Shubman Gill: ಆಸ್ಟ್ರೇಲಿಯದ ಆಲ್‌ ರೌಂಡರ್‌ ಕ್ಯಾಮರೂನ್‌ ಗ್ರೀನ್‌, ಶುಭ್ಮನ್‌ ಗಿಲ್‌ ಅವರ ಕ್ಯಾಚ್ ಹಿಡಿದಿರುವುದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಂಬಂಧ ವಿಡಿಯೋ ಕೂಡ ವೈರಲ್ ಆಗುತ್ತಿದ್ದು, ಟೆಸ್ಟ್ ನಲ್ಲಿ ಭಾರತ ಗೆಲ್ಲಲೇಬೇಕಾದ ಪಂದ್ಯದಲ್ಲಿ ಮೋಸದಾಟ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿಶ್ವಕಪ್’ಗೂ ಮುನ್ನ Team Indiaಗೆ ಸಿಹಿಸುದ್ದಿ: 2 ವರ್ಷಗಳ ಬಳಿಕ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾನೆ ಈ ಮಾರಕ ಬೌಲರ್!


ಎಲ್ಲದಕ್ಕೂ ಮೊದಲು ಈ ದೃಶ್ಯ​ ಒಮ್ಮೆ ನೋಡಿ.


ಭಾರತ ತನ್ನ ಪ್ರಬಲ ಹೋರಾಟವನ್ನು ಆಸೀಸ್ ವಿರುದ್ಧ ನಡೆಸುತ್ತಿದೆ. ಈ ಸಂದರ್ಭದಲ್ಲಿ ಶುಭ್ಮನ್ ಗಿಲ್ ಅವರು, ಸ್ಕಾಟ್ ಬೋಲ್ಯಾಂಡ್‌ ಎಸೆತದಲ್ಲಿ ರನ್ ಕಲೆ ಹಾಕಲು ಮುಂದಾದಾಗ ಆ ಬಾಲ್ ನ್ನು ಕ್ಯಾಮರೂನ್ ಗ್ರೀನ್ ಕ್ಯಾಚ್ ಪಡೆದರು. ಆದರೆ ಆ ಬಾಲ್ ನೆಲದ ಅಂಚಿಗೆ ತಾಗಿದೆ. ಆದರೂ ಸಹ ಆ ಎಸೆತವನ್ನು ಔಟ್ ಎಂದು ಅಂಪೈರ್ ಘೋಷಿಸಿ, ಶುಭ್ಮನ್ ಪೆವಿಲಿಯನ್ ಗೆ ಮರಳುವಂತೆ ಮಾಡಿದರು.


ಗ್ರೀನ್ ಅವರು ಕ್ಲೀನ್ ಕ್ಯಾಚ್ ಹಿಡಿದಿದ್ದಾರೆ ಎಂದನಿಸಿದರೂ ಸಹ ಅದನ್ನು ಒಪ್ಪಲು ಟೀಂ ಇಂಡಿಯಾ ಫ್ಯಾನ್ಸ್ ಸಿದ್ಧರಿಲ್ಲ. ಇಲ್ಲಿ ಮೋಸದಾಟ ನಡೆಯುತ್ತಿದೆ ಎಂದು ದೂರುತ್ತಿದ್ದಾರೆ. ಈ ಹಿಂದೆ ಬಾಲ್ ಟ್ಯಾಂಪರಿಂಗ್ ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿತ್ತು.


ದುರದೃಷ್ಟವಶಾತ್ ಭಾರತದ ಪರ ಬ್ಯಾಟ್ ಬೀಸಿದ್ದ ಗಿಲ್ ಕೇವಲ 18 ರನ್‌ ಗಳಿಗೆ ಔಟಾದರು. ನಾಲ್ಕನೇ ದಿನದ ಟೀ ಬ್ರೇಕ್ ಸಮಯಕ್ಕೆ ಭಾರತದ ಸ್ಕೋರ್ 1 ವಿಕೆಟ್ ನಷ್ಟಕ್ಕೆ 41 ರನ್ ಆಗಿದೆ.


ಇದನ್ನೂ ಓದಿ: ತಾಳ್ಮೆಯ ಪ್ರತೀಕ ಧೋನಿಗೆ ಈ ವ್ಯಕ್ತಿಯನ್ನ ಕಂಡ್ರೆ ಆಗಲ್ಲ…! ಬಾಲ್ಯದ ದ್ವೇಷಕ್ಕೆ ‘ರಕ್ತಸಂಬಂಧ’ವನ್ನೇ ದೂರವಿಟ್ಟರು ಮಾಹಿ


ಈ ಮಧ್ಯೆ ಗಿಲ್ ಔಟ್ ವಿಚಾರವಾಗಿ ಥರ್ಡ್ ಅಂಪೈರ್ ನೀಡಿದ ನಿರ್ಧಾರವನ್ನು ಭಾರತದ ಮಾಜಿ ಆಟಗಾರರು ಮತ್ತು ಕಾಮೆಂಟೇಟರ್‌ ಗಳು ಧಿಕ್ಕರಿಸಿದ್ದು, ಗಿಲ್‌ ಬೆಂಬಲಕ್ಕೆ ನಿಂತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ