ಆಂಟಿಗುವಾ: ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ನಲ್ಲಿ ಭಾರತ 6 ವಿಕೆಟ್ ಕಳೆದುಕೊಂಡು 203 ರನ್ ಗಳಿಸಿದೆ.



COMMERCIAL BREAK
SCROLL TO CONTINUE READING

ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡವು ಭಾರತ ತಂಡಕ್ಕೆ ಆರಂಭದಲ್ಲೇ  93 ರನ್ ಗಳಿಗೆ ನಾಲ್ಕು ವಿಕೆಟ್ ಗಳನ್ನು ತೆಗೆದು ಕೊಳ್ಳುವ ಮೂಲಕ ಆಘಾತ ನೀಡಿತು. ಒಂದಡೆ ಈ ಸಂದರ್ಭದಲ್ಲಿ ಏಕಾಂಗಿ ಹೋರಾಟ ನಡೆಸಿದ ಅಜಿಂಕ್ಯಾ ರಹಾನೆ 81 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರೂ ಆದರೆ ಶತಕ ಗಳಿಸುವ ನಿರೀಕ್ಷೆಯಲ್ಲಿ ಅವರಿಗೆ ಗ್ಯಾಬ್ರಿಯಲ್ ಆಘಾತ ನೀಡಿದರು. ಕರ್ನಾಟಕದ ಕೆ.ಎಲ್ ರಾಹುಲ್ 44 ರನ್ ಗಳಿಸಿ ಔಟಾದರು.




ಸದ್ಯ ಕ್ರಿಸ್ ನಲ್ಲಿರುವ ರಿಶಬ್ ಪಂತ್ ಹಾಗೂ ರವೀಂದ್ರ ಜಡೇಜಾ ಕ್ರಮವಾಗಿ 20,3 ರನ್ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ಪರವಾಗಿ ಕೆಮಾರ್ ಮೂರು  ಹಾಗೂ ಶಾನನ್ ಗ್ಯಾಬ್ರಿಯಲ್ ಎರಡು ವಿಕೆಟ್ ಕಬಳಿಸುವ ಮೂಲಕ ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.