ನವದೆಹಲಿ: ಭಾನುವಾರ ಬೆಂಗಳೂರಿನಲ್ಲಿ ನಡೆದ ಮೂರನೇ ಮತ್ತು ಅಂತಿಮ ಟಿ 20 ಅಂತರರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಬ್ಯೂರನ್ ಹೆಂಡ್ರಿಕ್ಸ್ ಅವರೊಂದಿಗೆ ವಾಗ್ವಾದ ವಿಚಾರವಾಗಿ ಐಸಿಸಿ ಅವರಿಗೆ ಅವಗುಣ ಅಂಕವನ್ನು ನೀಡಿದೆ.


COMMERCIAL BREAK
SCROLL TO CONTINUE READING

ಮೂರನೇ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾದ ಆಟಗಾರನೊಂದಿಗೆ ಅನುಚಿತವಾಗಿ ವರ್ತಿಸಿ ಐಸಿಸಿ ನಿಯಮ ಉಲ್ಲಂಘಿಸಿದ್ದಕ್ಕೆ ಅವರಿಗೆ ಅವಗುಣ ಅಂಕಗಳನ್ನು ನೀಡಲಾಗಿದೆ. ಇದನ್ನು ವಿರಾಟ್ ಕೊಹ್ಲಿ ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಐಸಿಸಿ ಬಿಡುಗಡೆ ಮಾಡಿದ ಪ್ರಕಟಣೆ ಪ್ರಕಾರ ಪಂದ್ಯದ ಸಮಯದಲ್ಲಿ ಅನುಚಿತ ವರ್ತನೆ ತೋರಿದಕ್ಕೆ ಈಗ ನಕಾರಾತ್ಮಕ ಅಂಕಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. 


2016 ರಲ್ಲಿ ಅವಗುಣ ಅಂಕ ವ್ಯವಸ್ಥೆಯನ್ನು ಪರಿಚಯಿಸಿದಾಗಿನಿಂದ ಇದು ವಿರಾಟ್ ಕೊಹ್ಲಿಯ ಮೂರನೆಯ ಅಪರಾಧವಾಗಿದೆ. 2018 ರ ಜನವರಿ 15 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಿಟೋರಿಯಾ ಟೆಸ್ಟ್ ಮತ್ತು 2019 ರ ಜೂನ್ 22 ರಂದು ನಡೆದ ವಿಶ್ವಕಪ್ ಪಂದ್ಯದ ಸಂದರ್ಭದಲ್ಲಿ ಅಫ್ಘಾನಿಸ್ತಾನ ವಿರುದ್ಧ ತಲಾ ಒಂದು ಅವಗುಣ ಅಂಕವನ್ನು ಕೊಹ್ಲಿ ಪಡೆದಿದ್ದರು.


ಮೊದಲ ಟಿ-20 ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ವಿರಾಟ್ ಕೊಹ್ಲಿ ಮೂರನೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇನ್ನೊಂದೆಡೆಗೆ ದಕ್ಷಣ ಆಫ್ರಿಕಾ ತಂಡದ ಆಟಗಾರ ಡಿಕಾಕ್ ಅವರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನಿಂದಾಗಿ ಭಾರತ ಸರಣಿ ಗೆಲ್ಲುವ ಕನಸನ್ನು ನುಚ್ಚುನೂರು ಮಾಡಿದರು. ದಕ್ಷಿಣ ಆಫ್ರಿಕಾ ತಂಡವು  ಟಿ-20 ಸರಣಿಯನ್ನು 1-1 ಅಂತರದಲ್ಲಿ ಸಮಗೊಳಿಸಿತು.