ನವದೆಹಲಿ: ಸೋಮವಾರದಂದು ಅಫ್ಘಾನಿಸ್ತಾನ ತಂಡವನ್ನು ಸೋಲಿಸಿದ ನಂತರ ಮಾತನಾಡಿದ ಶಕೀಬ್ ಅಲ್ ಹಸನ್ ಬಾಂಗ್ಲಾದೇಶದ ತಂಡಕ್ಕೆ ಭಾರತ ತಂಡವನ್ನು ಸೋಲಿಸುವ ಇದೆ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನ ತಂಡದ ವಿರುದ್ಧ ಗೆಲ್ಲುವ ಮೂಲಕ ಬಾಂಗ್ಲಾದೇಶ ತಂಡವು ಈಗ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. 


COMMERCIAL BREAK
SCROLL TO CONTINUE READING

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಶಕೀಬ್ ಅಲ್ ಹಸನ್ ' ಭಾರತ ಅಗ್ರಸ್ಥಾನದಲ್ಲಿದೆ, ಅವರು ವಿಶ್ವಕಪ್ ಟ್ರೋಪಿ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಅದು ಅಷ್ಟು ಸುಲಭವಾಗಿರುವುದಿಲ್ಲ, ಏಕೆಂದರೆ ನಾವು ಸೂಕ್ತ ಪ್ರತಿಕ್ರಿಯೆ ನೀಡಲಿದ್ದೇವೆ' ಎಂದು ಅವರು ಸುದ್ದಿಗಾರರಿಗೆ ಹೇಳಿದರು.


"ಅನುಭವವು ಸಹಾಯ ಮಾಡುತ್ತದೆ, ಆದರೆ ಅನುಭವವೇ ಜಗತ್ತಿನ ಅಂತ್ಯವಲ್ಲ. ಭಾರತವನ್ನು ಸೋಲಿಸಲು ನಾವು ನಮ್ಮ ಅತ್ಯುತ್ತಮ ಕ್ರಿಕೆಟ್ ಆಡಬೇಕಾಗಿದೆ' ಎಂದರು.'ಅವರು ವಿಶ್ವ ದರ್ಜೆಯ ಆಟಗಾರರನ್ನು ಹೊಂದಿದ್ದಾರೆ, ಆದ್ದರಿಂದ ಅವರು ಅತ್ಯುತ್ತಮವಾಗಿ ನಿಭಾಯಿಸಬಹುದು. ಆದರೆ ನಮ್ಮದು ಕೂಡ ಸಮರ್ಥ ತಂಡ ಎಂದು ನಾನು ನಂಬುತ್ತೇನೆ. ಭಾರತ ತಂಡವನ್ನು ಸೋಲಿಸುವ ಸಾಮರ್ಥ್ಯ ನಮ್ಮಲ್ಲಿದೆ ಎಂದು ಹೇಳಿದರು.


ಶಕೀಬ್ ಅವರು ಈ ವರ್ಷದ ವಿಶ್ವಕಪ್ ನಲ್ಲಿ  476 ರನ್ ಗಳನ್ನು ಗಳಿಸುವ ಮೂಲಕ ಅಗ್ರಸ್ಥಾನವನ್ನು ಪಡೆದಿದ್ದಾರೆ.