Virat Kohli statement about MS Dhoni retirement: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ ಸಿ ಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿ ಎಸ್‌ ಕೆ) ಇಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಹತ್ವದ ಪಂದ್ಯವನ್ನಾಡಲಿದ್ದು, ಐಪಿಎಲ್ 2024 ಪ್ಲೇಆಫ್ ಸ್ಥಾನಕ್ಕಾಗಿ ಹೋರಾಡಲಿವೆ. CSK 13 ಪಂದ್ಯಗಳಿಂದ 14 ಅಂಕ ಗಳಿಸಿ 4 ನೇ ಸ್ಥಾನದಲ್ಲಿದ್ದರೆ, RCB 12 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: RCB ನಾಯಕ ಫಾಫ್ ಡುಪ್ಲೆಸಿಸ್ ಪತ್ನಿ ಯಾರು ಗೊತ್ತಾ? ನಟಿ ಅನುಷ್ಕಾ ಶರ್ಮಾಗಿಂತಲೂ ಅಂದದಲ್ಲಿ ಒಂದು ಹೆಜ್ಜೆ ಮುಂದೆಯೇ ಈ ಅಪ್ಸರೆ


ಇಂದು ಬೆಂಗಳೂರಿನಲ್ಲಿ ಆರ್‌’ಸಿಬಿ ತಂಡವು ಸಿಎಸ್‌’ಕೆಯನ್ನು ಎದುರಿಸುತ್ತಿದ್ದು, ಭಾರತೀಯ ಕ್ರಿಕೆಟ್‌’ನ ಇಬ್ಬರು ಶ್ರೇಷ್ಠರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಐಪಿಎಲ್ ವೇದಿಕೆಯಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ.


ಅಂದಹಾಗೆ ಇದು ಧೋನಿಯ ಕೊನೆಯ ಐಪಿಎಲ್ ಪಂದ್ಯವಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಕೊಹ್ಲಿಯೂ ಹೇಳಿಕೆಯೊಂದನ್ನು ನೀಡಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.


"ಮಹಿ ಭಾಯ್ ಮತ್ತು ನಾನು ಮತ್ತೆ ಆಡುತ್ತೇವೆ. ಬಹುಶಃ ಕೊನೆಯ ಬಾರಿಗೆ… ಯಾರಿಗೆ ಗೊತ್ತು! ಇದು ಅಭಿಮಾನಿಗಳಿಗೆ ಉತ್ತಮ ಕ್ಷಣ. ಅನೇಕ ವರ್ಷ ಟೀಂ ಇಂಡಿಯಾ ಪರ ಒಟ್ಟಾಗಿ ಆಡಿದ್ದೇವೆ. ಆ ಸಂದರ್ಭದಲ್ಲಿ ಎಷ್ಟು ಅದ್ಭುತ ಫಿನಿಶಿಂಗ್ ಮಾಡಿ, ಗೆಲುವು ತಂದುಕೊಟ್ಟಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ" ಎಂದು ಜಿಯೋ ಸಿನಿಮಾದ ಇನ್‌ಸೈಡ್ ಔಟ್ ಶೋನಲ್ಲಿ ಕೊಹ್ಲಿ ಹೇಳಿದ್ದಾರೆ.


ಇದನ್ನೂ ಓದಿ:  ಟೀಂ ಇಂಡಿಯಾಗೆ ಕೊಹ್ಲಿ ಸೆಲೆಕ್ಟ್ ಆಗಲು ಕಾರಣ ಈ ಇಬ್ಬರು ಸ್ಟಾರ್ ಕ್ರಿಕೆಟಿಗರು! ಅಂದು ಕೊಹ್ಲಿ ಹೆಸರು ಸೂಚಿಸಿದ ಆ ಶಕ್ತಿ ಯಾರು ಗೊತ್ತಾ?


ಇನ್ನು ಒಂದು ವೇಳೆ CSK ಪ್ಲೇ ಆಫ್ ಪ್ರವೇಶಿಸಿದರೆ, ಧೋನಿ ಇನ್ನೂ ಎರಡು ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆಯುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ