ಸೌರವ್ ಗಂಗೂಲಿ ದಾಖಲೆ ಹಿಂದಿಕ್ಕಿದ ವಿರಾಟ್ ಕೊಹ್ಲಿ
ಪೋರ್ಟ್ ಆಫ್ ಸ್ಪೇನ್‌ನಲ್ಲಿ ಭಾನುವಾರ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದ ವೇಳೆ ಕೊಹ್ಲಿ 42 ಏಕದಿನ ಶತಕವನ್ನು ಗಳಿಸಿದರು.
ನವದೆಹಲಿ: ಪೋರ್ಟ್ ಆಫ್ ಸ್ಪೇನ್‌ನಲ್ಲಿ ಭಾನುವಾರ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದ ವೇಳೆ ಕೊಹ್ಲಿ 42 ಏಕದಿನ ಶತಕವನ್ನು ಗಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು 50 ಓವರ್ ಗಳಲ್ಲಿ ವಿರಾಟ್ ಕೊಹ್ಲಿ (120) ಶತಕದ ನೆರವಿನಿಂದ 279 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ವೆಸ್ಟ್ ಇಂಡೀಸ್ ತಂಡವು 210 ರನ್ ಗಳಿಗೆ ಆಲೌಟ್ ಆಯಿತು. ಈಗ ಭಾರತ ಸರಣಿಯಲ್ಲಿ ೧-೦ ಅಂತರದಲ್ಲಿ ಮುಂದಿದೆ.
ವಿಶೇಷವೆಂದರೆ ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಮಾಡಿದರು. 42 ನೇ ಶತಕದ ನೆರವಿನಿಂದ ಈಗ ಅವರು ಏಕದಿನ ಕ್ರಿಕೆಟ್ ನಲ್ಲಿ ಸೌರವ್ ಗಂಗೂಲಿಯವರನ್ನು ಹಿಂದಿಕ್ಕಿದ್ದಾರೆ. ಗಂಗೂಲಿ 11,363 ರನ್ ಗಳಿಸಿದ್ದಾರೆ. ಈ ದಾಖಲೆಯನ್ನು ಕೊಹ್ಲಿ ಮುರಿಯಲು ಕೇವಲ 238 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ.
ಈಗ ಇದಕ್ಕೆ ಟ್ವೀಟ್ ಮಾಡಿರುವ ಸೌರವ್ ಗಂಗೂಲಿ ' ಏಕದಿನ ಕ್ರಿಕೆಟ್ ನಲ್ಲಿ ಕೊಹ್ಲಿಯಿಂದ ಮತ್ತೊಂದು ಮಾಸ್ಟರ್ ಕ್ಲಾಸ್...ಎಂಥ ಅದ್ಬುತ ಆಟಗಾರ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈಗ ವಿರಾಟ್ ಕೊಹ್ಲಿ 42 ನೇ ಶತಕ ಗಳಿಸುವುದರ ಮೂಲಕ ಈಗ ಸಚಿನ್ ದಾಖಲೆ ಸರಿಗಟ್ಟಲು ವಿರಾಟ್ ಗೆ ಕೇವಲ 7 ಶತಕಗಳ ಅಗತ್ಯವಿದೆ.