀಯವರ ಮಾತಿಗೆ ಕೊನೆಗೂ ಮನ್ನಣೆ ಸಿಕ್ಕಿದೆ. ಅದಕ್ಕೆ ಪೂರಕವಾಗಿ ಸುಪ್ರಿಂಕೋರ್ಟ್ ನೇಮಕ ಮಾಡಿದ್ದ ಸಮಿತಿಯು ಸದ್ಯದಲ್ಲೇ ತನ್ನ ವರದಿಯನ್ನು ಬಿಸಿಸಿಐಗೆ ಸಲ್ಲಿಸಲಿದ್ದು ಅದರ ಅಣತಿಯಂತೆ ಆಟಗಾರರ ಸಂಬಳದಲ್ಲಿ ಶೇಕಡಾ ನೂರರಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಒಂದು ವೇಳೆ ಸುಪ್ರಿಂ ಕೋರ್ಟ್ನ ಈ ವರದಿಯನ್ನು ಬಿಸಿಸಿಐ ಜಾರಿಗೆ ತಂದಿದ್ದೆ ಆದಲ್ಲಿ  ವಿರಾಟ್ ಕೊಹ್ಲಿಯಂತಹ ಆಟಗಾರರು 10 ಕೋಟಿ ರೂಪಾಯಿಗಳ ವೇತನವನ್ನು ಪಡೆಯಲಿದ್ದಾರೆ. ಇನ್ನು ದೇಶಿಯ ಹಂತದ ಟಾಪ್ ಆಟಗಾರರು 30 ಲಕ್ಷ ರೂಪಾಯಿಗಳವರೆಗೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಬಿಸಿಸಿಐನ ಬಜೆಟ್ ಗೆ  200 ಕೋಟಿ ರೂಪಾಯಿ ಹೆಚ್ಚುವರಿಯಾಗಲಿದೆ ಎಂದು ತಿಳಿದುಬಂದಿದೆ. ಇದರಿಂದ ಸದ್ಯ 180 ಕೋಟಿ ಇರುವ ವೇತನದ ಬಜೆಟ್ 380 ಕೋಟಿಗೆ ಏರಿಕೆಯಾಗಲಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಟೈಮ್ಸ್ ಆಫ್ ಇಂಡಿಯಾದ ವರದಿಯಂತೆ  ಬಿಸಿಸಿಐ ನ  ಶೇಕಡಾ 26 ರ  ವಾರ್ಷಿಕ ಆರ್ಥಿಕ ವರಮಾನದಲ್ಲಿ  ಅಂತಾರಾಷ್ಟ್ರೀಯ ಆಟಗಾರಿಗೆ 13%, ದೇಶಿಯ ಆಟಗಾರಿಗೆ 10.6, ಮಹಿಳೆ ಮತ್ತು ಕಿರಿಯ ಆಟಗಾರರಿಗೆ 2.4 ರಂತೆ ವಿಭಾಗಿಸಲಾಗುತ್ತದೆ. ಇತ್ತೀಚೆಗೆ ಭಾರತ ತಂಡದ ಮಾಜಿ ನಾಯಕ  ಸೌರವ್ ಗಂಗೂಲಿಯೂ ಕೂಡ ಆಟಗಾರರ ವೇತನ ಹೆಚ್ಚಳದ ವಿಷಯವನ್ನು ಬಿಸಿಸಿಐನ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದ್ದರು.