ಇಬ್ಬರು ದಿಗ್ಗಜರ ದಾಖಲೆ ಮುರಿಯಲು ವಿರಾಟ್ ಗೆ ಒಂದೇ ಹೆಜ್ಜೆ ಬಾಕಿ.. ಇನ್ನೊಂದು ಶತಕ ಕಲೆ ಹಾಕುತ್ತಾರಾ ಕಿಂಗ್ ಕೊಹ್ಲಿ ?
IND vs SA 2nd Test : ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ದಿನದ ಟೆಸ್ಟ್ ಪಂದ್ಯವು ಅಂತ್ಯಗೊಂಡಿದ್ದು, ಎರಡನೇ ಇನ್ನಿಂಗಸ್ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಮೊದಲನೇ ದಿದಂತ್ಯಕ್ಕೆ 36 ರನ್ ಗಳಿಂದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ವಿರಾಟ್ ಟೆಸ್ಟ್‌ನಲ್ಲಿ ತಮ್ಮ 30 ನೇ ಸೆಂಚೂರಿ ದಾಖಲಿಸಿದರೆ ದಿಗ್ಗಜರ ಹೆಸರಿಬಲ್ಲಿರುವ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಳ್ಳಬಹುದು.
Virat Kohli test record : ನ್ಯೂಲಾಂಡ್ ಮೈದಾನದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಆರಂಭವಾದ ಮೊದಲ ದಿನದ ಮೊದಲ ಸೆಷನ್‌ನಲ್ಲೇ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಕೇವಲ 55 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದು ಕೊಂಡಿದೆ.
ಭಾರತವು ತನ್ನ ಬ್ಯಾಟಿಂಗ್ ನ ಮೊದಲ ಇನ್ನಿಂಗ್ಸ್‌ನಲ್ಲಿ 153 ರನ್‌ಗಳಿಸಿ ಆಲ್ ಔಟ್ ಆಯಿತು. ಈ ಮೂಲಕ ಭಾರತವು 98 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಹಿಂದಿಕ್ಕದೆ. ಅಷ್ಟೇ ಅಲ್ಲದೇ ತಂಡದ ಪರ ವಿರಾಟ್ ಒಬ್ಬರೇ ಏಕಾಂಗಿ ಹೋರಾಟ ನಡೆಸಿ ತಂಡವು 150 ಗಡಿ ದಾಟಿಸಲು ನೆರವಾದರು. ಆದರೆ ಈ ಪಂದ್ಯದಲ್ಲಿ ಅರ್ಧಶತಕದ ಹೊಸ್ತಿಲಲ್ಲಿರುವಾಗಲೇ ವಿರಾಟ್ ಔಟ್ ಆಗಬೇಕಾಯಿತು. ವಿರಾಟ್ ತಮ್ಮ ವಿಕೆಟ್ ಒಪ್ಪಸಿದ ಬಳಿಕ ಯಾವೊಬ್ಬ ಆಟಗಾರನಿಂದಲು ಖಾತೆ ತೆರೆಯಲಾಗಲಿಲ್ಲ.
ಇದನ್ನು ಓದಿ-ಮೊದಲ ಸೆಷನ್’ನಲ್ಲಿ ಅಬ್ಬರಿಸಿದ ಭಾರತ… ಟೀಂ ಇಂಡಿಯಾಕೆ 56 ರನ್‌ಗಳ ಮುನ್ನಡೆ
ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ವಂಚಿತರಾದರೂ ಕೂಡ ವಿರಾಟ್‌ಗೆ ಈ ಪಂದ್ಯದಲ್ಲಿ ಇನ್ನೊಂದು ಹೊಸ ದಾಖಲೆ ಮಾಡಲು ಅವಕಾಶವಿದೆ. ವಿರಾಟ್ ಒಂದು ವೇಳೆ ಈ ಪಂದ್ಯದಲ್ಲಿ ಶತಕ ದಾಖಲಿಸಿದರೆ, ಇಬ್ಬರು ದಿಗ್ಗಜ ಆಟಗಾರರ ದಾಖಲೆ ಮುರಿಯಲಿದ್ಧಾರೆ. ವಿರಾಟ್ ಗೆ ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್‌ಗಳಿಗೆ ಔಟ್ ಆಗುವ ಮೂಲಕ ಶತಕ ವಂಚಿತರಾದರು, ಅಷ್ಟೇ ಅಲ್ಲದೆ ದಿಗ್ಗಜರ ರೆಕಾರ್ಡ್ ಅನ್ನು ಸರಿಗಟ್ಟುವ ಅವಕಾಶವನ್ನು ಕೈಚೆಲ್ಲಿದರು.
ಆದರು ವಿರಾಟ್‌ಗೆ ಈ ಪಂದ್ಯದಲ್ಲೇ ಆ ದಾಖಲೆ ಮಾಡಲು ಇನ್ನೂ ಅವಕಾಶವಿದೆ. ದಕ್ಷಿಣ ಆಫ್ರಿಕಾ ತಂಡವು ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಗುರಿಗಳನ್ನು ನೀಡಿದರೆ ಮಾತ್ರ ಅದು ಸಾಧ್ಯವಾಗುತ್ತದೆ. ಇಲ್ಲವಾದರೆ ವಿರಾಟ್ ಮುಂಬರುವ ಟೆಸ್ಟ್ ಪಂದ್ಯಕ್ಕಾಗಿ ಕಾಯಬೇಕಾಗುತ್ತದೆ.
ಇದನ್ನು ಓದಿ-ಕೊನೆ ಟೆಸ್ಟ್ ಪಂದ್ಯದಲ್ಲಿ ಈ ಆಟಗಾರ ಇದ್ದೇ ಇರ್ತಾನೆ.. ಈತನಿಗೆ ಖಚಿತ ಸ್ಥಾನ: ನಾಯಕ ರೋಹಿತ್ ಶರ್ಮಾ ಹೇಳಿಕೆ
ವಿರಾಟ್ ಈಗಾಗಲೇ ಟೆಸ್ಟ್‌ನಲ್ಲಿ 29 ಶತಕಗಳನ್ನು ದಾಖಲಿಸಿದ್ಧಾರೆ. ಇದೇ ಸಾಲಿನಲ್ಲಿ ಇಂಗ್ಲೆಂಡ್ ಆಟಗಾರ ಜೊ ರೂಟ್ ಹಾಗೂ ವೆಸ್ಟ್ ಇಂಡೀಸ್ ದಿಗ್ಗಜ ಚಂದ್ರಪಾಲ್ ಅವರು ಟೆಸ್ಟ್‌ನಲ್ಲಿ 30 ಶತಕಗಲನ್ನು ದಾಖಲಿ ಕೊಹ್ಲಿಗಿಂತ ಮುಂಚೂಣಿಯಲ್ಲಿದ್ಧಾರೆ. ಒಂದು ವೇಳೆ ಈ ಪಂದ್ಯದಲ್ಲಿ ವಿರಾಟ್ ಸೆಂಚೂರಿ ದಾಖಲಿಸಿದರೆ ಇವರಿಬ್ಬರ ದಾಖಲೆಯನ್ನು ಮುರಿದು ಮುಂದೆ ಸಾಗಲಿದ್ಧಾರೆ.
ಚಂದ್ರಪಾಲ್ ಒಟ್ಟು 280 ಇನ್ನಿಂಗ್ಸ್‌ಗಳನ್ನು ಆಡಿ 30 ಶತಕಗಳಿಸಿದರೆ, ಇಂಗ್ಲೆಂಡ್ ತಂಡದ ಆಟಗಾರ ಜೊ ರೂಟ್ 247 ಇನ್ನಿಂಗ್ಸ್‌ಗಳನ್ನು ಆಡಿದ್ದು 30 ಶತಕಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ಧಾರೆ. ಅದೇ ಸಾಲಿನಲ್ಲಿ ವಿರಾಟ್ ಗೆ ಚಾನ್ಸ್ ಸಿಕ್ಕಿದ್ದು, ವಿರಾಟ್ ಈ ಕೇವಲ 190 ಪಂದ್ಯಗಳನ್ನು ಆಡಿದ್ದು 29 ಶತಕಗಳನ್ನು ಹೊಂದಿದ್ಧಾರೆ. ಒಂದು ವೇಳೆ ಈ ಪಂದ್ಯದಲ್ಲಿ ಅವರು ಶತಕ ಭಾರಿಸಿದರೆ ಈ ಇಬ್ಬರು ಆಟಗರಾರಿಗಿಂತ ಅಗ್ರಸ್ಥಾನವನ್ನು ಅಲಂಕರಿಸಲಿದ್ದಾರೆ.
ಮೊದಲ ದಿನದ ಪಂದ್ಯದಲ್ಲಿ ಎರಡು ತಂಡಗಳಿಗೂ ಬ್ಯಾಟಿಂಗ್ ಮಾಡಿದಲು ಅವಕಾಸ ಸಿಕ್ಕಿದೆ. ಭಾರತವನ್ನು 153 ರನ್‌ಗಳಿಗೆ ಆಲ್ ಔಟ್ ಮಾಡಿದ ನಂತರ ದಕ್ಷಿಣ ಆಫ್ರಿಕಾವು ಬ್ಯಾಟಿಂಗ್‌ನಲ್ಲಿ ತನ್ನ ಎರಡನೇ ಇನ್ನಿಂಗ್ಸ್ ಮುಂದುವರೆಸಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಮಾತ್ರ ಸರಣಿ ದಕ್ಷಿಣ ಆಫ್ರಿಕಾ ತಂಡದ ಕೈವಶವಾಗುವುದನ್ನು ತಪ್ಪಿಸಲು ಸಾಧ್ಯ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡ