CCTV Footage - ಸಾವಿಗೂ ಸ್ವಲ್ಪ ಹೊತ್ತು ಮುಂಚೆ Shane Warne ಏನ್ ಮಾಡ್ತಿದ್ರು? CCTV ಫೂಟೇಜ್ ನಲ್ಲಿ ಬಹಿರಂಗಗೊಂಡ ರಹಸ್ಯ ಇದು
CCTV Footage - ಶೇನ್ ವಾರ್ನ್ (Shane Warne) ಸಾವಿಗೆ ಸಂಬಂಧಿಸಿದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ವಾರ್ನ್ ಸಾವಿಗೆ ಕೆಲವು ಗಂಟೆಗಳ ಹಿಂದಿನ ಕೆಲವು ಸಿಸಿಟಿವಿ ದೃಶ್ಯಾವಳಿಗಳು (CCTV Footage) ಹೊರಬಂದಿವೆ. ಇದರಲ್ಲಿ ದೊಡ್ಡ ಬಹಿರಂಗಪಡಿಸಲಾಗಿದೆ.
ನವದೆಹಲಿ: CCTV Footage - ಆಸ್ಟ್ರೇಲಿಯಾದ (Australia) ಶ್ರೇಷ್ಠ ಲೆಗ್ ಸ್ಪಿನ್ನ ಬೌಲರ್ ಶೇನ್ ವಾರ್ನ್ ಸಾವಿನ ಸುದ್ದಿ ಇಡೀ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಶೇನ್ ವಾರ್ನ್ ಶುಕ್ರವಾರ ಥಾಯ್ಲೆಂಡ್‌ನಲ್ಲಿ (Thailand) ತಮ್ಮ ಕೊನೆಯುಸಿರೆಳೆದಿದ್ದಾರೆ. ವಾರ್ನ್ 52ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಈ ಜಗತ್ತಿಗೆ ವಿದಾಯ ಹೇಳಿದ್ದಾರೆ. ಸೋಮವಾರ ಹೊರಬಿದ್ದಿರುವ ಅಟಾಪ್ಸಿ ವರದಿಯಲ್ಲಿ ಅವರ ಸಾವಿಗೆ ಕಾರಣ ಬಹಿರಂಗವಾಗಿದೆ. ಥಾಯ್ಲೆಂಡ್ ಅಧಿಕಾರಿಗಳು (Thailand Police) ದೃಢಪಡಿಸಿದ ಅಟಾಪ್ಸಿ ವರದಿಯಲ್ಲಿ (Atopsy Report) ಅವರು ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಸಾವಿಗೆ ಕೆಲವು ಗಂಟೆಗಳ ಹಿಂದಿನ ಕೆಲ ಸಿಸಿಟಿವಿ ದೃಶ್ಯಗಳು ಬಹಿರಂಗಗೊಂಡಿವೆ, ಶೇನ್ ವಾರ್ನ್ ತನ್ನ ಕೊನೆಯ ಸಮಯದಲ್ಲಿ ಏನು ಮಾಡುತ್ತಿದ್ದರು ಎಂಬುದು ಇದರಿಂದ ಬಹಿರಂಗವಾಗಿದೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಶೇನ್ ವಾರ್ನ್ ಸಾವಿನ ರಹಸ್ಯ
ಡೈಲಿ ಮೇಲ್ ವರದಿಯ ಪ್ರಕಾರ, ಶೇನ್ ವಾರ್ನ್ ಸಾವಿಗೆ ಕೆಲವು ಗಂಟೆಗಳ ಮೊದಲ ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗಗೊಂಡಿವೆ. ಈ ದೃಶ್ಯಾವಳಿಯಿಂದ ಶೇನ್ ವಾರ್ನ್ ನಾಲ್ವರು ಮಸಾಜ್ (Masseuses) ಮಹಿಳೆಯರನ್ನು ರೆಸಾರ್ಟ್‌ಗೆ ಕರೆಸಿಕೊಂಡಿರುವುದು ಬೆಳಕಿಗೆ ಬಂದಿದೆ. ಶುಕ್ರವಾರ ಮಧ್ಯಾಹ್ನ 1:53ಕ್ಕೆ ನಾಲ್ವರು ಮಹಿಳೆಯರು ರೆಸಾರ್ಟ್‌ಗೆ ಬಂದಿದ್ದರು. ಅವರಲ್ಲಿ ಇಬ್ಬರು ಶೇನ್ ವಾರ್ನ್ (Warne Death) ಅವರ ಕೋಣೆಗೆ ಹೋಗಿದ್ದರು ಮತ್ತು ಉಳಿದ ಇಬ್ಬರು ವಾರ್ನ್ ಸ್ನೇಹಿತರ ಬಳಿಗೆ ಹೋಗಿದ್ದರು. ಸಿಸಿಟಿವಿ ಕ್ಯಾಮೆರಾದ ಪ್ರಕಾರ ಮಹಿಳೆಯರೆಲ್ಲರೂ ಮಧ್ಯಾಹ್ನ 2.58 ಕ್ಕೆ ರೆಸಾರ್ಟ್‌ನಿಂದ ಹೊರಬಂದಿದ್ದಾರೆ. ಇದಾದ ಎರಡು ಗಂಟೆ 17 ನಿಮಿಷಗಳ ನಂತರ, ಅಂದರೆ, 5:15ಕ್ಕೆ ಶೇನ್ ವಾರ್ನ್ (Shane Warne Villa Thailand) ಮೊದಲ ಬಾರಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ, ನಂತರ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ಇದನ್ನೂ ಓದಿ-IPL 2022: ವಿರಾಟ್ ಕೊಹ್ಲಿ ಅಲ್ಲ, ಈ ಪರಾಕ್ರಮಿ ಬ್ಯಾಟ್ಸ್‌ಮನ್ ಆರ್‌ಸಿಬಿಯ ಹೊಸ ನಾಯಕ!
ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾವಿನ ಕಾರಣ ಬಹಿರಂಗ
ಆಸ್ಟ್ರೇಲಿಯಾದ ಕ್ರಿಕೆಟಿಗ ಶೇನ್ ವಾರ್ನ್ ಅವರ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಅವರು ಸ್ವಾಭಾವಿಕ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದು ಥಾಯ್ಲೆಂಡ್ ಪೊಲೀಸರು ಸೋಮವಾರ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ವರದಿಯನ್ನು ವಾರ್ನ್ ಅವರ ಕುಟುಂಬ ಮತ್ತು ಆಸ್ಟ್ರೇಲಿಯಾದ ರಾಯಭಾರ ಕಚೇರಿಗೆ ಕಳುಹಿಸಲಾಗಿದೆ ಎಂದು ರಾಷ್ಟ್ರೀಯ ಪೊಲೀಸ್ ಉಪ ವಕ್ತಾರ ಕಿಸಾನಾ ಪಾಥನಾಚಾರೋನ್ ಹೇಳಿಕೆ ನೀಡಿದ್ದಾರೆ. ಅವರು ಸ್ವಾಭಾವಿಕ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂಬುದರಲ್ಲಿ ವಾರ್ನ್ ಅವರ ಕುಟುಂಬಕ್ಕೆ ಯಾವುದೇ ಸಂದೇಹವಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.
ಇದನ್ನೂ ಓದಿ-Ricky Ponting Video: ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತ ರಿಕಿ ಪಾಂಟಿಂಗ್
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ
ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್ ಅವರ ಅಂತ್ಯಕ್ರಿಯೆಯನ್ನು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು, ಇದರಲ್ಲಿ ಸುಮಾರು ಒಂದು ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನ (Melbourne Cricket Ground) ವಾರ್ನ್ ಅವರ ನೆಚ್ಚಿನ ಮೈದಾನವಾಗಿತ್ತು. 1994ರಲ್ಲಿ ಇದೇ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. MCG ಮೈದಾನದ ಹೊರಗೆ ವಾರ್ನ್ ಪ್ರತಿಮೆ ಕೂಡ ಇದೆ. ಯ ದಕ್ಷಿಣ ಸ್ಟ್ಯಾಂಡ್‌ಗೆ SK Warne Stand ಎಂದು ಹೆಸರಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ-Team India : ಟೀಂ ಇಂಡಿಯಾಗೆ ಎಂಟ್ರಿ ನೀಡಿದ ಈ ಸ್ಪೋಟಕ್ ಬ್ಯಾಟ್ಸಮನ್! ಶ್ರೀಲಂಕಾ ತಂಡದಲ್ಲಿ ಶುರುವಾಗಿದೆ ಭೀತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.