ನವದೆಹಲಿ: ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭಾರತೀಯ ಬೌಲರ್‌ಗಳು ಇಂಗ್ಲೆಂಡ್ ಆಟಗಾರರನ್ನು ಔಟ್ ಮಾಡಲು ಕಷ್ಟಪಡುತ್ತಿದ್ದ ವೇಳೆ ನಾಯಕ ವಿರಾಟ್ ಕೊಹ್ಲಿ ಮುಖ್ಯ ಬೌಲರ್ ಗಳಿಗೆ ಸ್ವಲ್ಪ ಬಿಡುವು ನೀಡಿ ರೋಹಿತ್ ಶರ್ಮಾ ಅವರಿಗೆ ಬೌಲಿಂಗ್ ನೀಡಿದರು.


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಹಿಟ್ ಮ್ಯಾನ್ ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಕ್ರಮವನ್ನು ಅನುಕರಿಸಿದರು,ಇದು ಭಾರತೀಯ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿತು.ರೋಹಿತ್ ಕೇವಲ ಎರಡು ಓವರ್‌ಗಳನ್ನು ಎಸೆದು ಏಳು ರನ್ ನೀಡಿದರು.


ಮುಂಬೈ ಇಂಡಿಯನ್ಸ್, ಫ್ರ್ಯಾಂಚೈಸ್ ರೋಹಿತ್ ಐದು ಐಪಿಎಲ್ ಪ್ರಶಸ್ತಿಗಳಿಗೆ ಕಾರಣವಾಗಿದ್ದಾರೆ.ರೋಹಿತ್ ಶರ್ಮಾ ಟಿ ವಿರಾಮಕ್ಕೂ ಮೊದಲು ತಮ್ಮ ಕೊನೆಯ ಎಸೆತದಲ್ಲಿ ಹರ್ಭಜನ್ ಸಿಂಗ್ ಅವರ ಶೈಲಿಯನ್ನು ಅನುಸರಿಸಿದರು ಎಂದು ಮುಂಬೈ ಇಂಡಿಯನ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.



ಹಾಸ್ಯಭರಿತ ಟ್ವೀಟ್‌ಗಳಿಗೆ ಹೆಸರುವಾಸಿಯಾದ ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಮ್ ಜಾಫರ್ ಕೂಡ ರೋಹಿತ್ ಅವರ ಬೌಲಿಂಗ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.ರೋಹಿತ್ ಹೆಚ್ಚು ಬೌಲಿಂಗ್ ಮಾಡದಿದ್ದರೂ, ಅರೆಕಾಲಿಕ ಬೌಲರ್‌ ಆಗಿ ಆಗಾಗ ಕಾಣಿಸಿಕೊಳ್ಳುತ್ತಾರೆ.ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ಬ್ರಿಸ್ಬೇನ್ ಟೆಸ್ಟ್ ಪಂದ್ಯದ ವೇಳೆ ರೋಹಿತ್ ಮಧ್ಯಮ ವೇಗದ ಎಸೆತವನ್ನು ಎಸೆದು ನವದೀಪ್ ಸೈನಿ ಓವರ್ ಪೂರ್ಣಗೊಳಿಸಿದರು.


ಎರಡನೇ ದಿನದಂದು ಸಂದರ್ಶಕರು ಆಟದ ಮೇಲೆ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದರು, ಇಂಗ್ಲೆಂಡ್ ನಾಯಕ ಜೋ ರೂಟ್ ಮತ್ತು ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರ ಬ್ಯಾಟಿಂಗ್ ನಿಂದಾಗಿ ಈಗ ಆರು ವಿಕೆಟ್ ನಷ್ಟಕ್ಕೆ 477 ರನ್ ಗಳಿಸಿದೆ. ಜೋ
ರೂಟ್ ಅವರು ಭರ್ಜರಿ 218 ರನ್ ಗಳನ್ನು ಗಳಿಸಿದ್ದಾರೆ. ಈಗ ತಮ್ಮ 100 ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕವನ್ನು ಗಳಿಸಿದ
ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.