6 ಅಡಿ ಎತ್ತರ, 140 ಕೆಜಿ ತೂಕ... ಕ್ರಿಕೆಟ್ ಲೋಕದಲ್ಲೇ ಅತಿ ದಡೂತಿ ಕ್ರಿಕೆಟಿಗನೀತ! ಕೇವಲ 16 ರನ್ಗೆ 5 ವಿಕೆಟ್ ಕಿತ್ತು ಮಿಂಚಿದ ಈ ದೈತ್ಯ ಬೌಲರ್ ಯಾರು ಗೊತ್ತಾ?
Rahkeem Cornwall: ಈ ಬೌಲರ್ ಬೇರೆ ಯಾರೂ ಅಲ್ಲ, ಸಿಪಿಎಲ್ ಇತಿಹಾಸದಲ್ಲಿ ಹಿಂದೆಂದೂ ಕಾಣದಂತಹ ಸಾಧನೆಯನ್ನು ಮಾಡಿದ ಪ್ರಸಿದ್ಧ ವೆಸ್ಟ್ ಇಂಡೀಸ್ ಬೌಲರ್ ರಹಕೀಮ್ ಕಾರ್ನ್‌ವಾಲ್. 6 ಅಡಿ ಎತ್ತರ ಮತ್ತು 140 ಕೆಜಿ ತೂಕದ ರಹಕೀಮ್ ಕಾರ್ನ್‌ವಾಲ್ ಸಿಪಿಎಲ್ʼನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
Rahkeem Cornwall: ವೆಸ್ಟ್ ಇಂಡೀಸ್ʼನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) 2024 ಸದ್ಯ ನಡೆಯುತ್ತಿದ್ದು, ಈ ಬಗ್ಗೆ ವಿಶ್ವದೆಲ್ಲೆಡೆ ಭಾರೀ ಮಾತುಗಳು ಕೇಳಿಬರುತ್ತಿದೆ. ಆಗಸ್ಟ್ 29 ರಿಂದ ಆರಂಭವಾದ ಈ ಲೀಗ್ʼನಲ್ಲಿ ಇದುವರೆಗೆ 18 ಪಂದ್ಯಗಳು ನಡೆದಿವೆ. ಸೆಪ್ಟೆಂಬರ್ 17 ರಂದು, ಕೆನ್ಸಿಂಗ್ಟನ್ ಓವಲ್ʼನಲ್ಲಿ ಬಾರ್ಬಡೋಸ್ ರಾಯಲ್ಸ್ ಮತ್ತು ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ನಡುವೆ ರೋಚಕ ಪಂದ್ಯ ನಡೆದಿತ್ತು. ಇದರಲ್ಲಿ ಓರ್ವ ಬೌಲರ್ ಇತಿಹಾಸ ಸೃಷ್ಟಿಸಿದರು.
ಈ ಬೌಲರ್ ಬೇರೆ ಯಾರೂ ಅಲ್ಲ, ಸಿಪಿಎಲ್ ಇತಿಹಾಸದಲ್ಲಿ ಹಿಂದೆಂದೂ ಕಾಣದಂತಹ ಸಾಧನೆಯನ್ನು ಮಾಡಿದ ಪ್ರಸಿದ್ಧ ವೆಸ್ಟ್ ಇಂಡೀಸ್ ಬೌಲರ್ ರಹಕೀಮ್ ಕಾರ್ನ್‌ವಾಲ್. 6 ಅಡಿ ಎತ್ತರ ಮತ್ತು 140 ಕೆಜಿ ತೂಕದ ರಹಕೀಮ್ ಕಾರ್ನ್‌ವಾಲ್ ಸಿಪಿಎಲ್ʼನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಬಾರ್ಬಡೋಸ್ ರಾಯಲ್ಸ್ ಬೌಲರ್ ರಹಕೀಮ್ ಕಾರ್ನ್‌ವಾಲ್ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ವಿರುದ್ಧ ಅದ್ಭುತವಾಗಿ ಬೌಲಿಂಗ್ ಮಾಡಿದ್ದಲ್ಲದೆ, ಏಕಾಂಗಿಯಾಗಿ ಅರ್ಧ ತಂಡವನ್ನು ಹೊರಹಾಕಿದ್ದರು. 4 ಓವರ್ ಗಳಲ್ಲಿ ಕೇವಲ 16 ರನ್ ನೀಡಿ 5 ವಿಕೆಟ್ ಪಡೆದು ಸಿಪಿಎಲ್ ʼಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇದು ಟಿ20 ಕ್ರಿಕೆಟ್ʼನಲ್ಲಿ ರಹಕೀಮ್ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.
ಇದನ್ನೂ ಓದಿ: 64 ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ಶ್ರೀಮಂತ ಉದ್ಯಮಿ ಜೊತೆ 3 ನೇ ಬಾರಿ ಸಪ್ತಪದಿ ತುಳಿದ ಸ್ಟಾರ್ ಹೀರೋಯಿನ್!
ರಹಕೀಮ್ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 5 ವಿಕೆಟ್ ಪಡೆದ ವಿಶ್ವದ 10 ನೇ ಬೌಲರ್ ಮತ್ತು ವೆಸ್ಟ್ ಇಂಡೀಸ್ʼನ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಿಪಿಎಲ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ಬೌಲರ್ʼನ ಅತ್ಯುತ್ತಮ ಪ್ರದರ್ಶನ ಇದಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.