ಸೆಮಿಫೈನಲ್ ತಲುಪಲು ಪಾಕ್ ಟೀಂಗೆ ಸೂಪರ್ ಐಡಿಯಾ ಹೇಳಿಕೊಟ್ಟ ಅಕ್ರಮ್..! ನಡುಕ ಹುಟ್ಟಿಸುವ ಸೂತ್ರ
Wasim akram semi final idea : ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಪಾಕಿಸ್ತಾನಕ್ಕೆ ಸೆಮಿಫೈನಲ್ ತಲುಪಲು ಅದ್ಭುತವಾದ ಸೂತ್ರವೊಂದನ್ನು ಹೇಳಿಕೊಟ್ಟಿದ್ದಾರೆ. ಆ ಸಲಹೆ ಕೇಳಿದ್ರೆ ನೀವು ಬಿದ್ದು ಬಿದ್ದು ನಗುವುದಂತೂ ಖಂಡಿತ.. ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ವರದಿ ಇಲ್ಲಿದೆ..
Pakistan team semi final : 2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು ಬಹುತೇಕ ಸೆಮಿಫೈನಲ್ ರೇಸ್‌ನಿಂದ ಹೊರಗುಳಿದಿದೆ. ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು 287 ರನ್‌ಗಳಿಂದ ಸೋಲಿಸಿದರೆ ಅಥವಾ ಇಂಗ್ಲೆಂಡ್ ವಿರುದ್ಧ ಕೇವಲ 3.4 ಓವರ್‌ಗಳಲ್ಲಿ ಗೆದ್ದರೆ ಮಾತ್ರ 4ನೇ ಸ್ಥಾನಕ್ಕೆ ಬಂದು ಪಾಕ್ ಸೆಮಿಫೈನಲ್ ಪ್ರವೇಶಿಸಬಹುದು. ಆದ್ರೆ ಇಂಗ್ಲೆಂಡ್‌ನಂತಹ ತಂಡದ ವಿರುದ್ಧ ಈ ಸಾಹಸ ಮಾಡುವುದು ತುಂಬಾ ಸವಾಲಿನ ಕೆಲಸ. ಹೀಗಿರುವಾಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಹೊಸ ಸೂತ್ರವೊಂದನ್ನು ತಮ್ಮ ತಂಡಕ್ಕೆ ಹೇಳಿಕೊಟ್ಟಿದ್ದಾರೆ. ಈ ಸೂತ್ರವನ್ನು ಕೇಳಿದ್ರೆ ನೀವು ನಗುವುದು ಗ್ಯಾರಂಟಿ.
ಹೌದು.. ಪಾಕ್ ಮಾಜಿ ಕ್ರಿಕೆಟಿಗ ವಾಸಿಂ ಪಾಕಿಸ್ತಾನ ತಂಡಕ್ಕೆ ಅದ್ಭುತವಾದ ಐಡಿಯಾ ಕೊಟ್ಟಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ಸ್ಕೋರ್ ಮಾಡಿ, ನಂತರ 20 ನಿಮಿಷಗಳ ಕಾಲ ಡ್ರೆಸ್ಸಿಂಗ್ ರೂಮ್‌ನಲ್ಲಿ ಇಡೀ ಇಂಗ್ಲೆಂಡ್ ತಂಡವನ್ನು ಲಾಕ್ ಮಾಡಿಬಿಡಿ ಹೀಗೆ ಮಾಡಿದ್ರೆ ಸೆಮಿಫೈನಲ್ ತಲುಪಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ನ್ಯೂಜಿಲ್ಯಾಂಡ್ ಪರ ಆಡುತ್ತಿರುವ ಈ ಭಾರತೀಯನ ಮನಸ್ಸು ಕದ್ದ ಬೆಡಗಿ ಇವರೇ ! ಎಷ್ಟು ಮುದ್ದಾಗಿದೆ ನೋಡಿ ಇವರ ಕುಟುಂಬ !
ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ ಜೊತೆಗಿನ ಟೈಮ್ ಔಟ್ ಘಟನೆಯನ್ನು ಆಧರಿಸಿ ವಾಸಿಂ ಅಕ್ರಂ ಹೀಗೆ ಹೇಳಿದ್ದಾರೆ. ಶ್ರೀಲಂಕಾ vs ನ್ಯೂಜಿಲೆಂಡ್ ಪಂದ್ಯದಲ್ಲಿ, ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್‌ಗೆ ಬರಲು ಎರಡು ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದರಿಂದ ಪೆವಿಲಿಯನ್‌ಗೆ ಹೋಗಬೇಕಾಯಿತು. ವಿಕೆಟ್ ಪತನದ ನಂತರ, ಹೊಸ ಬ್ಯಾಟ್ಸ್‌ಮನ್ ಎರಡು ನಿಮಿಷಗಳ ಮಧ್ಯಂತರದ ನಂತರ ಸ್ಟ್ರೈಕ್ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ನಿಯಮಗಳ ಪ್ರಕಾರ ಅವರನ್ನು ಔಟ್ ಮಾಡಬಹುದು ಎಂಬ ನಿಯಮವಿದೆ.
ಪಾಕಿಸ್ತಾನವು ಇನ್ನೂ ಸೆಮಿಸ್‌ಗೆ ಅರ್ಹತೆ ಪಡೆಯಬಹುದು, ಇಂಗ್ಲೆಂಡ್ ವಿರುದ್ಧ ಮೊದಲು ಬ್ಯಾಟ್ ಮಾಡಿ, ನಂತರ ಅವರನ್ನು ಡ್ರೆಸ್ಸಿಂಗ್ ರೂಮ್‌ನಲ್ಲಿ 20 ನಿಮಿಷಗಳ ಕಾಲ ಲಾಕ್ ಮಾಡಬೇಕು, ಇದರಿಂದಾಗಿ ಇಡೀ ತಂಡವು ಟೌಮ್ ಔಟ್ ನಿಯಮ ಮೀರಿದೆ ಅಂತ ಘೋಷಿಸಲಾಗುತ್ತದೆ ಎಂದು ವಾಸಿಂ ಅಕ್ರಮ್ ಹೇಳಿದ್ದಾರೆ. ಪಾಕಿಸ್ತಾನಿ ಸ್ಪೋರ್ಟ್ಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಾಸಿಂ ಅಕ್ರಂ ಈ ಹೇಳಿಕೆ ನೀಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.