6,6,6,6,6,6... ಅಮೆರಿಕಾದಲ್ಲಿ ಸಿಕ್ಸರ್ ಸುರಿಮಳೆಗೈದ ಸ್ಟಾರ್ ಬ್ಯಾಟರ್! 21ರ ಹರೆಯದ ಭಾರತೀಯ ದಾಂಡಿಗನ ಅಬ್ಬರಕ್ಕೆ ಟ್ರಾವಿಸ್ ಹೆಡ್ ಫಿದಾ
ಸೋಮವಾರ ವಾಷಿಂಗ್ಟನ್ ಫ್ರೀಡಂ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ ನಡುವಿನ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಕರ್ನಾಟಕದ ಬ್ಯಾಟ್ಸ್ ಮನ್ ಸಂಜಯ್ ಕೃಷ್ಣಮೂರ್ತಿ ಹವಾ ಸೃಷ್ಟಿಸಿದ್ದರು.
Sanjay Krishnamurthy: ಅಮೆರಿಕದ ಟಿ20 ಲೀಗ್ʼನಲ್ಲಿ ಕರ್ನಾಟಕದ ಆಟಗಾರನೊಬ್ಬ ಹವಾ ಸೃಷ್ಟಿಸಿದ್ದಾನೆ. ಸಿಕ್ಸರ್ʼಗಳ ಮಳೆಗರೆಯುವ ಮೂಲಕ ತಮ್ಮ ತಂಡಕ್ಕೆ ಅದ್ಭುತ ಜಯ ತಂದುಕೊಟ್ಟಿದ್ದಾನೆ. ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಅವರಂತಹ ಸ್ಟಾರ್ ಆಟಗಾರರನ್ನೂ ನಡುಗುವಂತೆ ಮಾಡಿದ ಈ 21 ವರ್ಷದ ಬ್ಯಾಟ್ಸ್‌ಮನ್ ಕರ್ನಾಟಕ ಮೂಲದವನು. ಆ ಆಟಗಾರ ಬೇರೆ ಯಾರೂ ಅಲ್ಲ ಸಂಜಯ್ ಕೃಷ್ಣಮೂರ್ತಿ. ಇನ್ನು ಈ ಪಂದ್ಯ ನಡೆದದ್ದು ಮೇಜರ್ ಲೀಗ್ ಕ್ರಿಕೆಟ್ ನಲ್ಲಿ.
ಸೋಮವಾರ ವಾಷಿಂಗ್ಟನ್ ಫ್ರೀಡಂ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ ನಡುವಿನ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಕರ್ನಾಟಕದ ಬ್ಯಾಟ್ಸ್ ಮನ್ ಸಂಜಯ್ ಕೃಷ್ಣಮೂರ್ತಿ ಹವಾ ಸೃಷ್ಟಿಸಿದ್ದರು. ಅವರ ಆಕ್ರಮಣಕಾರಿ ಬ್ಯಾಟಿಂಗ್ʼನಿಂದ ಸ್ಯಾನ್ ಫ್ರಾನ್ಸಿಸ್ಕೋ ತಂಡ ಇನ್ನೂ 2 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ʼಗಳ ಜಯ ಸಾಧಿಸಿತು.
ಇದನ್ನೂ ಓದಿ: ಮಂತ್ರಿ ಜೊತೆ ನನ್ನ ಪತ್ನಿಗೆ ಅಫೇರ್... ಅದಕ್ಕೆ ಅವಳನ್ನ ಕೊಂದುಬಿಟ್ಟೆ! ನಟ ಸಂಜಯ್ ದತ್ ಸೆನ್ಸೇಷನಲ್ ಹೇಳಿಕೆ ವೈರಲ್
ಮೊದಲು ಬ್ಯಾಟ್ ಮಾಡಿದ ವಾಷಿಂಗ್ಟನ್ ಫ್ರೀಡಂಡ೨ 15.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ವಾಷಿಂಗ್ಟನ್ ಫ್ರೀಡಂನ ಆರಂಭಿಕರಾದ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ತಲಾ 56 ರನ್ ಗಳಿಸಿ ಗರಿಷ್ಠ ಸ್ಕೋರರ್ʼಗಳಾಗಿದ್ದರು. ನಾಯಕ ಸ್ಮಿತ್ 4 ಸಿಕ್ಸರ್ ಮತ್ತು 5 ಬೌಂಡರಿ ಬಾರಿಸಿದರೆ, ಹೆಡ್ 3 ಸಿಕ್ಸರ್ ಮತ್ತು 5 ಬೌಂಡರಿ ಬಾರಿಸಿದರು.
ಡಕ್ವರ್ತ್ ಲೂಯಿಸ್ ಪ್ರಕಾರ, ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ 14 ಓವರ್ಗಳಲ್ಲಿ 177 ರನ್ಗಳ ಗುರಿಯನ್ನು ಬೆನ್ನಟ್ಟಬೇಕಾಗಿದೆ. ಆದರೆ ತಂಡ ಮೊದಲ ಎಸೆತದಲ್ಲಿ ಫಿನ್ ಅಲೆನ್ ವಿಕೆಟ್ ಕಳೆದುಕೊಂಡಿತು. ಆದರೆ ಒನ್ ಡೌನ್ ನಲ್ಲಿ ಇಳಿದ ಸಂಜಯ್ ಕೃಷ್ಣಮೂರ್ತಿ ವಾಷಿಂಗ್ಟನ್ ಫ್ರೀಡಂ ತಂಡದ ಗೆಲುವಿಗೆ ಅಡ್ಡಿಯಾದರು. ತಮ್ಮ ತಂಡವನ್ನು ಉತ್ತಮ ಯಶಸ್ಸಿನತ್ತ ಮುನ್ನಡೆಸಿದರು.
ಜೋಸ್ ಇಂಗ್ಲಿಷ್ ಮೂರನೇ ವಿಕೆಟ್ʼಗೆ ಸಂಜಯ್ ಕೃಷ್ಣಮೂರ್ತಿ ಅವರೊಂದಿಗೆ 77 ರನ್ ಜೊತೆಯಾಟ ನಡೆಸಿದರು. ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ʼಗೆ ಬಂದ 21 ವರ್ಷದ ಸಂಜಯ್ ಕೃಷ್ಣಮೂರ್ತಿ ಕೊನೆಯವರೆಗೂ ಅಜೇಯರಾಗಿ ಉಳಿದು ಕೇವಲ 42 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 79 ರನ್ ಗಳಿಸಿದರು.
ಸಂಜಯ್ ಕೃಷ್ಣಮೂರ್ತಿ ಜೊತೆ ಕರ್ನಾಟಕದ ಸಂಬಂಧ..
21 ವರ್ಷದ ಆಲ್ ರೌಂಡರ್ ಕರ್ನಾಟಕ ಅಂಡರ್-16 ತಂಡದಲ್ಲಿ ಕ್ರಿಕೆಟ್ ಆಡಿದ್ದರು. ಅಲ್ಲದೆ, ಅವರ ಕುಟುಂಬಸ್ಥರು ಇನ್ನೂ ಕರ್ನಾಟಕದಲ್ಲಿಯೇ ಇದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ