Virat Kohli: ಸದ್ಯ ಟೀಂ ಇಂಡಿಯಾ ವಿಶ್ವಕಪ್ ನಲ್ಲಿ ಸತತ ಎರಡು ಜಯ ಗಳಿಸಿದೆ. ಈ ಮೂಲಕ ಉತ್ತಮ ಫಾರ್ಮ್ ನಲ್ಲಿ ಮುಂದುವರೆಯುತ್ತಿದೆ. ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ರೋಚಕ ಜಯ ಸಾಧಿಸಿತ್ತು. ಆ ಬಳಿಕ ನಡೆದ ನೆದರ್ಲ್ಯಾಂಡ್ ಪಂದ್ಯದಲ್ಲೂ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಇನ್ನು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಅಬ್ಬರದಿಂದ ಟೀಂ ಇಂಡಿಯಾ ಅಂತಿಮ ಹಂತದಲ್ಲಿ ಗೆಲುವನ್ನು ಸಾಧಿಸಿದೆ ಎಂದರೆ ತಪ್ಪಾಗಲಾರದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮುಂದಿನ ವಾರ ಟೀಮ್ ಇಂಡಿಯಾ ಮನೆಗೆ ಹೋಗುತ್ತೆ ಎಂದ ಶೋಯಬ್ ಅಖ್ತರ್..!


ಇನ್ನು ನೆದರ್ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿಯೂ ಭರ್ಜರಿ ಬ್ಯಾಟಿಂಗ್ ಮಾಡಿದ ರನ್ ಮೆಷಿನ್ ವಿರಾಟ್ ಕೊಹ್ಲಿ, ಇದೀಗ ಅಪರೂಪದ ದಾಖಲೆಯ ಹೊಸ್ತಿಲಿನಲ್ಲಿದ್ದಾರೆ. ಈ ದಾಖಲೆ ಮಾಡಲು ಅವರಿಗೆ ಬೇಕಾಗಿರುವುದು ಕೇವಲ 27ರನ್. ಒಂದು ವೇಳೆ ಈ ದಾಖಲೆ ಮಾಡಿದಲ್ಲಿ, ಇಂತಹ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.


ಭಾನುವಾರದಂದು ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ನೆದರ್ಲ್ಯಾಂಡ್ ವಿರುದ್ಧದ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ನ ಗ್ರೂಪ್ 2ನ 2ನೇ ಪಂದ್ಯದಲ್ಲಿ ಭಾರತ 179 ರನ್ ಗಳನ್ನು ಕಲೆ ಹಾಕಿತ್ತು. ಅದರಲ್ಲಿ ವಿರಾಟ್ 44 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿಗಳ ನೆರವಿನಿಂದ ಅಜೇಯ 62 ರನ್ ಪೇರಿಸಿದ್ದರು. ಈ ಮೂಲಕ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಿ, ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಕಲೆಹಾಕಿದ 2ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.


ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ನಲ್ಲಿ ಒಟ್ಟು 989 ರನ್ ಗಳಿಸಿದ್ದರೆ, ಕ್ರಿಸ್ ಗೇಲ್ 965 ರನ್ ಕಲೆಹಾಕಿದ್ದಾರೆ. ಇನ್ನು 1016ರನ್ ಕಲೆಹಾಕಿರುವ ಶ್ರೀಲಂಕಾದ ಮಹೇಲಾ ಜಯವರ್ಧನೆ ಅಗ್ರ ಸ್ಥಾನದಲ್ಲಿದ್ದಾರೆ. 904 ರನ್ ಗಳನ್ನು ಗಳಿಸಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ: PKL9: ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ತಮಿಳ್ ತಲೈವಾಸ್ ಗೆ ಭರ್ಜರಿ ಗೆಲುವು


ಮುಂದಿನ ಪಂದ್ಯದಲ್ಲಿ ಕೊಹ್ಲಿ 27 ಕ್ಕೂ ಹೆಚ್ಚು ರನ್ ಕಲೆ ಹಾಕಿದರೆ ಹೊಸ ವಿಶ್ವದಾಖಲೆ ವಿರಾಟ್ ಹೆಸರಿಗೆ ಬರಲಿದೆ. ಆ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಜಗತ್ತಿನ ಮತ್ತು ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯೂ ವಿರಾಟದ ಮುಡಿಯೇರಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ