ಏಕದಿನ ಪಂದ್ಯಗಳಿಗೆ ರೋಹಿತ್ ಶರ್ಮಾ ನಾಯಕತ್ವ ವಹಿಸಿರುವುದಕ್ಕೆ ಗಂಗೂಲಿ ಹೇಳಿದ್ದೇನು?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ, ಮಂಡಳಿ ಮತ್ತು ಆಯ್ಕೆಗಾರರು ಒಟ್ಟಾಗಿ ರೋಹಿತ್ ಶರ್ಮಾ ಅವರನ್ನು ತಂಡದ ಪೂರ್ಣಾವಧಿಯ ನಾಯಕರನ್ನಾಗಿ ನೇಮಕ ಮಾಡುವ ವಿಚಾರವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ, ಮಂಡಳಿ ಮತ್ತು ಆಯ್ಕೆಗಾರರು ಒಟ್ಟಾಗಿ ರೋಹಿತ್ ಶರ್ಮಾ ಅವರನ್ನು ತಂಡದ ಪೂರ್ಣಾವಧಿಯ ನಾಯಕರನ್ನಾಗಿ ನೇಮಕ ಮಾಡುವ ವಿಚಾರವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರನ್ನು ಬುಧವಾರ ಭಾರತದ ನೂತನ ಏಕದಿನ ಪಂದ್ಯಗಳ ನಾಯಕ ಎಂದು ಹೆಸರಿಸಲಾಯಿತು ಮತ್ತು ಮುಂದಿನ ವರ್ಷ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಸರಣಿಯೊಂದಿಗೆ ಪ್ರಾರಂಭವಾಗುವ ವಿರಾಟ್ ಕೊಹ್ಲಿಯಿಂದ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ : OMG: ಈ ಸ್ವೆಟರ್ ಬೆಲೆ 30 ಲಕ್ಷ ರೂಪಾಯಿಯಂತೆ, ಅಂಥದ್ದೇನಿದೆ ಇದರಲ್ಲಿ?
ತಾವು ಮತ್ತು ಆಯ್ಕೆ ಸಮಿತಿ ಅಧ್ಯಕ್ಷರು ಕೂಡ ಕೊಹ್ಲಿ ಜತೆ ಮಾತನಾಡಿರುವುದಾಗಿ ಗಂಗೂಲಿ ತಿಳಿಸಿದ್ದಾರೆ. ಸೀಮಿತ ಓವರ್‌ಗಳ ಮಾದರಿಯಲ್ಲಿ ಕೊಹ್ಲಿ ನೀಡಿದ ಕೊಡುಗೆಗಳಿಗಾಗಿ ಗಂಗೂಲಿ ಧನ್ಯವಾದಗಳನ್ನು ಅರ್ಪಿಸಿದರು.
"ಇದು ಬಿಸಿಸಿಐ ಮತ್ತು ಆಯ್ಕೆಗಾರರು ಒಟ್ಟಾಗಿ ತೆಗೆದುಕೊಂಡಿದೆ. ವಾಸ್ತವವಾಗಿ, BCCI T20I ನಾಯಕತ್ವದಿಂದ ಕೆಳಗಿಳಿಯದಂತೆ ವಿರಾಟ್ ಅವರನ್ನು ವಿನಂತಿಸಿತ್ತು, ಆದರೆ ಸ್ಪಷ್ಟವಾಗಿ, ಅವರು ಒಪ್ಪಲಿಲ್ಲ. ಮತ್ತು ಆಯ್ಕೆದಾರರು ನಂತರ ಎರಡು ವಿಭಿನ್ನತೆಯನ್ನು ಹೊಂದಿರುವುದು ಸರಿಯೆನಿಸಲಿಲ್ಲ" ಎಂದು ಗಂಗೂಲಿ ಎಎನ್‌ಐಗೆ ತಿಳಿಸಿದರು.
"ಆದ್ದರಿಂದ ವಿರಾಟ್ ಟೆಸ್ಟ್ ನಾಯಕರಾಗಿ ಮುಂದುವರಿಯುತ್ತಾರೆ ಮತ್ತು ರೋಹಿತ್ ಏಕದಿನ ಪಂದ್ಯಗಳಿಗೆ ನಾಯಕರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದು ನಿರ್ಧರಿಸಲಾಯಿತು. ಅಧ್ಯಕ್ಷನಾಗಿ ನಾನು ವಿರಾಟ್ ಕೊಹ್ಲಿ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದೇನೆ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷರು ಸಹ ಅವರೊಂದಿಗೆ ಮಾತನಾಡಿದ್ದಾರೆ.
ಇದನ್ನೂ ಓದಿ : IIT-Bombay Placement: ಮೊದಲ ದಿನದಂದೇ 2.05 ಕೋಟಿ ರೂ ಪ್ಯಾಕೇಜ್ ನೀಡಿದ Uber
"ರೋಹಿತ್ ಶರ್ಮಾ ಅವರ ನಾಯಕತ್ವದ ಸಾಮರ್ಥ್ಯಗಳಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ, ಮತ್ತು ವಿರಾಟ್ ಟೆಸ್ಟ್ ನಾಯಕರಾಗಿ ಮುಂದುವರಿಯುತ್ತಾರೆ. ಭಾರತೀಯ ಕ್ರಿಕೆಟ್ ಉತ್ತಮ ಕೈಯಲ್ಲಿದೆ ಎಂದು ನಾವು ವಿಶ್ವಾಸ ಹೊಂದಿದ್ದೇವೆ.ಏಕದಿನ ಸ್ವರೂಪದಲ್ಲಿ ನಾಯಕನಾಗಿ ಅವರು ನೀಡಿದ ಕೊಡುಗೆಗಳಿಗಾಗಿ ನಾವು ವಿರಾಟ್ ಕೊಹ್ಲಿಗೆ ಧನ್ಯವಾದಗಳು" ಎಂದು ಗಂಗೂಲಿ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.