IND vs IRE, 1st T20: ಭಾರತ T20 ತಂಡಕ್ಕೆ 6 ತಿಂಗಳ ನಂತರ ಓರ್ವ ಮ್ಯಾಚ್ ವಿನ್ನರ್ ಎಂಟ್ರಿ ಕೊಟ್ಟಿದ್ದಾರೆ. ಇವರ ಪ್ರವೇಶದಿಂದ ಟೀಂ ಇಂಡಿಯಾದಲ್ಲಿ ಶಕ್ತಿ ತುಂಬಿದ್ದರೆ, ಐರ್ಲೆಂಡ್ ತಂಡದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಐರ್ಲೆಂಡ್ ವಿರುದ್ಧದ 3 ಪಂದ್ಯಗಳ T20 ಅಂತಾರಾಷ್ಟ್ರೀಯ ಸರಣಿಗಾಗಿ ಈ ಆಟಗಾರ ಮರಳಿದ್ದು, ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮೊದಲ ಟಿ20ಗೆ ಟೀಂ ಇಂಡಿಯಾ Playing 11 ಪ್ರಕಟ: ಕನ್ನಡಿಗ ಸೇರಿ 4 ಕ್ರಿಕೆಟಿಗರಿಗಿಲ್ಲ ಸ್ಥಾನ!


ಆಗಸ್ಟ್ 18ರಿಂದ ಆರಂಭವಾಗಲಿರುವ 3 ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಈ ಅಪಾಯಕಾರಿ ಆಟಗಾರನಿಗೆ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡಿದರೆ ವಿರೋಧಿ ತಂಡಕ್ಕೆ ಕಂಟಕವಾಗೋದು ಖಂಡಿತ.


ಭಾರತ ಕ್ರಿಕೆಟ್ ತಂಡದ ಈ ಆಟಗಾರ ಬೇರೆ ಯಾರೂ ಅಲ್ಲ, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌’ನಲ್ಲಿ ಪರಿಣತಿ ಹೊಂದಿರುವ ವಾಷಿಂಗ್ಟನ್ ಸುಂದರ್. ವಾಷಿಂಗ್ಟನ್ ಸುಂದರ್ ಫೆಬ್ರವರಿ 2023 ರಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ನಂತರ ಗಾಯದ ಕಾರಣ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಐರ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ಸರಣಿಯಲ್ಲಿ ವಾಷಿಂಗ್ಟನ್ ಸುಂದರ್’ಗೆ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಅವಕಾಶ ನೀಡಬಹುದು, ಹೀಗಾದಲ್ಲಿ, ಫಿನಿಶರ್ ಪಾತ್ರವನ್ನು ನಿರ್ವಹಿಸುವ ಜವಾಬ್ದಾರಿಯೂ ಇರುತ್ತದೆ.


ನಡುಗಲಿದೆ ಐರ್ಲೆಂಡ್ ತಂಡ!


ತಮಿಳುನಾಡಿನ 23 ವರ್ಷದ ಆಲ್‌’ರೌಂಡರ್ ಕಳೆದ 6 ವರ್ಷಗಳಲ್ಲಿ ಹಲವಾರು ಗಾಯಗಳು ಮತ್ತು ಫಿಟ್‌ನೆಸ್ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇದರಿಂದಾಗಿ ಅವರು ಕಡಿಮೆ ಪಂದ್ಯಗಳನ್ನು ಆಡಲು ಸಾಧ್ಯವಾಯಿತು. ಟೀಂ ಇಂಡಿಯಾದಲ್ಲಿ ಈ ಆಟಗಾರ ವಾಪಸಾದ ಸುದ್ದಿ ಕೇಳಿ ಐರ್ಲೆಂಡ್ ತಂಡದಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ. ವಾಷಿಂಗ್ಟನ್ ಸುಂದರ್ ಐಪಿಎಲ್‌ನ ಮೊದಲ ಹಂತದಲ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾದರು. ನಂತರ ಅವರು ತಮಿಳುನಾಡು ಪ್ರೀಮಿಯರ್ ಲೀಗ್‌’ನಲ್ಲಿ ಪುನರಾಗಮನ ಮಾಡಿದರು. ಭಾರತ ಇನ್ನೂ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ಆಫ್ ಸ್ಪಿನ್ನರ್‌ಗಾಗಿ ಹುಡುಕುತ್ತಿದೆ. ಇನ್ನು ವಾಷಿಂಗ್ಟನ್ ಸುಂದರ್ ಆ ಕೊರತೆಯನ್ನು ತುಂಬುವುದು ಖಂಡಿತ.  


ಐರ್ಲೆಂಡ್ ವಿರುದ್ಧದ ಮೊದಲ T20Iಗೆ ಭಾರತದ ಸಂಭಾವ್ಯ ಪ್ಲೇಯಿಂಗ್ 11:


ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಶದೀಪ್ ಸಿಂಗ್, ಮುಖೇಶ್ ಕುಮಾರ್,


ಭಾರತ vs ಐರ್ಲೆಂಡ್ T20 ಸರಣಿ ವೇಳಾಪಟ್ಟಿ (ಭಾರತೀಯ ಕಾಲಮಾನ):


  • 1ನೇ ಟಿ20 ಪಂದ್ಯ, ಆಗಸ್ಟ್ 18, ರಾತ್ರಿ 7.30, ಡಬ್ಲಿನ್

  • 2ನೇ ಟಿ20 ಪಂದ್ಯ, ಆಗಸ್ಟ್ 20, ರಾತ್ರಿ 7.30, ಡಬ್ಲಿನ್

  • 3ನೇ ಟಿ20 ಪಂದ್ಯ, ಆಗಸ್ಟ್ 23, ರಾತ್ರಿ 7.30, ಡಬ್ಲಿನ್


ಇದನ್ನೂ ಓದಿ: ಕೊಹ್ಲಿ, ರೋಹಿತ್ ಅಲ್ಲ… ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಈ ಭಾರತೀಯನೇ ಅಗ್ರಸ್ಥಾನಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ