ಅಶ್ವಿನ್ ಎದುರು ಅತೀ ಬುದ್ದಿವಂತಿಕೆ ತೋರಿಸಲು ಬಂದ ಡೇವಿಡ್ ವಾರ್ನರ್! ಆದ್ರೆ ಬೆಪ್ಪಾಗಿ ಔಟ್ ಆಗಿದ್ದು ಮಾತ್ರ ಹೀಗೆ..
Ashwin-David Warner: ಹೀರೋ ಆಗಲು ಹೋದ ಡೇವಿಡ್ ವಾರ್ನರ್ ಅವರ ಪ್ರಯತ್ನವನ್ನು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಗ್ಗುಬಡಿದಿದ್ದು ಮಾತ್ರ ಇಡೀ ಪಂದ್ಯದ ಹೈಲೈಟ್’ಗಳಲ್ಲಿ ಒಂದು.
Ashwin-David Warner: ಇಂದೋರ್’ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಸರಣಿಯ ಎರಡನೇ ODI ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾರತವು DLS ಆಧಾರದ ಮೇಲೆ ಆಸ್ಟ್ರೇಲಿಯಾವನ್ನು 99 ರನ್’ಗಳಿಂದ ಸೋಲಿಸಿತು. ಇದರೊಂದಿಗೆ ಭಾರತ ತಂಡ ಸರಣಿಯನ್ನೂ ಗೆದ್ದುಕೊಂಡಿದೆ. ಟೀಂ ಇಂಡಿಯಾ 5 ವಿಕೆಟ್‌ಗೆ 399 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಮಳೆಯಿಂದಾಗಿ ಆಸ್ಟ್ರೇಲಿಯ ತಂಡ 33 ಓವರ್’ಗಳಲ್ಲಿ 317 ರನ್’ಗಳ ಗುರಿಯನ್ನು ಪಡೆದಿತ್ತು. ಆದರೆ ಟೀಂ ಇಂಡಿಯಾದ ಅದ್ಭುತ ಬೌಲಿಂಗ್’ಗೆ ಮಂಕಾದ ಕಾಂಗಾರೂ ಪಡೆ 28.2 ಓವರ್’ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 217 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದನ್ನೂ ಓದಿ: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ತಂಡ ಯಾವುದು ಗೊತ್ತಾ?
ಈ ಎಲ್ಲದರ ಮಧ್ಯೆ ಹೀರೋ ಆಗಲು ಹೋದ ಡೇವಿಡ್ ವಾರ್ನರ್ ಅವರ ಪ್ರಯತ್ನವನ್ನು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಗ್ಗುಬಡಿದಿದ್ದು ಮಾತ್ರ ಇಡೀ ಪಂದ್ಯದ ಹೈಲೈಟ್’ಗಳಲ್ಲಿ ಒಂದು.
ಈ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ (104) ಮತ್ತು 3ನೇ ಶ್ರೇಯಾಂಕದ ಶ್ರೇಯಸ್ ಅಯ್ಯರ್ (105) ಶತಕ ಬಾರಿಸಿದ್ದರು. ಇವರಲ್ಲದೆ ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ 72 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ನಾಯಕ ಕೆಎಲ್ ರಾಹುಲ್ 52 ರನ್ ಕೊಡುಗೆ ನೀಡಿದರು. ಇದಾದ ಬಳಿಕ ಮಳೆಯಿಂದಾಗಿ 33 ಓವರ್’ಗಳಲ್ಲಿ 317 ರನ್’ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 28.2 ಓವರ್’ಗಳಲ್ಲಿ 217 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 53 ರನ್ ಹಾಗೂ ಸೀನ್ ಅಬಾಟ್ 54 ರನ್ ಗಳಿಸಿದರು. ಭಾರತದ ಪರ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ 3 ವಿಕೆಟ್ ಪಡೆದರು.
ಎಡಗೈ ಬದಲಿಗೆ ಬಲಗೈಯಿಂದ ಬ್ಯಾಟಿಂಗ್!
ಡೇವಿಡ್ ವಾರ್ನರ್ ಎಡಗೈ ಬ್ಯಾಟ್ಸ್ಮನ್. ಆದರೆ ಇಂದೋರ್ ODI ನಲ್ಲಿ, ಅಶ್ವಿನ್ ಅವರ ಆಫ್-ಸ್ಪಿನ್ ಅನ್ನು ಬಲಗೈಯಿಂದ ಆಡಲು ಆರಂಭಿಸಿದರು. ಆಸ್ಟ್ರೇಲಿಯದ ಇನಿಂಗ್ಸ್’ನ 13ನೇ ಓವರ್’ನಲ್ಲಿ ಬಲಗೈಯಿಂದ ಬೌಂಡರಿ ಸಹ ಬಾರಿಸಿದರು. ಆದರೆ ನಂತರದ ಅಶ್ವಿನ್ ಎಸೆತಕ್ಕೆ ಸಮತೋಲನ ಕಳೆದುಕೊಂಡ ವಾರ್ನರ್ ವಿಕೆಟ್ ಒಪ್ಪಿಸಿದರು.
ಪಂದ್ಯದ ವೇಳೆ ಮೈದಾನಕ್ಕೆ ಬಡಿದ ಸಿಡಿಲು! ಇಬ್ಬರು ಸಾವು- ಮೂವರ ಸ್ಥಿತಿ ಗಂಭೀರ
ಅಶ್ವಿನ್ ಅವರ ಆ ಎಸೆತ ಡೇವಿಡ್ ವಾರ್ನರ್ ಕಾಲಿಗೆ ಬಡಿಯಿತು. ಅಂಪೈರ್ ಅವರನ್ನು ಎಲ್ಬಿಡಬ್ಲ್ಯೂ ಎಂದು ಘೋಷಿಸಿದರು. ವಾರ್ನರ್ ತನ್ನ ಜೊತೆಗಾರನ ಬಳಿ ಡಿಆರ್’ಎಸ್ ಕೇಳಿದಾಗ, ಆತ ಅದನ್ನು ನಿರಾಕರಿಸಿದ. ಹೀಗಾಗಿ ಪೆವಿಲಿಯನ್’ಗೆ ಮರಳಿದರು. ನಂತರ ಅವರ ಬ್ಯಾಟ್’ಗೆ ಬಡಿದ ಚೆಂಡು ಅವರ ಪ್ಯಾಡ್’ಗೆ ಬಡಿದಿದೆ ಎಂದು ವೀಡಿಯೊ ಬಹಿರಂಗಪಡಿಸಿತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ