ವಿರಾಟ್ ಕೊಹ್ಲಿ ಅಪ್ರಬುದ್ಧ, ಅದಕ್ಕೆ ನಿಂದನೆ ಸಹಿಸುವುದಿಲ್ಲ - ಕಾಗಿಸೋ ರಬಾಡಾ
ವಿಶ್ವಕಪ್ ಟೂರ್ನಿ ಪ್ರಾರಂಭವಾಗಿದ್ದು, ಭಾರತ ಇದುವರೆಗೆ ಯಾವುದೇ ಒಂದು ಪಂದ್ಯವನ್ನು ಆಡಿಲ್ಲ ಆಗಲೇ ಆಟಗಾರರ ನಡುವೆ ಮಾತಿನ ಯುದ್ದ ಪ್ರಾರಂಭವಾಗಿದೆ.ಇದಕ್ಕೆ ಈಗ ದಕ್ಷಿಣ ಆಫ್ರಿಕಾದ ಆಟಗಾರ ಕಾಗಿಸೋ ರಬಾಡಾ ಭಾರತ ತಂಡದ ನಾಯಕ ಕೊಹ್ಲಿ ಕುರಿತಾಗಿ ಹೇಳಿರುವ ಹೇಳಿಕೆಯೇ ಸಾಕ್ಷಿ.
ನವದೆಹಲಿ: ವಿಶ್ವಕಪ್ ಟೂರ್ನಿ ಪ್ರಾರಂಭವಾಗಿದ್ದು, ಭಾರತ ಇದುವರೆಗೆ ಯಾವುದೇ ಒಂದು ಪಂದ್ಯವನ್ನು ಆಡಿಲ್ಲ ಆಗಲೇ ಆಟಗಾರರ ನಡುವೆ ಮಾತಿನ ಯುದ್ದ ಪ್ರಾರಂಭವಾಗಿದೆ.ಇದಕ್ಕೆ ಈಗ ದಕ್ಷಿಣ ಆಫ್ರಿಕಾದ ಆಟಗಾರ ಕಾಗಿಸೋ ರಬಾಡಾ ಭಾರತ ತಂಡದ ನಾಯಕ ಕೊಹ್ಲಿ ಕುರಿತಾಗಿ ಹೇಳಿರುವ ಹೇಳಿಕೆಯೇ ಸಾಕ್ಷಿ.
ಜೂನ್ 5 ರಂದು ಭಾರತ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಈಗ ರಬಾಡ ಕೊಹ್ಲಿ ನೀಡಿರುವ ಹೇಳಿಕೆಯಿಂದಾಗಿ ಈ ಪಂದ್ಯ ಇನ್ನು ಕಾವೇರುವ ಸಾಧ್ಯತೆ ಇದೆ. "ನಾನು ಈಗ ಗೇಮ್ ಪ್ಲಾನ್ ಬಗ್ಗೆ ಅದರಲ್ಲೂ ವಿರಾಟ್ ಕೊಹ್ಲಿ ಬಗ್ಗೆ ಚಿಂತಿಸುತ್ತಿದ್ದೇನೆ. ಅವರು ಈ ಹಿಂದೆ ನನ್ನ ಎಸೆತವನ್ನು ಬೌಂಡರಿ ಕಳಿಸಿ ನಂತರ ಏನೋ ಉಸುರಿದರು ಇದಕ್ಕೆ ನಾನು ತಕ್ಷಣ ಪ್ರತಿಕ್ರಿಯಿಸಿದಾಗ ಅವರು ಕೋಪಗೊಂಡರು. ಹೀಗಾಗಿ ಅವರನ್ನು ಅರಿತುಕೊಳ್ಳುವುದೇ ಕಷ್ಟವಾಗಿದೆ.
" ಹೀಗೆ ಮಾಡುವುದರ ಮೂಲಕ ಅವರು ಮುಂದೆವರೆಯಲು ಪ್ರಯತ್ನಿಸುತ್ತಾರೆ. ಆದರೆ ಈ ನಡೆ ನನಗೆ ಅಪ್ರಬುದ್ಧರಂತೆ ಎನಿಸುತ್ತದೆ. ಅವರು ಉತ್ತಮ ಆಟಗಾರ, ಆದರೆ ನಿಂದನೆಗಳನ್ನು ಅವರು ಸಹಿಸುವುದಿಲ್ಲ " ಎಂದು ರಬಾಡಾ ಹೇಳಿದರು. ಈಗ ಕೊಹ್ಲಿ ಕುರಿತ ರಬಾಡಾ ಹೇಳಿಕೆ ಹಿನ್ನಲೆಯಲ್ಲಿ ಜೂನ್ 5 ರಂದು ನಡೆಯುವ ಪಂದ್ಯ ಈಗ ಸಾಕಷ್ಟು ಕುತೂಹಲ ಕೆರಳಿಸಿದೆ.