Equation for Reserve Day, India vs Pakistan weather Update: ಏಷ್ಯಾ ಕಪ್ ಸೂಪರ್-4 ಸುತ್ತಿನ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 10 ರಂದು ಮುಖಾಮುಖಿಯಾಗಿದ್ದವು. ಆದರೆ ಸತತ ಮಳೆಯಿಂದಾಗಿ ಈ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಬೇಕಾಯಿತು. ಈ ಪಂದ್ಯದ ಫಲಿತಾಂಶ ಈಗ ಮೀಸಲು ದಿನದಂದು ಅಂದರೆ ಇಂದು (ಸೆಪ್ಟೆಂಬರ್ 11) ತಿಳಿಯಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಾರದ ಮೊದಲ ದಿನವೇ ಈ ರಾಶಿಯವರನ್ನು ಹರಸಲಿದ್ದಾನೆ ಮಹಾಶಿವ: ಇಂದು ಎಲ್ಲವೂ ಸನ್ಮಂಗಳ: ಸಂಪತ್ತಿನ ಮಳೆ


ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡ ಸ್ಥಳದಲ್ಲೇ ಮತ್ತೆ ಇಂದು ಪಂದ್ಯ ಆರಂಭವಾಗಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಕೊಲಂಬೊದ ಹವಾಮಾನ ವರದಿ ಹೇಗಿದೆ ಎಂದು ತಿಳಿಯೋಣ.


ಹವಾಮಾನ ವರದಿ:


“ಕೊಲಂಬೊದಲ್ಲಿ ಸೋಮವಾರದ ಹವಾಮಾನ ಮುನ್ಸೂಚನೆಯು ಕಳಪೆ ಮಟ್ಟದಲ್ಲಿದ್ದು, ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ 2023 ಸೂಪರ್ 4 ಪಂದ್ಯ ಮೀಸಲು ದಿನದಂದೂ ಆಡಲು ಸಾಧ್ಯವಿಲ್ಲ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಯೊಬ್ಬರು ಪೋಸ್ಟ್ ಮಾಡಿದ್ದಾರೆ.


ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್ 2023 ಸೂಪರ್ 4 ಪಂದ್ಯಕ್ಕಾಗಿ ರಿಸರ್ವ್ ದಿನದಂದು ಕೂಡ ಕೊಲಂಬೊಗೆ ಹವಾಮಾನ ಉತ್ತಮವಾಗಿ ಕಾಣಿಸುತ್ತಿಲ್ಲ. ಸೋಮವಾರ ಶೇ 97ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಅಂದರೆ ಆಟ ಪುನರಾರಂಭವಾಗುವ ಹೊತ್ತಿಗೆ 99 ಪ್ರತಿಶತದಷ್ಟು ಮೋಡ ಕವಿದಿರುತ್ತದೆ ಎಂದು ಹೇಳಲಾಗುತ್ತಿದೆ.


ಆರಂಭಿಕರ ಸ್ಪೋಟಕ ಬ್ಯಾಟಿಂಗ್:


ಈ ಪಂದ್ಯದ ಆರಂಭದಲ್ಲಿ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದರು. ರೋಹಿತ್ ಮತ್ತು ಶುಭ್ಮನ್ ಮೊದಲ ವಿಕೆಟ್‌’ಗೆ 121 ರನ್‌ಗಳ ಜೊತೆಯಾಟ ಆಡಿದ್ದು, ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ನೀಡಿದ್ದರು.


ಹಿಟ್‌ ಮ್ಯಾನ್ ರೋಹಿತ್ ಶರ್ಮಾ 49 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌’ಗಳ ನೆರವಿನಿಂದ 56 ರನ್ ಗಳಿಸಿದರೆ, ಶುಭ್ಮನ್ ತಮ್ಮ ODI ವೃತ್ತಿಜೀವನದ ಎಂಟನೇ ಅರ್ಧಶತಕವನ್ನು ಬಾರಿಸಿದರು. ಶುಭ್ಮನ್ 52 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 58 ರನ್ ಗಳಿಸಿ ಔಟಾದರು. ಸದ್ಯ ಕೆಎಲ್ ರಾಹುಲ್ 28 ಎಸೆತಗಳಲ್ಲಿ 17 ರನ್ ಹಾಗೂ ವಿರಾಟ್ ಕೊಹ್ಲಿ 16 ಎಸೆತಗಳಲ್ಲಿ ಎಂಟು ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಇಬ್ಬರೂ ಆಟಗಾರರು ಮೀಸಲು ದಿನದಂದು ಭಾರತದ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ.


ಪಂದ್ಯ ರದ್ದಾದರೆ ಕಥೆ ಏನು?


ಇನ್ನು ಮೀಸಲು ದಿನದಂದು ಕೂಡ ಈ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಯಾವ ತಂಡಕ್ಕೆ ಲಾಭವಾಗಲಿದೆ ಎಂಬ ಪ್ರಶ್ನೆ ಕೆಲವು ಅಭಿಮಾನಿಗಳ ಮನಸ್ಸಿನಲ್ಲಿದೆ. ಇದಕ್ಕೆ ಉತ್ತರ ನಾವಿಂದು ನೀಡಲಿದ್ದೇವೆ.


ಸೆಪ್ಟಂಬರ್ 11 ಅಂದರೆ ರಿಸರ್ವ್ ಡೇ ದಿನವೂ ಪಂದ್ಯ ಪೂರ್ಣಗೊಳ್ಳದಿದ್ದರೆ ಮುಂದೇನು ಎಂಬ ಪ್ರಶ್ನೆ ಕೆಲ ಅಭಿಮಾನಿಗಳ ಮನದಲ್ಲಿ ಮೂಡುವುದು ಖಂಡಿತ. ಒಂದು ವೇಳೆ ಪಂದ್ಯ ಪೂರ್ಣಗೊಳ್ಳದಿದ್ದರೆ ಭಾರತ-ಪಾಕಿಸ್ತಾನ ತಂಡಗಳು ಅಂಕಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಅಂದರೆ ಉಭಯ ತಂಡಗಳು ತಲಾ 1 ಅಂಕ ಪಡೆಯುತ್ತವೆ.


ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಲಾ ಒಂದು ಗೆಲುವಿನೊಂದಿಗೆ 2 ಅಂಕಗಳನ್ನು ಪಡೆದಿವೆ. ಉತ್ತಮ ನಿವ್ವಳ ರನ್ ರೇಟ್ ನಿಂದಾಗಿ ಪಾಕಿಸ್ತಾನ ಅಗ್ರಸ್ಥಾನದಲ್ಲಿದೆ. ಒಂದು ವೇಳೆ ಅಂಕಗಳನ್ನು ಹಂಚಿಕೊಂಡರೆ ಪಾಕಿಸ್ತಾನಕ್ಕೆ 3 ಅಂಕಗಳು ಲಭಿಸುತ್ತವೆ. ಇನ್ನೊಂದೆಡೆ ಭಾರತ 1 ಅಂಕ ಪಡೆದರೆ ಶ್ರೀಲಂಕಾ ಜೊತೆ ಜಂಟಿ ಸ್ಥಾನದಲ್ಲಿರಲಿದೆ.  


ಇದನ್ನೂ ಓದಿ: ಮುಂದಿನ 111 ದಿನಗಳಲ್ಲಿ ಈ ರಾಶಿಯವರಿಗೆ ಕೋಟ್ಯಾಧಿಪತಿ ಯೋಗ: ವೃತ್ತಿಯಲ್ಲಿ ಬ್ರಹ್ಮಾಂಡ ಗೆಲುವು, ಸಿರಿತನ ಹುಡುಕಿ ಬರುತ್ತೆ


ಭಾರತ ಸೆಪ್ಟೆಂಬರ್ 12 ರಂದು ಶ್ರೀಲಂಕಾ ಮತ್ತು ಸೆಪ್ಟೆಂಬರ್ 15 ರಂದು ಬಾಂಗ್ಲಾದೇಶವನ್ನು ಎದುರಿಸಬೇಕಾಗಿದೆ. ಹೀಗಿರುವಾಗ ಟೀಂ ಇಂಡಿಯಾ ಪ್ರತಿ ಪಂದ್ಯವನ್ನು ಗೆಲ್ಲಲೇಬೇಕು. ಅಂದಾಗ ಮಾತ್ರ ಫೈನಲ್ ತಲುಪುವ ಆಸೆ ಜೀವಂತವಾಗಿರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ