`ನೀವು ಕ್ಯಾನ್ಸರ್ ಗೆದ್ದ ನಂತರ ಮತ್ತೆ ಕ್ರಿಕೆಟ್ ಗೆ ಪುನರಾಗಮನ ಮಾಡಿದ್ದು, ನಿಜಕ್ಕೂ ಸ್ಫೂರ್ತಿದಾಯಕ`
ವಿರಾಟ್ ಕೊಹ್ಲಿಗೆ ಒಂದು ಜೋಡಿ ಚಿನ್ನದ ಬೂಟುಗಳನ್ನು ಉಡುಗೊರೆ ನೀಡುವ ಮೂಲಕ ಈಗ ಮಾಜಿ ಆಟಗಾರ ಯುವರಾಜ್ ಸಿಂಗ್ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ ಈಗ ತಮ್ಮ ಮಾಜಿ ಸಹ ಆಟಗಾರನಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ, ಅಷ್ಟೇ ಅಲ್ಲದೆ ಜೀವನ ಎಲ್ಲಾ ಕ್ಷೇತ್ರಗಳಲ್ಲಿ ಯುವರಾಜ್ ಸಿಂಗ್ (Yuvraj Singh) ಸ್ಪೂರ್ತಿದಾಯಕ ಎಂದು ಅವರು ಕೊಂಡಾಡಿದ್ದಾರೆ.
ನವದೆಹಲಿ:ವಿರಾಟ್ ಕೊಹ್ಲಿಗೆ ಒಂದು ಜೋಡಿ ಚಿನ್ನದ ಬೂಟುಗಳನ್ನು ಉಡುಗೊರೆ ನೀಡುವ ಮೂಲಕ ಈಗ ಮಾಜಿ ಆಟಗಾರ ಯುವರಾಜ್ ಸಿಂಗ್ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ ಈಗ ತಮ್ಮ ಮಾಜಿ ಸಹ ಆಟಗಾರನಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ, ಅಷ್ಟೇ ಅಲ್ಲದೆ ಜೀವನ ಎಲ್ಲಾ ಕ್ಷೇತ್ರಗಳಲ್ಲಿ ಯುವರಾಜ್ ಸಿಂಗ್ (Yuvraj Singh) ಸ್ಪೂರ್ತಿದಾಯಕ ಎಂದು ಅವರು ಕೊಂಡಾಡಿದ್ದಾರೆ.
"ಈ ಅದ್ಬುತ ಉಡುಗೊರಗಾಗಿ ಧನ್ಯವಾದಗಳು ಯುವಿ ಪಾ. ನನ್ನ ಕ್ರಿಕೆಟ್ ವೃತ್ತಿ ಜೀವನವು ಆರಂಭವಾದ ಮೊದಲ ದಿನದಿಂದಲೂ ಬಂದಿರುವ ವ್ಯಕ್ತಿಯಿಂದ ಬಂದಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ.ನಿಮ್ಮ ಜೀವನ ಮತ್ತು ಕ್ಯಾನ್ಸರ್‌ನಿಂದ ನಿಮ್ಮ ಪುನರಾಗಮನವು ಕ್ರಿಕೆಟ್‌ಗೆ ಮಾತ್ರವಲ್ಲದೆ ಜೀವನದ ಎಲ್ಲಾ ಹಂತಗಳ ಜನರಿಗೆ ಯಾವಾಗಲೂ ಸ್ಫೂರ್ತಿಯಾಗಿದೆ" ಎಂದು ಕೊಹ್ಲಿ ತಮ್ಮ ನೆಚ್ಚಿನ ಸಹ ಆಟಗಾರನಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಇದನ್ನೂ ಓದಿ: Surya Kumar Yadav:ಟೀಮ್ ಇಂಡಿಯಾಗೆ ಕೆಟ್ಟ ಸುದ್ದಿ, ಶ್ರೀಲಂಕಾ ವಿರುದ್ಧದ T20 ಸರಣಿಯಿಂದ ಈ ಆಟಗಾರ ಔಟ್
ಯುವರಾಜ್ ಮತ್ತು ಕೊಹ್ಲಿ 2008 ರಿಂದ 2017 ರವರೆಗೆ ಇಬ್ಬರು ಭಾರತ ತಂಡದ ಸಹ ಆಟಗಾರರಾಗಿದ್ದರು. ಯುವರಾಜ್ ಮತ್ತು ಕೊಹ್ಲಿ 2011 ರ ವಿಶ್ವಕಪ್ ಭಾರತದ ವಿಜಯದ ಅಭಿಯಾನದ ಭಾಗವಾಗಿದ್ದರು, ಅಲ್ಲಿ ಎಡಗೈ ಬ್ಯಾಟ್ಸಮನ್ ಯುವರಾಜ್ ಸಿಂಗ್ ಅವರು 362 ರನ್ ಜೊತೆಗೆ15 ವಿಕೆಟ್‌ಗಳನ್ನು ಕಬಳಿಸಿದ್ದಕ್ಕಾಗಿ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು. 2017 ರ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊಹ್ಲಿ ನಾಯಕತ್ವದಲ್ಲಿ ಯುವರಾಜ್ ಸಿಂಗ್ ಅವರು ಭಾರತ ತಂಡದ ಪರವಾಗಿ ಕೊನೆಯ ಪಂದ್ಯವನ್ನು ಆಡಿದ್ದರು.
"ವಿರಾಟ್, ನೀವು ಒಬ್ಬ ಕ್ರಿಕೆಟಿಗನಾಗಿ ಮತ್ತು ಒಬ್ಬ ವ್ಯಕ್ತಿಯಾಗಿ ಬೆಳೆಯುತ್ತಿರುವುದನ್ನು ನಾನು ನೋಡಿದ್ದೇನೆ. ಭಾರತೀಯ ಕ್ರಿಕೆಟ್‌ನ ದಂತಕಥೆಗಳೊಂದಿಗೆ ಆಡುತ್ತಿದ್ದ ಆ ಚಿಕ್ಕ ಹುಡುಗನಿಂದ ಈಗ ನೀವೇ ಹೊಸ ಪೀಳಿಗೆಗೆ ದಂತಕಥೆಯಾಗಿ ಪರಿವರ್ತನೆಯಾಗಿದ್ದೀರಿ" ಎಂದು ಯುವರಾಜ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Ind vs SL:ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾ ಪ್ರಕಟ; ಬಲಿಷ್ಠ ಆಟಗಾರನಿಗೆ ಸಿಗದ ಅವಕಾಶ
"ಕ್ಷೇತ್ರದಲ್ಲಿನ ನಿಮ್ಮ ಶಿಸ್ತು ಮತ್ತು ಉತ್ಸಾಹ ಮತ್ತು ಕ್ರೀಡೆಯಲ್ಲಿನ ಸಮರ್ಪಣೆ ಈ ದೇಶದ ಪ್ರತಿ ಚಿಕ್ಕ ಮಗುವಿಗೆ ಬ್ಯಾಟ್ ಎತ್ತಲು ಮತ್ತು ಮುಂದೊಂದು ದಿನ ನೀಲಿ ಜೆರ್ಸಿಯನ್ನು ಹಾಕುವ ಕನಸು ಕಾಣಲು ಪ್ರೇರೇಪಿಸುತ್ತದೆ.ನೀವು ಪ್ರತಿ ವರ್ಷ ನಿಮ್ಮ ಕ್ರಿಕೆಟ್ ಮಟ್ಟವನ್ನು ಹೆಚ್ಚಿಸಿದ್ದೀರಿ ಮತ್ತು ತುಂಬಾ ಸಾಧಿಸಿದ್ದೀರಿ. ಈಗಾಗಲೇ ಈ ಅದ್ಭುತ ಆಟದಲ್ಲಿ ನಾನು ನಿಮ್ಮ ವೃತ್ತಿಜೀವನದಲ್ಲಿ ಈ ಹೊಸ ಅಧ್ಯಾಯವನ್ನು ಪ್ರಾರಂಭಿಸುವುದನ್ನು ವೀಕ್ಷಿಸಲು ನನಗೆ ಇನ್ನಷ್ಟು ಉತ್ಸುಕನಾಗಿದ್ದೇನೆ.ನೀವು ದಂತಕಥೆ ನಾಯಕ ಮತ್ತು ಅದ್ಭುತ ನಾಯಕರಾಗಿದ್ದಿರಿ.ನಿಮ್ಮ ಪ್ರಸಿದ್ಧ ರನ್ ಚೇಸ್‌ಗಳನ್ನು ನಾನು ನಿರೀಕ್ಷಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.
"ಒಬ್ಬ ಸಹ ಆಟಗಾರನಾಗಿ ಮತ್ತು ಹೆಚ್ಚು ಸ್ನೇಹಿತನಾಗಿ ನಿಮ್ಮೊಂದಿಗೆ ಬಾಂಧವ್ಯವನ್ನು ಹಂಚಿಕೊಂಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ರನ್ ಗಳಿಸುವುದು, ಜನರ ಕಾಲುಗಳನ್ನು ಎಳೆಯುವುದು, ಪಂಜಾಬಿ ಹಾಡುಗಳಿಗೆ ಜ್ಯಾಮ್ ಮಾಡುವುದು ಮತ್ತು ಕಪ್ಗಳನ್ನು ಗೆಲ್ಲುವುದು, ನಾವು ಎಲ್ಲವನ್ನೂ ಒಟ್ಟಿಗೆ ಮಾಡಿದ್ದೇವೆ. ಮೇರೆ ಲಿಯೇ ತು ಹಮೇಶಾ ಚೀಕು ರಹೇಗಾ ಔರ್ ದುನಿಯಾ ಕೆ ಲಿಯೇ ಕಿಂಗ್ ಕೊಹ್ಲಿ.ನಿಮ್ಮೊಳಗಿನ ಜ್ವಾಲೆ ಯಾವಾಗಲೂ ಉರಿಯುತ್ತಿರಲಿ, ನೀವೊಬ್ಬ ಸೂಪರ್‌ಸ್ಟಾರ್. ನಿಮಗಾಗಿ ವಿಶೇಷ ಗೋಲ್ಡನ್ ಬೂಟ್ ಇಲ್ಲಿದೆ. ದೇಶವನ್ನು ಹೆಮ್ಮೆ ಪಡುವಂತೆ ಮಾಡಿರೀ" ಎಂದು ಯುವರಾಜ್ ಸಿಂಗ್ ಕೊಹ್ಲಿ ಬಗ್ಗೆ ಮೆಚ್ಚುಗೆ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ