ನವದೆಹಲಿ: ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ರವರ ಶತಕಗಳ ಮೂಲಕ ರನ್ ಗಳಿಸುವ ಯತ್ನ ನಿರಂತರವಾಗಿ ಮುಂದುವರೆಯುತ್ತಲೇ ಇದೆ. ಈಗ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸೆಂಟುರಿಯನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ 21 ನೇ ಶತಕವನ್ನು ದಾಖಲಿಸಿದ್ದಾರೆ. 


COMMERCIAL BREAK
SCROLL TO CONTINUE READING

ಆ ಮೂಲಕ ಸ್ಟೇವ್ ಸ್ಮಿತ್ರವರ ವಿದೇಶದಲ್ಲಿನ ದಾಖಲೆಯ 10 ಶತಕಗಳನ್ನು ಕೊಹ್ಲಿ ಹಿಂದಿಕ್ಕಿದರು.2011 ರಿಂದ, ವಿದೇಶಿ ಪ್ರವಾಸದಲ್ಲಿ ಸ್ಮಿತ್ 10 ಶತಕಗಳನ್ನು ಗಳಿಸಿದರೆ, ಕೊಹ್ಲಿಯವರು 11 ಶತಕಗಳಿಸಿದ್ದಾರೆ. ಸ್ಮಿತ್ ನಂತೆಯೇ, ಕೊಹ್ಲಿ ಕೂಡಾ ಕ್ರಿಕೆಟ್ ನಲ್ಲಿ ಉತ್ಕೃಷ್ಟ ಫಾರ್ಮ್ ನಲ್ಲಿದ್ದಾರೆ.



ಕೊಹ್ಲಿ ನಿನ್ನೆ 85 ರನ್ಗಳನ್ನು ಗಳಿಸಿದ್ದ ಅವರು ಅದನ್ನು ಶತಕವಾಗಿ ಪರಿವರ್ತಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ, ದಕ್ಷಿಣ ದಕ್ಷಿಣ ಆಫ್ರಿಕಾದಲ್ಲಿ ನಾಯಕನಾಗಿ ಟೆಸ್ಟ್ ಶತಕವನ್ನು ಗಳಿಸಿದ ಎರಡನೇಯ ಭಾರತೀಯ ಎನ್ನುವ ಖ್ಯಾತಿಗೆ ಪಾತ್ರರಾದರು.ಇದಕ್ಕೂ ಮೊದಲು ಸಚಿನ ತೆಂಡೂಲ್ಕರ್ ಈ ಸಾಧನೆ ಮಾಡಿದ್ದರು.