ಫೀಲ್ಡ್ನಲ್ಲಿ ಎದುರಾಳಿಗಳ ಬೆವರಿಳಿಸುವ ವಿರಾಟ್ ಕೊಹ್ಲಿ ʻಈʼ ಒಂದು ಕೆಲಸ ಮಾಡಲು ಹೆದರುವುದು ಏಕೆ ಗೊತ್ತಾ..? ಕಾರಣ ಅನುಷ್ಕಾ ಶರ್ಮಾ
Virat Kohli: ವಿರಾಟ್ ಕೊಹ್ಲಿ ಆಟಗಾರನಾಗಿ-ನಾಯಕನಾಗಿ ಕ್ರಿಕೆಟಿನ ಎಲ್ಲಾ ಫಾರಂಗಳಲ್ಲೂ ಬೆಸ್ಟ್ ಪರ್ಫಾರ್ಮೆನ್ಸ್. ಆದ್ರೆ ಇಷ್ಟೆಲ್ಲಾ ಆಗಿದ್ರೂ ತನಗಿಷ್ಟ ಬಂದಾಗ ಗಡ್ಡ ಬಿಡೋಕೆ, ಬೇಡ ಅನಿಸಿದಾಗ ಬೋಳಿಸೋಕೆ ಆಗ್ತಾಇಲ್ವಂತೆ. ಸದ್ಯ ವಿರಾಟ್ ಕೊಹ್ಲಿ ಪರಿಸ್ಥಿತಿ ಹೇಗಿದೆ ಅಂದ್ರೆ ಎಷ್ಟೇ ಕೆರೆತ ಬಂದ್ರೂ ಸಹಿಸ್ಕೊಬೇಕು!
Virat Kohli Beard: ಕ್ರೀಸ್ ಗೆ ಎಂಟ್ರಿ ಆಗ್ತಿದ್ದಂತೆ ಅಬ್ಬರಿಸುವ, ಬ್ಯಾಟ್ ಬೀಸಿದರೆ ಸಾಕು ಬೌಂಡರಿ, ಸಿಕ್ಸರ್ ಬಾರಿಸುವ, ಎಂಥದೇ ಪರಿಸ್ಥಿತಿಯಲ್ಲೂ ರನ್ ಗಳಿಸುವ ಗಟ್ಟಿಗ, ದಿಗ್ಗಜ ಆಟಗಾರ ರನ್ ಮೆಷಿನ್ ಖ್ಯಾತಿ ಹೊಂದಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ. ಅವರದು ಆಟಗಾರನಾಗಿ-ನಾಯಕನಾಗಿ ಕ್ರಿಕೆಟಿನ ಎಲ್ಲಾ ಫಾರಂಗಳಲ್ಲೂ ಬೆಸ್ಟ್ ಪರ್ಫಾರ್ಮೆನ್ಸ್. ಆದ್ರೆ ಇಷ್ಟೆಲ್ಲಾ ಆಗಿದ್ರೂ ತನಗಿಷ್ಟ ಬಂದಾಗ ಗಡ್ಡ ಬಿಡೋಕೆ, ಬೇಡ ಅನಿಸಿದಾಗ ಬೋಳಿಸೋಕೆ ಆಗ್ತಾಇಲ್ವಂತೆ!
ಸದ್ಯ ವಿರಾಟ್ ಕೊಹ್ಲಿ ಪರಿಸ್ಥಿತಿ ಹೇಗಿದೆ ಅಂದ್ರೆ ಎಷ್ಟೇ ಕೆರೆತ ಬಂದ್ರೂ ಸಹಿಸ್ಕೊಬೇಕು. ಎಷ್ಟೇ ಕೆಟ್ಟದಾಗಿ ಕಂಡ್ರೂ ತೆಪ್ಪಗಿರಬೇಕು. ಶೇವ್ ಮಾತ್ರ ಮಾಡ್ಕೊಳಂಗಿಲ್ಲ. ಏಕೆಂದ್ರೆ ಹೆಂಡತಿ ಅನುಷ್ಕಾ ಶರ್ಮಾ ಬಿಡಬೇಕಲ್ಲ! ಅನುಷ್ಕಾ ಶರ್ಮಾ ಬಿಡ್ತಾ ಇಲ್ಲ ಅಂದ್ರೆ ರೊಮ್ಯಾಂಟಿಕ್ ಮೂಡ್ ಗೆ ಹೊರಟೋಗ್ಬೇಡಿ. ರೋಮ್ಯಾನ್ಸ್ ಟೈಮಲ್ಲಿ ಗಡ್ಡ ಚುಚ್ಚುತ್ತೆ ಅಂತಾ ಅನುಷ್ಕಾ ಶರ್ಮಾ ಏನು ಅಡ್ಡಿ ಮಾಡಿಲ್ಲ. ಮಾಡಿದ್ರೂ ನಮಗೆ ಗೊತ್ತಾಗಿಲ್ಲ...
ಇದನ್ನೂ ಓದಿ- ಅತೀ ಸಣ್ಣ ವಯಸ್ಸಿಗೆ ದಾಖಲೆ ಸೃಷ್ಟಿಸಿದ ಕೊಹ್ಲಿ ಮಗ..! ಗೂಗಲ್ ಟ್ರೆಂಡಿಂಗ್ನಲ್ಲಿ ಅಕಾಯ್ ಹೆಸರು
ನಮಗೆ ಗೊತ್ತಾಗಿರೋ ಮ್ಯಾಟ್ರೇ ಬೇರೇ. ಪಾಪ ಅನುಷ್ಕಾ ಶರ್ಮಾ ಮೇಲೆ ಆರೋಪ ಮಾಡ್ಬೇಡಿ. ವಿಷಯ ಏನೂ ಅಂದ್ರೆ ನೀವು ಅನುಷ್ಕಾ ಶರ್ಮಾ ಅವರ ‘ರಬ್ ನೇ ಬನಾದಿ ಜೋಡಿ’ ಸಿನಿಮಾ ನೋಡಿದ್ದೀರಾ? ಅದರಲ್ಲಿ ಗಡ್ಡ-ಮೀಸೆ ಬೋಳಿಸಿದ ಗಂಡ ಶಾರುಖ್ ಖಾನ್ ಅವರನ್ನ ಅನುಷ್ಕಾ ಶರ್ಮಾ ಗುರುತೇ ಹಿಡಿಯಲ್ಲ. ಅದೇ ರೀತಿ ನನ್ನನ್ನು ಕಂಡು ಹಿಡಿದೇ ಇದ್ರೆ ಕಷ್ಟ ಅಂತಾ ವಿರಾಟ್ ಕೊಹ್ಲಿ ಕ್ಲೀನ್ ಶೇವ್ ಮಾಡ್ಕೊಳಲ್ವಂತೆ!
ಇದನ್ನೂ ಓದಿ- RCB Captain: ವಿರಾಟ್ ಅಲ್ಲ.. ಈತನೇ ಬೆಂಗಳೂರು ತಂಡದ ಕ್ಯಾಪ್ಟನ್! ಈ ಸಲ ಕಪ್..?
ಈ ಸಿಂಪಲ್ ವಿಷಯವನ್ನ ವಿರಾಟ್ ಕೊಹ್ಲಿ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಅದ್ಭುತವಾಗಿ ಹೇಳಿದ್ರು. ಜೊತೆಯಲ್ಲಿ ಅನುಷ್ಕಾ ಶರ್ಮಾ ಕೂಡ ಇದ್ರು. ಅವರೇನೂ ಡಿಸ್ಪ್ಯೂಟ್ ಮಾಡಲಿಲ್ಲ. ಅವರೇ ಡಿಸ್ಪ್ಯೂಟ್ ಮಾಡಿಲ್ಲ ಅಂದ್ರೆ ನಾವು-ನೀವು ಯಾರು. ನಿಜವಾಗ್ಲೂ ವಿರಾಟ್ ಕೊಹ್ಲಿ ಕ್ಲೀನ್ ಶೇವ್ ಮಾಡದಿರಲು ಅದೇ ಕಾರಣ ಅಂತಾ ಒಪ್ಪಿಕೊಂಡುಬಿಡೋಣ. ಉಳಿದದ್ದು ಅನುಷ್ಕಾ ಶರ್ಮಾಗೆ ಬಿಟ್ಟದ್ದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.