ದ್ವಿತೀಯ ಟೆಸ್ಟ್: ಕೊಹ್ಲಿ, ಮಾಯಾಂಕ್ ಅಗರವಾಲ್ ಅರ್ಧಶತಕ, ಭಾರತ 264\5
ವೆಸ್ಟ್ ಇಂಡೀಸ್ ವಿರುದ್ಧದ ಸಬಿನಾ ಪಾರ್ಕ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ 264\5 ಮೊತ್ತ ಗಳಿಸಿದೆ.
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಸಬಿನಾ ಪಾರ್ಕ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ 264\5 ಮೊತ್ತ ಗಳಿಸಿದೆ.
ಸದ್ಯ ಕ್ರಿಸ್ ನಲ್ಲಿ ಹನುಮಾ ವಿಹಾರಿ ಮತ್ತು ರಿಷಭ್ ಪಂತ್ ಇಬ್ಬರೂ ಮೊದಲ ದಿನ ಆಟದ ಮುಕ್ತಾಯದಲ್ಲಿ ಕ್ರಮವಾಗಿ 42 ಮತ್ತು 27 ರನ್ ಗಳಲ್ಲಿ ಆಡುತ್ತಿದ್ದಾರೆ. ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 32 ರನ್ ಗಳಾಗುವಷ್ಟರಲ್ಲಿ ಕೆ.ಎಲ್ ರಾಹುಲ್ ಅವರ ವಿಕೆಟ್ ಕಳೆದುಕೊಂಡಿತು. ತದನಂತರ ಮಾಯಾಂಕ್ ಅಗರವಾಲ್ ಹಾಗೂ ವಿರಾಟ್ ಕೊಹ್ಲಿ ಕ್ರಮವಾಗಿ 55, ಹಾಗೂ 76 ರನ್ ಗಳಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು.
ಮೊದಲ ಟೆಸ್ಟ್ ಪಂದ್ಯದಲ್ಲಿ ಮಿಂಚಿದ್ದ ಅಜಿಂಕ್ಯಾ ರಹಾನೆ ರೊಚ್ ಅವರಿಗೆ ವೈಯಕ್ತಿಕ ಮೊತ್ತ 24 ರನ್ ಗಳಾಗಿದ್ದಾಗ ವಿಕೆಟ್ ಒಪ್ಪಿಸಿದರು. ಈಗ ಹನುಮ ವಿಹಾರಿ ಮತ್ತು ರಿಶಬ್ ಪಂತ್ ಕ್ರಿಸ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ
ವೆಸ್ಟ್ ಇಂಡೀಸ್ ತಂಡದ ಪರವಾಗಿ ಜೇಸನ್ ಹೋಲ್ಡರ್ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರತ ತಂಡದ ರನ್ ಗತಿಗೆ ಕಡಿವಾಣ ಹಾಕಿದರು.