Virender Sehwag : ಟೀಂ ಇಂಡಿಯಾ ಹೀನಾಯ ಸೋಲನ್ನು ಲೇವಡಿ ಮಾಡಿದ ವೀರೇಂದ್ರ ಸೆಹ್ವಾಗ್
Virender Sehwag On Indian Team : ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಇದರೊಂದಿಗೆ ಟೀಂ ಇಂಡಿಯಾ 0-2 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡಿದೆ.
Virender Sehwag On Indian Team : ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಇದರೊಂದಿಗೆ ಟೀಂ ಇಂಡಿಯಾ 0-2 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡಿದೆ. ಸರಣಿ ಸೋತ ಬಳಿಕ ಭಾರತ ತಂಡಕ್ಕೆ ಎಲ್ಲೆಡೆ ಟೀಕೆ ವ್ಯಕ್ತವಾಗುತ್ತಿದೆ. ಭಾರತದ ಮಾಜಿ ಸ್ಪೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಕೂಡ ಲೇವಡಿ ಮಾಡಿದ್ದಾರೆ.
'ಕ್ರಿಪ್ಟೋಸ್‌ಗಿಂತ ವೇಗವಾಗಿ ಕುಸಿಯುತ್ತಿದೆ ನಿಮ್ಮ ಪ್ರದರ್ಶನ'
ಈ ಬಗ್ಗೆ ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, 'ನಿಮ್ಮ ಪ್ರದರ್ಶನವು ಕ್ರಿಪ್ಟೋಸ್‌ಗಿಂತ ವೇಗವಾಗಿ ಕುಸಿಯುತ್ತಿದೆ, ನೀವು, ಈಗ ಎಚ್ಚೆತ್ತುಕೊಂಡು ಯೋಚಿಸುವ ಅಗತ್ಯವಿದೆ' ಎಂದು ಬರೆದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಸರಣಿಗೂ ಮುನ್ನ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಭಾರತ 0-1 ಅಂತರದಲ್ಲಿ ಸೋತಿತ್ತು. ಮತ್ತೊಂದೆಡೆ ಗಾಯಗೊಂಡಿರುವ ಆಟಗಾರರು ಕೂಡ ಟೀಂ ಇಂಡಿಯಾದ ಟೆನ್ಷನ್ ಹೆಚ್ಚಿಸಿದ್ದಾರೆ. ಈ ಬಗ್ಗೆ ವೀರೇಂದ್ರ ಸೆಹ್ವಾಗ್ ಕೂಡ ಟೀಕೆ ಮಾಡಿದ್ದಾರೆ.
ಇದನ್ನೂ ಓದಿ : Rohit Sharma Batting : ಹೆಬ್ಬೆರಳು ಮುರಿದರು ಬ್ಯಾಟಿಂಗ್ ಮಾಡಿದ ರೋಹಿತ್ : ಫ್ಯಾನ್ಸ್ ಮನ ಗೆದ್ದ ಹಿಟ್ ಮ್ಯಾನ್
ಕಳಪೆ ಪ್ರದರ್ಶನ ನೀಡಿತ್ತಿರುವ ಟೀಂ ಇಂಡಿಯಾ
2022ರಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋತ ಟೀಮ್ ಇಂಡಿಯಾ ಸೂಪರ್-4 ಹಂತದಿಂದ ಹೊರಬಿದ್ದಿದೆ. ಅದೇ ಸಮಯದಲ್ಲಿ, 2022 ರ ಟಿ 20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಸೋಲನ್ನು ಎದುರಿಸಬೇಕಾಯಿತು. ಪ್ರಮುಖ ಸಂದರ್ಭಗಳಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಅಮೋಘ ಆಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಆಟಗಾರರ ಕಳಪೆ ಫಾರ್ಮ್‌ಗೆ ಭಾರತ ಸೋಲು ಅನುಭವಿಸಬೇಕಾಯಿತು.
'ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ'
ODI ವಿಶ್ವಕಪ್ 2023 ಭಾರತದಲ್ಲಿ ಮಾತ್ರ ಆಯೋಜಿಸಲಾಗಿದೆ. ಇದಕ್ಕಾಗಿ ಭಾರತ ತಂಡ ಈಗಿನಿಂದಲೇ ತಯಾರಿ ನಡೆಸುತ್ತಿದೆ. ಆದರೆ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರ ಫಾರ್ಮ್ ಕಳವಳಕಾರಿಯಾಗಿದೆ. 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಹಾಗೂ 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದಿತ್ತು.
ಇದನ್ನೂ ಓದಿ : IND vs BAN : ಈ ಆಟಗಾರನಿಂದಾಗಿ ಟೀಂ ಇಂಡಿಯಾಗೆ ಸರಣಿ ಸೋಲು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.