IND vs WI 1st ODI: ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಕೆಲ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ODI ಗಾಗಿ ತಮ್ಮ ಅತ್ಯುತ್ತಮ ಪ್ಲೇಯಿಂಗ್ XI ನ್ನು ಆಯ್ಕೆ ಮಾಡಿದ್ದಾರೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಇಂದು ಸಂಜೆ 7 ರಿಂದ ಬ್ರಿಡ್ಜ್‌ ಟೌನ್ (ಬಾರ್ಬಡೋಸ್) ನಲ್ಲಿರುವ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬಿಳಿ ಮುಟ್ಟಿನ ಸಮಸ್ಯೆ ಕೂಡ ಜೀವಕ್ಕೆ ಅಪಾಯ; ಪರಿಹಾರಕ್ಕಾಗಿ ಇಲ್ಲಿದೆ ಸರಳ ಮನೆ ಮದ್ದು!


ಬ್ರಿಡ್ಜ್‌ ಟೌನ್‌ನ (ಬಾರ್ಬಡೋಸ್) ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಇಂದು ನಡೆಯಲಿರುವ ಈ ಮೊದಲ ಏಕದಿನ ಪಂದ್ಯಕ್ಕೆ ವಾಸಿಂ ಜಾಫರ್ ಅವರು ಭಾರತದ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿದ್ದು, ಹೇಗಿದೆ ಎಂದು ನೋಡೋಣ.


ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ODI ಗಾಗಿ ಅವರ ಬೆಸ್ಟ್ ಪ್ಲೇಯಿಂಗ್ XI ನಲ್ಲಿ, ವಾಸಿಂ ಜಾಫರ್ ರೋಹಿತ್ ಶರ್ಮಾಗೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಪ್ಲೇಯಿಂಗ್ XI ನಲ್ಲಿ ಸ್ಥಾನ ನೀಡಿದ್ದಾರೆ. ಶರ್ಮಾ ಜೊತೆ ಓಪನರ್ ಆಗಿ ಸ್ಟಾರ್ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಅವರನ್ನು ಆಯ್ಕೆ ಮಾಡಿದ್ದಾರೆ. ರುತುರಾಜ್ ಗಾಯಕ್ವಾಡ್ ಅವರನ್ನು ವಾಸಿಂ ಜಾಫರ್ ಕೈಬಿಟ್ಟಿದ್ದಾರೆ. ಕೇವಲ 23 ನೇ ವಯಸ್ಸಿನಲ್ಲಿ, ಶುಬ್ಮನ್ ಗಿಲ್ ಎಲ್ಲಾ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ವಾಸಿಂ ಜಾಫರ್ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ.


ವಾಸಿಂ ಜಾಫರ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ODI ಗೆ ವಿರಾಟ್ ಕೊಹ್ಲಿಯನ್ನು ಮೂರನೇ ಮತ್ತು ವಿಕೆಟ್ ಕೀಪರ್ ಕಂ ಬ್ಯಾಟ್ಸ್‌ಮನ್ ಆಗಿ ಸಂಜು ಸ್ಯಾಮ್ಸನ್ ಅವರನ್ನು ಅತ್ಯುತ್ತಮ ಪ್ಲೇಯಿಂಗ್ XI ನಲ್ಲಿ ನಾಲ್ಕನೇ ಸ್ಥಾನದಲ್ಲಿ ಆಯ್ಕೆ ಮಾಡಿದ್ದಾರೆ. ಆದರೆ ಪಂದ್ಯ ವಿಜೇತ ಇಶಾನ್ ಕಿಶನ್‌ ಗೆ ಇಲ್ಲಿ ಅವಕಾಶ ನೀಡಿದಲ್ಲ. ಹಾರ್ದಿಕ್ ಪಾಂಡ್ಯ ಅವರನ್ನು ಐದನೇ ಸ್ಥಾನಕ್ಕೆ ಆಯ್ಕೆ ಮಾಡಿದರೆ, ಸೂರ್ಯಕುಮಾರ್ ಯಾದವ್ ಅವರನ್ನು ಪ್ಲೇಯಿಂಗ್ XI ನಲ್ಲಿ 6 ನೇ ಕ್ರಮಾಂಕದ ಬ್ಯಾಟಿಂಗ್ ಸ್ಥಾನದಲ್ಲಿ ಅವಕಾಶ ನೀಡಿದ್ದಾರೆ.


ಆಲ್‌ರೌಂಡರ್‌ಗಳು ಮತ್ತು ಸ್ಪಿನ್ನರ್‌ಗಳು:


ವಾಸಿಂ ಜಾಫರ್ ಅವರು ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು 7ನೇ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಇಬ್ಬರನ್ನೂ ಸಹ ತಮ್ಮ ಬೆಸ್ಟ್ ಪ್ಲೇಯಿಂಗ್ XI ನಲ್ಲಿ ಸೇರಿಸಿಕೊಂಡಿದ್ದಾರೆ.


ವೇಗದ ಬೌಲರ್:


ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ODI ಗಾಗಿ ಮೊಹಮ್ಮದ್ ಸಿರಾಜ್ ಮತ್ತು ಉಮ್ರಾನ್ ಮಲಿಕ್ ಅವರನ್ನು ತಮ್ಮ ಬೆಸ್ಟ್ ಪ್ಲೇಯಿಂಗ್ XI ನಲ್ಲಿ (11 ಪ್ಲೇಯಿಂಗ್) ವೇಗದ ಬೌಲರ್‌ಗಳಾಗಿ ಇರಿಸಿಕೊಂಡಿದ್ದಾರೆ. ಆದರೆ ಈ ಎರಡೂ ವಿಭಾಗಗಳಲ್ಲೂ ಯುಜುವೇಂದ್ರ ಚಾಹಲ್, ಶಾರ್ದೂಲ್ ಠಾಕೂರ್ ಅವರಂತಹ ಆಟಗಾರರಿಗೆ ವಾಸಿಂ ಅವಕಾಶ ನೀಡಿಲ್ಲ.


ಇದನ್ನೂ ಓದಿ: 53ರಲ್ಲೂ ರಾಗಾ ಸಖತ್‌ ಫಿಟ್..! ಸಿಕ್ಸ್‌ ಪ್ಯಾಕ್ಸ್‌, ಸ್ಟ್ರಾಂಗೆಸ್ಟ್‌ ಬಾಡಿಯ ಗುಟ್ಟೇನು ಗೊತ್ತಾ..?


ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ODI ಗೆ ವಾಸಿಂ ಜಾಫರ್ ಬೆಸ್ಟ್ ಪ್ಲೇಯಿಂಗ್ XI:


ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.