WATCH: ಪುಟ್ಬಾಲ್ ವಿಶ್ವಕಪ್ ಗೆಲುವಿನ ನಂತರ ಹೇಗಿತ್ತು ಗೊತ್ತಾ? ಮೆಸ್ಸಿ ಡ್ಯಾನ್ಸ್..!
1986 ರ ನಂತರ ಮೊದಲ ಬಾರಿಗೆ ಪುಟ್ಬಾಲ್ ವಿಶ್ವಚಾಂಪಿಯನ್ ಶಿಪ್ ಆಗಿರುವ ಅರ್ಜೆಂಟೈನಾ ತಂಡವು ತನ್ನ ಗೆಲುವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದೆ.
ಕತಾರ್: 1986 ರ ನಂತರ ಮೊದಲ ಬಾರಿಗೆ ಪುಟ್ಬಾಲ್ ವಿಶ್ವಚಾಂಪಿಯನ್ ಶಿಪ್ ಆಗಿರುವ ಅರ್ಜೆಂಟೈನಾ ತಂಡವು ತನ್ನ ಗೆಲುವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದೆ.
ಹೌದು,ಭಾನುವಾರ ಲುಸೈಲ್ ಕ್ರೀಡಾಂಗಣದಲ್ಲಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ 3 ನೇ ವಿಶ್ವಕಪ್ ಗೆದ್ದ ನಂತರ ಮೆಸ್ಸಿ ಕೈಯಲ್ಲಿ ವಿಶ್ವಕಪ್ ಟ್ರೋಫಿಯೊಂದಿಗೆ ಲಾಕರ್ ರೂಮ್ ಗೆ ಪ್ರವೇಶಿಸಿ ಟೇಬಲ್ ಮೇಲೆ ಏರಿ ಡ್ಯಾನ್ಸ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಇಡೀ ಅರ್ಜೆಂಟೈನಾ ತಂಡವು ಸಂಭ್ರಮದಲ್ಲಿ ಮುಳುಗಿತ್ತು,ಆಗ ಲೌಟಾರೊ ಮಾರ್ಟಿನೆಜ್ ಅವರ ಜೊತೆ ಸೇರಿ ಟ್ರೋಪಿಯೊಂದಿಗೆ ಮೇಜಿನ ಮೇಲೆ ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಅರ್ಜೆಂಟೀನಾ ಆಟಗಾರರು ಚುಕುಬುಕು ರೈಲಿನ ಹಾಗೆ ಸಾಲನ್ನು ಮಾಡಿ ನೃತ್ಯ ಮಾಡುತ್ತಿರುವುದನ್ನು ನಾವು ಕಾಣಬಹುದಾಗಿದೆ.
1986 ರಲ್ಲಿ ಮರಡೋನಾ ಅರ್ಜೆಂಟೈನಾ ತಂಡಕ್ಕೆ ಕೊನೆಯ ಬಾರಿಗೆ ವಿಶ್ವಕಪ್ ನ್ನು ತಂದುಕೊಟ್ಟಿದ್ದರು.ಈಗ ಇದಾದ ಮೂವತ್ತು ವರ್ಷಗಳ ನಂತರ ಅರ್ಜೆಂಟೀನಾಗೆ ವಿಶ್ವಕಪ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.