ODI ಮತ್ತು T20 ಕ್ರಿಕೆಟ್‌ನಲ್ಲಿ ಭಾರತದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದ  ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ T20 ಮತ್ತು ODI ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕ್ಯಾನ್ಸರ್ ಅನ್ನು ಸೋಲಿಸಿ ತಂಡಕ್ಕೆ ಮರಳಿದರೂ  ಯುವರಾಜ್ ಸಿಂಗ್ ಅವರ ಕ್ರಿಕೆಟ್ ವೃತ್ತಿಜೀವನವನ್ನು ಬೇಗನೆ ಅಂತ್ಯಗೊಳಿಸಬೇಕಾಯಿತು. 


COMMERCIAL BREAK
SCROLL TO CONTINUE READING

ಯುವರಾಜ್ ಸಿಂಗ್ ಕ್ರಿಕೆಟ್ ಬದುಕು ಅಷ್ಟು ಬೇಗ ಮುಗಿಯಲು ಕಾರಣನಾಗಿದ್ದು ವಿರಾಟ್ ಕೊಹ್ಲಿ ಎನ್ನುವ ವಿಚಾರವನ್ನು ಭಾರತೀಯ ತಂಡದ ಮಾಜಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ದೂಷಿಸಿದ್ದಾರೆ. 


ಇದನ್ನೂ ಓದಿ : ಧನಶ್ರೀ ಜೊತೆಗಿನ ವಿಚ್ಛೇದನ ವದಂತಿ ಬಗ್ಗೆ ಮೌನ ಮುರಿದ ಯಜುವೇಂದ್ರ ಚಹಾಲ್‌! ಸಂಚಲನ ಸೃಷ್ಟಿಸಿದ ಸ್ಟಾರ್‌ ಕ್ರಿಕೆಟಿಗನ ಪೋಸ್ಟ್


ಯುವರಾಜ್ ಕೆರಿಯರ್ ಅಂತ್ಯಗೊಳಿಸಿದ ಕೊಹ್ಲಿ!
2011 ರ ODI ವಿಶ್ವಕಪ್‌ನ ಪ್ರಶಸ್ತಿ ವಿಜೇತ ನಂತರ, ಯುವರಾಜ್ ಸಿಂಗ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಯುವರಾಜ್ ಸಿಂಗ್ ಕ್ಯಾನ್ಸರ್ ನಿಂದ ಚೇತರಿಸಿಕೊಂಡ ನಂತರ ಭಾರತ ತಂಡಕ್ಕೆ ಮರಳಿದ ಮೇಲೆ ಇಂಗ್ಲೆಂಡ್ ವಿರುದ್ಧದ ODI ಪಂದ್ಯದಲ್ಲಿ ಶತಕವನ್ನು ಗಳಿಸಿದರು. ಆದರೆ ಚಾಂಪಿಯನ್ಸ್ ಟ್ರೋಫಿ 2017 ರಲ್ಲಿ ಕಳಪೆ ಪ್ರದರ್ಶನದ ಕಾರಣ ಅವರನ್ನು ತಂಡದಿಂದ ಕೈಬಿಡಲಾಯಿತು. ಇದಾದ ನಂತರ ಅವರು 2019 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು.


ಮಾಜಿ ಕ್ರಿಕೆಟಿಗನ ಬಿಗ್ ಬಹಿರಂಗ : 
ಸಂದರ್ಶನವೊಂದರಲ್ಲಿ ಮಾತನಾಡಿದ ರಾಬಿನ್ ಉತ್ತಪ್ಪ, ಯುವಿ ಕ್ಯಾನ್ಸರ್ ಅನ್ನು ಸೋಲಿಸಿ, ಅಂತರರಾಷ್ಟ್ರೀಯ ತಂಡಕ್ಕೆ ಮರಳಲು ಪ್ರಯತ್ನಿಸುತ್ತಿದ್ದನು. ನಮ್ಮನ್ನು ಎರಡು ಬಾರಿ ವಿಶ್ವ ಚಾಂಪಿಯನ್ ಮಾಡುವಲ್ಲಿ ಆ ವ್ಯಕ್ತಿ ಪ್ರಮುಖ ಪಾತ್ರ ವಹಿಸಿದ್ದಾರೆ.ಆದರೆ ಟೀಂ ಇಂಡಿಯಾಗಾಗಿ ಯುವರಾಜ್ ಆಟಗಾರ ಕಷ್ಟಪಡುವುದನ್ನು ನೋಡಿದ ಮೇಲೂ ತಂಡದ ನಾಯಕರಾದ ವಿರಾಟ್ ಯುವರಾಜ್ ಸಿಂಗ್  ಶ್ವಾಸಕೋಶದ ಸಾಮರ್ಥ್ಯ ಕಡಿಮೆಯಾಗಿದೆ ಎಂದು ಹೇಳುತ್ತಾರೆ ಎಂದು ಬೇಸರ ಹೊರ ಹಾಕಿದ್ದಾರೆ.


ಆ ವ್ಯಕ್ತಿ ಭಾರತಕ್ಕಾಗಿ ಪಂದ್ಯಾವಳಿಗಳನ್ನು ಗೆದ್ದು ಕೊಟ್ಟಿದ್ದಾರೆ. ಕ್ಯಾನ್ಸರ್ ಎನ್ನುವ ಮಹಾಮಾರಿಯನ್ನು ಸೋಲಿಸಿ ಗೆದ್ದು ಬಂದಿದ್ದಾರೆ. ಯುವರಾಜ್ ಫಿಟ್ನೆಸ್ ಪರೀಕ್ಷೆಯಲ್ಲಿ ಅಂಕಗಳನ್ನು ಕಡಿತಗೊಳಿಸುವಂತೆ ಒತ್ತಾಯಿಸಿದ್ದರು. ಆದರೆ ತಂಡದ ಆಡಳಿತವು ಅವರಿಗೆ ಯಾವುದೇ ರಿಯಾಯಿತಿ ನೀಡಲು ಒಪ್ಪಲಿಲ್ಲ.  ಆದರೆ, ಇದಕ್ಕೂ ಮುನ್ನ ಅವರು ತಂಡ ಸೇರಲು ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು.


ಇದನ್ನೂ ಓದಿ : ಟೀಂ ಇಂಡಿಯಾಗೆ ಬಹುದೊಡ್ಡ ಆಘಾತ.. ಧಿಡೀರ್‌ ತಂಡದಿಂದ ಹೊರಬಿದ್ದ ಲೆಜೆಂಡ್‌ ಆಟಗಾರ!


ಎಲ್ಲವೂ ಕೊಹ್ಲಿ ಪ್ರಕಾರವೇ ನಡೆದಿದೆ : 
'ಯುವಿ ಎರಡು ಅಂಕಗಳನ್ನು ಕಡಿತಗೊಳಿಸುವಂತೆ ಮನವಿ ಮಾಡಿದಾಗ ಅದು ಅವರಿಗೆ ಸಿಗಲಿಲ್ಲ.ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನದ ನಂತರ ಅವರನ್ನು ಕೈಬಿಡಲಾಯಿತು. ಮತ್ತೆ ತಂಡದ ಆಯ್ಕೆ ವೇಳೆ ಅವರನ್ನು ಪರಿಗಣಿಸಲಿಲ್ಲ. ಆಗ ವಿರಾಟ್ ತಂಡದ ಕ್ಯಾಪ್ಟನ್ ಆಗಿದ್ದರು. ಅವರು ಮೈ ವೆ ಆರ್ ದಿ ಹೈ ವೆ ಎನ್ನುವಂತೆ ನಡೆದುಕೊಂಡರು ಎಂದು ಕಿಡಿ ಕಾರಿದ್ದಾರೆ. 


ನಾನು ವಿರಾಟ್ ನಾಯಕತ್ವದಲ್ಲಿ ಹೆಚ್ಚು ಆಡಿಲ್ಲ, ಆದರೆ ನಾಯಕನಾಗಿ ಅವರು ಮೈ ವೆ ಆರ್ ದಿ ಹೈ ವೆ   ಮಾದರಿಯ ನಾಯಕರಾಗಿದ್ದರು. ಇದು ಕೇವಲ ಫಲಿತಾಂಶಗಳ ಬಗ್ಗೆ ಮಾತ್ರ ಅಲ್, ತಂಡ ಮತ್ತು ತಂಡದ ಸಹ ಆಟಗಾರರೊಂದಿಗೆ ಕೂಡಾ ಹೀಗೆಯೇ ವರ್ತಿಸುತ್ತಿದ್ದುದ್ದು ಎಂದು ಹೇಳಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.