Nitish Kumar Reddy: ನಿತೀಶ್‌ ಕುಮಾರ್‌ ರೆಡ್ಡಿ... ಈ ಹೆಸರು ಕೇಳಿದ್ರೆ ಇದೀಗ ಬಾಂಗ್ಲಾ ಬೌಲರ್‌ಗಳು ಕನಸಿನಲ್ಲೂ ಬೆಚ್ಚಿಬೀಳುವಂತಾಗಿದೆ. ಇದಕ್ಕೆ ಕಾರಣ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ 2ನೇ ಟಿ-20 ಪಂದ್ಯದಲ್ಲಿ ಅವರ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ. ಹೌದು, 2ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ನಿತೀಶ್ ಆಟಕ್ಕೆ ಇಡೀಗ ಬಾಂಗ್ಲಾದೇಶ ತಂಡವೇ ದಂಗಾಗಿದೆ. ಸ್ಫೋಟಕ ಬ್ಯಾಟಿಂಗ್‌ ಮೂಲಕ ಕೇವಲ 34 ಎಸೆತಗಳಲ್ಲಿ 74 ರನ್ ಗಳಿಸಿದ ನಿತೀಶ್‌ ರೆಡ್ಡಿ ಅಕ್ಷರಶಹಃ ಬಾಂಗ್ಲಾ ಬೌಲರ್‌ಗಳ ಬೇವರಿಳಿಸಿದರು. ನಿತೀಶ್ ಅವರ ಈ ಇನ್ನಿಂಗ್ಸ್‌ನಲ್ಲಿ 7 ಭರ್ಜರಿ ಸಿಕ್ಸರ್‌ ಹಾಗೂ 4 ಬೌಂಡರಿಗಳು ಸೇರಿದ್ದವು.


COMMERCIAL BREAK
SCROLL TO CONTINUE READING

ಈ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಆದರೆ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ಸಂಜು ಸ್ಯಾಮ್ಸನ್(10)‌ ಮತ್ತು ಅಭಿಷೇಕ್‌ ಶರ್ಮಾ(15) ಕೇವಲ 25 ರನ್​​ಗಳಿಗೆ ಪೆವಿಲಿಯನ್ ಸೇರಿದರು. ನಂತರ ಬಂದ ನಾಯಕ ಸೂರ್ಯಕುಮಾರ್‌ ಯಾದವ್‌ ಸಹ 8 ರನ್ ಗಳಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಹೀಗಾಗಿ ಟೀಂ ಇಂಡಿಯಾ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದ್ದರಿಂದ 100 ರನ್ ಕಲೆಹಾಕುವುದು ಕಷ್ಟಕರವಾಗಿತ್ತು. 


ಒಂದೇ ಏಟಿಗೆ ಮೂವರು ದಿಗ್ಗಜ್ಜರ ದಾಖಲೆ ಉಡೀಸ್ ! ಬಹು ದೊಡ್ಡ ಸಾಧನೆಯತ್ತ ಅರ್ಷದೀಪ್ ಸಿಂಗ್


ಟೀಂ ಇಂಡಿಯಾದ ಬೌಲಿಂಗ್‌ ದಾಳಿಗೆ ಸಿಲುಕಿ ನಲುಗಿತು. 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಕೇವಲ 135 ರನ್‌ ಗಳಿಸಲಷ್ಟೇ ಶಕ್ತವಾಯಿತು.  


ಇದನ್ನೂ ಓದಿ: T20ಯಲ್ಲಿ ಭಾರತವನ್ನು ಪುಡಿ ಪುಡಿ ಮಾಡುತ್ತೇವೆ! ಟೀಂ ಇಂಡಿಯಾಗೆ ಮತ್ತೆ ಬೆದರಿಕೆ ಹಾಕಿದ ಬಾಂಗ್ಲಾ ನಾಯಕ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.