ವಿರಾಟ್ ಕೊಹ್ಲಿಯ ಸುಳ್ಳು ಕೊನೆಗೂ ಬಯಲು?: ಏಕದಿನ ನಾಯಕತ್ವ ವಿವಾದಕ್ಕೆ ಬಿಸಿಸಿಐ ಮತ್ತೆ ಸೆಡ್ಡು!
ಕಳೆದ ಕೆಲವು ದಿನಗಳಿಂದ ಭಾರತೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಸದ್ದು-ಗದ್ದಲಗಳು ನಡೆಯುತ್ತಿವೆ. ಅಂದಿನಿಂದ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದೀಗ ಬಿಸಿಸಿಐ ಮತ್ತೆ ವಿರಾಟ್ ಬಗ್ಗೆ ದೊಡ್ಡ ಹೇಳಿಕೆ ನೀಡಿದೆ.
ನವದೆಹಲಿ: ಭಾರತ ಕ್ರಿಕೆಟ್‌ನಲ್ಲಿ ಕಳೆದ ಕೆಲ ದಿನಗಳಿಂದ ದೊಡ್ಡ ಸಂಚಲನ(ODI Captaincy Controversy)ವೇ ಸೃಷ್ಟಿಯಾಗಿದೆ. ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ವಾಸ್ತವವಾಗಿ ಬಿಸಿಸಿಐ ವಿರಾಟ್ ಅವರನ್ನು ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕುವ ಸ್ವಲ್ಪದಿನಕ್ಕೂ ಮೊದಲು ಈ ವಿವಾದ ಸೃಷ್ಟಿಯಾಗಿದೆ. ಅಂದಿನಿಂದ ವಿರಾಟ್ ಮತ್ತು ಬಿಸಿಸಿಐ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಲೇ ಬಂದಿದ್ದಾರೆ.
ವಿರಾಟ್ ರನ್ನು ನಾಯಕತ್ವದಿಂದ ವಜಾಗೊಳಿಸಿದ ನಂತರ ಟಿ-20 ನಾಯಕತ್ವ(T-20 Captaincy Controversy)ತೊರೆಯಲು ವಿರಾಟ್ ಮನಸ್ಸು ಮಾಡಿದಾಗ ಆಯ್ಕೆದಾರರು ಮತ್ತು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ(Sourav Ganguly) ಅವರೇ ಅವರನ್ನು ತಡೆದಿದ್ದರು ಎಂದು ಬಿಸಿಸಿಐ ಹೇಳಿದೆ. ಆದರೆ ಇತ್ತೀಚೆಗಷ್ಟೇ ಇದಕ್ಕೆ ತದ್ವಿರುದ್ಧವಾದ ಉತ್ತರ ನೀಡಿದ್ದ ವಿರಾಟ್, ‘ಅಂತಹದ್ದೇನೂ ಆಗಿಲ್ಲ ಮತ್ತು ಟಿ-20 ನಾಯಕತ್ವ ತೊರೆಯುವುದನ್ನು ತಡೆಯಲಿಲ್ಲ’ ಎಂದು ಹೇಳಿಕೊಂಡಿದ್ದರು. ಆದರೆ ಇದೀಗ ಮತ್ತೊಮ್ಮೆ ವಿರಾಟ್ ಕೊಹ್ಲಿಗೆ ಬಿಸಿಸಿಐ ಸೆಡ್ಡು ಹೊಡೆದಿದೆ.
ಇದನ್ನೂ ಓದಿ: Under-19 Asia Cup : 8ನೇ ಬಾರಿ ಚಾಂಪಿಯನ್ ಆದ ಟೀಂ ಇಂಡಿಯಾ
ವಿರಾಟ್‌ಗೆ ಬಿಸಿಸಿಐ ತಿರುಗೇಟು!
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೊರಡುವ ಮುನ್ನ ವಿರಾಟ್ ಕೊಹ್ಲಿ(Virat Kohli) ಹೇಳಿಕೆಯನ್ನು ತಳ್ಳಿಹಾಕಿರುವ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ, ‘ಚಾಂಪಿಯನ್ ಬ್ಯಾಟ್ಸ್ ಮನ್‌ನನ್ನು ಟಿ-20 ನಾಯಕನಾಗಿ ಮುಂದುವರಿಸಲು ಬಿಸಿಸಿಐನಲ್ಲಿ ಎಲ್ಲರೂ ಕೇಳಿಕೊಂಡಿದ್ದರು’ ಎಂದು ಹೇಳಿದ್ದಾರೆ. ಕೊಹ್ಲಿ ಟಿ-20 ನಾಯಕತ್ವ ತ್ಯಜಿಸಿದ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮಂಡಳಿಯು ಕೊಹ್ಲಿಯನ್ನು ಕೇಳಿತ್ತು ಎಂದು ಹೇಳಿದ್ದಾರೆ.
ಗಂಗೂಲಿ ಹೇಳಿಕೆ ನಿರಾಕರಿಸಿದ್ದ ಕೊಹ್ಲಿ
ನಂತರ ಗಂಗೂಲಿ ಹೇಳಿಕೆಯನ್ನು ನಿರಾಕರಿಸಿದ ಕೊಹ್ಲಿ, ತಾನು ಮಂಡಳಿಯ ಅಧ್ಯಕ್ಷರೊಂದಿಗೆ ಮಾತನಾಡಿಲ್ಲ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಟೆಸ್ಟ್ ತಂಡದ ಆಯ್ಕೆಗಾಗಿ ಆಯ್ಕೆ ಸಮಿತಿಯ ಸಭೆಯ ನಂತರ ತಮ್ಮನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಲಾಗಿದೆ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಚೇತನ್ ಶರ್ಮಾ, ‘ಸಭೆ ಆರಂಭವಾದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಟಿ-20 ವಿಶ್ವಕಪ್(ICC Mens T20 World Cup 2021) ಆರಂಭಕ್ಕೂ ಮುನ್ನ ಇಂಥದ್ದೊಂದು ಮಾತು ಕೇಳಿ ಬಂದರೆ ಪ್ರತಿಕ್ರಿಯೆ ಹೇಗಿರಲಿದೆ. ಸಭೆಯಲ್ಲಿ ಹಾಜರಿದ್ದ ಎಲ್ಲರೂ ಟಿ-20 ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿಕೊಂಡರು. ವಿಶ್ವಕಪ್ ನಂತರ ಈ ಬಗ್ಗೆ ಮಾತನಾಡಬಹುದು. ಇದು ವಿಶ್ವಕಪ್ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು ಎಂದು ಎಲ್ಲಾ ಆಯ್ಕೆದಾರರು ಅಂದುಕೊಂಡಿದ್ದರು’ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ಕೆ.ಎಲ್.ರಾಹುಲ್ ಭಾರತ ತಂಡದ ನಾಯಕನಾಗಿ ನೇಮಕ
ಮುಂದುವರಿದು ‘ಭಾರತೀಯ ಕ್ರಿಕೆಟ್(Team India)ಗೆ ನಾಯಕನಾಗಿ ಉಳಿಯುವಂತೆ ವಿರಾಟ್‌ಗೆ ಕೇಳಲಾಯಿತು. ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಸಭೆಯಲ್ಲಿದ್ದ ಎಲ್ಲರೂ ಇದನ್ನೇ ಹೇಳಿದರು. ಸಭೆಯಲ್ಲಿ ಆಯ್ಕೆ ಸಮಿತಿಯ ಸದಸ್ಯರು, ಮಂಡಳಿಯ ಅಧಿಕಾರಿಗಳು ಎಲ್ಲರೂ ಇದ್ದರು. ಈ ಬಗ್ಗೆ ಎಲ್ಲರೂ ಮಾತನಾಡಿದ್ದರು. ಟಿ-20 ವಿಶ್ವಕಪ್ ಸಮಿಪಿಸುತ್ತಿದೆ ಮತ್ತು ಈ ನಿರ್ಧಾರವು ತಂಡದ ಮೇಲೆ ಪರಿಣಾಮ ಬೀರಲು ನಾವು ಬಯಸುವುದಿಲ್ಲ. ಆದರೆ ಕೊಹ್ಲಿ ನಾಯಕತ್ವದಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡರು. ಹೀಗಾಗಿ ನಾವೆಲ್ಲರೂ ಅವರ ನಿರ್ಧಾರವನ್ನು ಗೌರವಿಸಿದೆವು. ಕೊಹ್ಲಿಯವರೇ ನಾಯಕತ್ವದಿಂದ ಹಿಂದೆ ಸರಿಯುವುದಾಗಿ ಹೇಳಿದ ಬಳಿಕ ನಮಗೆ ಬೇರೆ ಯಾವ ಆಯ್ಕೆಗಳೂ ಇರಲಿಲ್ಲ’ವೆಂದು ಚೇತನ್ ಶರ್ಮಾ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.