Virender Sehwag Personal Life: ಟೀಂ ಇಂಡಿಯಾದ ಅನೇಕ ದಿಗ್ಗಜರ ವೈಯಕ್ತಿಕ ಜೀವನ ಕುತೂಹಲದಿಂದ ಕೂಡಿರುತ್ತದೆ. ಅವರ ಮದುವೆ ವಿಚಾರ ಆಗಾಗ್ಗ ಮುನ್ನೆಲೆಗೆ ಬರುತ್ತಿರುತ್ತವೆ. ಹೆಚ್ಚಿನ ಕ್ರಿಕೆಟಿಗರು ಲವ್ ಮಾಡಿಯೇ ಮದುವೆಯಾಗಿದ್ದಾರೆ. ಅದರಲ್ಲಿ ಇಂದು ವೀರೇಂದ್ರ ಸೆಹ್ವಾಗ್ ಮತ್ತು ಆರತಿ ದಂಪತಿ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಿಮಗೆ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಕೇವಲ 7 ವರ್ಷದವರಾಗಿದ್ದಾಗ ಮೊದಲ ಬಾರಿಗೆ ತಮ್ಮ ಪತ್ನಿ ಆರತಿ ಅಹ್ಲಾವತ್ ಅವರನ್ನು ಭೇಟಿಯಾಗಿದ್ದರಂತೆ. ಆರತಿಯ ಚಿಕ್ಕಮ್ಮ ಸೆಹ್ವಾಗ್ ಅವರ ಸೋದರ ಸಂಬಂಧಿಯನ್ನು ಮದುವೆಯಾಗಿದ್ದರು. ಅದರ ಪ್ರಕಾರ ಎರಡೂ ಕುಟುಂಬಗಳು ಮೊದಲಿನಿಂದಲೇ ಪರಿಚಯಸ್ಥವಾಗಿದ್ದವು.


ಇದನ್ನೂ ಓದಿ: The Kerala Story : ʼಲವ್‌ ಜಿಹಾದ್‌ʼ ಚಿತ್ರ ʼದಿ ಕೇರಳ ಸ್ಟೋರಿʼಗೆ ತೆರಿಗೆ ವಿನಾಯಿತಿ..!


ವೀರೇಂದ್ರ ಸೆಹ್ವಾಗ್ ಮತ್ತು ಆರತಿ ಸಂಬಂಧದಲ್ಲಿಯೇ ವಿವಾಹವಾದರು ಎಂದು ಆರತಿ ಅವರ ಅಕ್ಕ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದು ಪ್ರೇಮ ವಿವಾಹವಾಗಿತ್ತು. ನಮ್ಮ ಬುವಾ (ತಂದೆಯ ಸಹೋದರಿ) ಸೆಹ್ವಾಗ್ ಅವರ ಕುಟುಂಬದಲ್ಲಿ ಅವರ ಸೋದರ ಸಂಬಂಧಿಯನ್ನು ಮದುವೆಯಾಗಿದ್ದರು ಎಂದು ಅವರು ಹೇಳಿದ್ದಾರೆ.


ಸೆಹ್ವಾಗ್ ಮತ್ತು ಆರತಿ 2004 ರಲ್ಲಿ ವಿವಾಹವಾದರು. ಈಗ ಅವರು ಮದುವೆಯಾಗಿ 19 ವರ್ಷಗಳಾಗಿವೆ. ಆರತಿ ಮತ್ತು ವೀರೇಂದ್ರ ಸೆಹ್ವಾಗ್ ಅವರಿಗೆ ಆರ್ಯವೀರ್ ಮತ್ತು ವೇದಾಂತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ವಿಶೇಷವೆಂದರೆ ಸೆಹ್ವಾಗ್ ಅವರು ಬಿಜೆಪಿಯ ಮಾಜಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ಸರ್ಕಾರಿ ಬಂಗಲೆಯಲ್ಲಿ ವಿವಾಹವಾಗಿದ್ದರು.


ಸೆಹ್ವಾಗ್ ಅವರ ಪತ್ನಿ ಆರತಿ ದೆಹಲಿಯ ಖ್ಯಾತ ವಕೀಲ ಸೂರಜ್ ಸಿಂಗ್ ಅಹ್ಲಾವತ್ ಅವರ ಪುತ್ರಿ. ಸೆಹ್ವಾಗ್ ಕುಟುಂಬ ಈ ಮದುವೆಗೆ ಸಿದ್ಧವಿರಲಿಲ್ಲ. 17 ವರ್ಷಗಳ ಸ್ನೇಹವನ್ನು ಪ್ರೀತಿಯಾಗಿ ಪರಿವರ್ತಿಸಲು 14 ವರ್ಷಗಳು ಬೇಕಾಯಿತು. 2002 ರಲ್ಲಿ, ಸೆಹ್ವಾಗ್ ತಮಾಷೆಯಾಗಿ ಆರತಿಯನ್ನು ಮದುವೆ ಆಗುತ್ತೀಯಾ ಎಂದು ಕೇಳಿದ್ದರು. ಆದರೆ ಆರತಿ ಅದಕ್ಕೆ ತುಂಬಾ ಗಂಭೀರವಾಗಿ ಪ್ರತಿಕ್ರಿಯಿಸಿ, ಹೌದು ಎಂದು ಹೇಳಿದರು. ಈ ವಿಷಯವನ್ನು ಸ್ವತಃ ವೀರೂ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.


ವೀರೇಂದ್ರ ಸೆಹ್ವಾಗ್ ಮತ್ತು ಆರತಿ ಇಬ್ಬರೂ ಮದುವೆಗೆ ರೆಡಿಯಾಗಿದ್ದರು. ಆದರೆ ಸೆಹ್ವಾಗ್ ತಮ್ಮ ಕುಟುಂಬವನ್ನು ಒಪ್ಪಿಸಲು ಬಹಳ ಸಮಯ ತೆಗೆದುಕೊಂಡರು. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಸೆಹ್ವಾಗ್, 'ನಮ್ಮ ಕುಟುಂಬದಲ್ಲಿ ನಿಕಟ ಸಂಬಂಧಿಗಳೊಂದಿಗೆ ಯಾವುದೇ ಮದುವೆಗಳಾಗಿರಲಿಲ್ಲ. ಅದೇ ಕಾರಣದಿಂದ ನನ್ನ ಪೋಷಕರು ಈ ಮದುವೆ ಮಾಡಿಸಲು ಸಿದ್ಧರಿರಲಿಲ್ಲ. ಸ್ವಲ್ಪ ಸಮಯ ತೆಗೆದುಕೊಂಡರು. ಕೊನೆಗೆ ಮದುವೆಗೆ ಒಪ್ಪಿದರು” ಎಂದು ಹೇಳಿದರು.


ಇನ್ನು ಆರತಿ ಕೂಡ ಈ ಬಗ್ಗೆ ಮಾತನಾಡಿದ್ದು, “ಈ ಮದುವೆಗೆ ಒಪ್ಪಿಗೆ ಪಡೆಯುವುದು ತುಂಬಾ ಕಷ್ಟವಾಗಿತ್ತು. ನಮ್ಮ ಮನೆಯಲ್ಲಿ ಈ ಮದುವೆಗೆ ಇಷ್ಟವಿಲ್ಲದವರು ತುಂಬಾ ಜನ ಇದ್ದರು. ನನ್ನ ಮನೆಯವರು ಮಾತ್ರ ಅಲ್ಲ, ವೀರೂ ಅವರ ಕುಟುಂಬದ ಅನೇಕ ಜನರು ಈ ಮದುವೆ ಬಗ್ಗೆ ಕೋಪಗೊಂಡಿದ್ದರು” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಬೆಳಗಿನ ಉಪಹಾರಕ್ಕೆ ಇದೇ ಸರಿಯಾದ ಸಮಯ ! 90% ದಷ್ಟು ಜನರಿಗೆ ತಿಳಿದಿಲ್ಲ ಈ ಸತ್ಯ !


 ವೀರೂ ಮತ್ತು ಆರತಿಯ ಸಂಬಂಧದ ಮುಂದೆ ಕುಟುಂಬವು ಸೋಲೊಪ್ಪಿಕೊಂಡು ಏಪ್ರಿಲ್ 2004 ರಲ್ಲಿ ಇಬ್ಬರಿಗೂ ಮದುವೆ ಮಾಡಿಸಿತು. ಈಗ ಈ ಜೋಡಿಗೆ ಆರ್ಯವೀರ್ ಮತ್ತು ವೇದಾಂತ್ ಎಂಬ ಇಬ್ಬರು ಮಕ್ಕಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.