Andre Russell vs Australia 3rd T20: ಟಿ20 ಸರಣಿಯ ಮೂರನೇ ಪಂದ್ಯ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿದೆ. ಮೊದಲೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಆತಿಥೇಯ ಆಸ್ಟ್ರೇಲಿಯಾ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ಆಲ್’ರೌಂಡರ್ ಬ್ಯಾಟಿಂಗ್ ವೇಳೆ ಸಂಚಲನ ಮೂಡಿಸಿದ್ದು, ಕೇವಲ 29 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 71 ರನ್ ಗಳಿಸಿದ್ದಾರೆ. ಇದರ ಆಧಾರದ ಮೇಲೆ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಂದು ವಿರಾಟ್ ಮೆನೇಜರ್… ಇಂದು ಈ ಕ್ರಿಕೆಟಿಗನ ಮುದ್ದಿನ ಮಡದಿ: 5 ಮಿಲಿಯನ್’ಗೂ ಅಧಿಕ ಸಂಪತ್ತಿನ ಒಡತಿ ಈ ಬಾಲಕಿ ಯಾರೆಂದು ಗೆಸ್ ಮಾಡಿ


35 ವರ್ಷದ ಆಂಡ್ರೆ ರಸೆಲ್ ಇನಿಂಗ್ಸ್‌’ನ 19ನೇ ಓವರ್‌’ನಲ್ಲಿ ರನ್ ಮಳೆ ಸುರಿಸಿದ್ದಾರೆ. 4 ಸಿಕ್ಸರ್‌ ಸಹಾಯದಿಂದ 28 ​​ರನ್ ಗಳಿಸಿದ ಝಂಪಾ, ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ್ದಾರೆ.


ರಸೆಲ್ ಅವರ ಬಿರುಸಿನ ಇನ್ನಿಂಗ್ಸ್‌’ನ ಹೊರತಾಗಿ, ಶೆರ್ಫೇನ್ ರುದರ್‌ಫೋರ್ಡ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು 40 ಎಸೆತಗಳಲ್ಲಿ 67 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌’ನಲ್ಲಿ 5 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳು ಸೇರಿದ್ದವು.


ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: 2 ಬಾರಿ ED ಸಮನ್ಸ್ ಜಾರಿಯಾದರೂ ವಿಚಾರಣೆಗೆ ಹಾಜರಾಗುತ್ತಿಲ್ಲ ಫಾರೂಕ್


ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲರ್‌’ಗಳು ಹೀನಾಯವಾಗಿ ಸೋತಿದ್ದು ಸುಳ್ಳಲ್ಲ. ಅದರಲ್ಲೂ ಲೆಗ್ ಸ್ಪಿನ್ನರ್ ಆಡಮ್ ಝಂಪಾ ಅತ್ಯಂತ ದುಬಾರಿ ಎನಿಸಿದರು. ತಮ್ಮ 4 ಓವರ್‌’ಗಳನ್ನು ಪೂರ್ಣಗೊಳಿಸಿದ ಅವರು, 65 ರನ್ ನೀಡಿ ಕೇವಲ 1 ವಿಕೆಟ್ ಪಡೆದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ