Ishan Kishan-Shreyas Iyer: ಭಾರತ ತಂಡದ ಯುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಇಬ್ಬರೂ ಕಳೆದ ಕೆಲವು ದಿನಗಳಿಂದ ಚರ್ಚಾ ವಿಷಯವಾಗಿದ್ದಾರೆ.. ಇದಕ್ಕೆ ದೊಡ್ಡ ಕಾರಣವೆಂದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಕೇಂದ್ರ ಒಪ್ಪಂದದಿಂದ ಅವರನ್ನು ಕೈಬಿಟ್ಟಿದ್ದು.. ಬಿಸಿಸಿಐ ಮನವಿ ಹಾಗೂ ಖಡಕ್‌ ವಾರ್ನಿಂಗ್ ಹೊರತಾಗಿಯೂ ಈ ಇಬ್ಬರೂ ಆಟಗಾರರು ರಣಜಿ ಟ್ರೋಫಿಯಲ್ಲಿ ಆಡದಿರುವುದು ಇದಕ್ಕೆ ಪ್ರಮುಖ ಕಾರಣವಾಗಿತ್ತು. ಕೇಂದ್ರ ಒಪ್ಪಂದದಿಂದ ಹೊರಗುಳಿದ ನಂತರ ಇದೀಗ ಮೊದಲ ಬಾರಿಗೆ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.. 


COMMERCIAL BREAK
SCROLL TO CONTINUE READING

ಅಯ್ಯರ್ ಮತ್ತು ಇಶಾನ್ ಮಂಡಳಿಯ ಸೂಚನೆಗಳನ್ನು ಪರಿಗಣಿಸದೇ ಇದ್ದಿದ್ದರಿಂದ ಇಬ್ಬರ ಕೇಂದ್ರ ಒಪ್ಪಂದವನ್ನು ರದ್ದುಗೊಳಿಸಲಾಗಿದೆ... ಆದರೆ, ಇದೀಗ ಕೋಚ್ ದ್ರಾವಿಡ್ ಅವರ ಹೊಸ ಹೇಳಿಕೆಯಿಂದ ಅವರಿಗೆ ಕೊಂಚ ರಿಲೀಫ್ ಸಿಗಬಹುದು. ಈ ಇಬ್ಬರೂ ಆಟಗಾರರು ದೇಶೀಯ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಆದ್ಯತೆ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಆದರೆ ಇದೇ ಕಾರಣಕ್ಕಾಗಿಯೇ ಅವರು ರಣಜಿ ಟ್ರೋಫಿಯಲ್ಲಿ ಆಡಲು ನಿರಾಕರಿಸಿದ್ದರು.. ಇಷ್ಟೆಲ್ಲಾ ನಾಟಕೀಯತೆಯ ನಡುವೆಯೂ ಶ್ರೇಯಸ್ ಸೆಮಿಫೈನಲ್ ಪಂದ್ಯದಲ್ಲಿ ಭಾಗವಹಿಸಿದ್ದು, ಅವರ ತಂಡ ಮುಂಬೈ ಕೂಡ ಫೈನಲ್ ತಲುಪಿದೆ. ಆದರೆ, ಇದೆಲ್ಲದರ ನಡುವೆ ದ್ರಾವಿಡ್ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ದೊಡ್ಡ ಹೇಳಿಕೆ ನೀಡಿದ್ದಾರೆ.


ಇದನ್ನೂ ಓದಿ-ICC World Test Championship: ಇಂಗ್ಲೆಂಡ್ ವಿರುದ್ಧ 4-1 ಅಂತರದಲ್ಲಿ ಗೆದ್ದು, ಅಗ್ರ ಸ್ಥಾನಕ್ಕೇರಿದ ಭಾರತ


"ಅವರು ಯಾವಾಗಲೂ ತಂಡದ ಚಿಂತನೆಯಲ್ಲಿರುತ್ತಾರೆ.. ದೇಶೀಯ ಕ್ರಿಕೆಟ್ ಆಡುವವರೂ ಇದರಲ್ಲಿ ಸೇರಿದ್ದಾರೆ.. ಮೊದಲ ವಿಷಯವೆಂದರೆ ನಾನು ಕೇಂದ್ರ ಒಪ್ಪಂದವನ್ನು ನಿರ್ಧರಿಸುವುದಿಲ್ಲ... ಒಪ್ಪಂದಗಳನ್ನು ಆಯ್ಕೆದಾರರು ಮತ್ತು ಮಂಡಳಿಯು ನಿರ್ಧರಿಸುತ್ತದೆ. ಅದರ ಮಾನದಂಡ ಏನು ಎಂದು ನನಗೆ ತಿಳಿದಿಲ್ಲ. ಕೇಂದ್ರ ಒಪ್ಪಂದದಲ್ಲಿ ಯಾವ ಆಟಗಾರರನ್ನು ಸೇರಿಸಲಾಗಿದೆ ಎಂಬುದೂ ನನಗೆ ತಿಳಿದಿಲ್ಲ. ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ನಾವು 15 ಅಥವಾ ಆಡುವ ಹನ್ನೊಂದನ್ನು ಚರ್ಚಿಸುತ್ತೇವೆ. ಯಾರೂ ಈ ತಂಡದಿಂದ ಹೊರಗಿಲ್ಲ. ಅವರು ಫಿಟ್ ಆಗಿರಬೇಕು, ಕ್ರಿಕೆಟ್ ಆಡಬೇಕು ಮತ್ತು ತಮ್ಮ ಪ್ರದರ್ಶನದಿಂದ ಆಯ್ಕೆದಾರರನ್ನು ಮೆಚ್ಚಿಸಬೇಕು.


IPL 2024 ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಅಯ್ಯರ್ ಮತ್ತು ಕಿಶನ್ ಇಬ್ಬರೂ ಈ ಪಂದ್ಯಾವಳಿಯಲ್ಲಿ ತಮ್ಮನ್ನು ತಾವು ಸಾಬೀತುಪಡಿಸುವ ಹಂಬಲದಲ್ಲಿದ್ದಾರೆ.. ಏಕೆಂದರೆ ಐಪಿಎಲ್ ನಂತರ ಟಿ -20 ವಿಶ್ವಕಪ್ ಕೂಡ ನಡೆಯಲಿದೆ. ಸದ್ಯ ಈ ಇಬ್ಬರೂ ಆಟಗಾರರು ತಮ್ಮ ಪ್ರದರ್ಶನದಿಂದ ತಂಡದಲ್ಲಿ ತಮ್ಮ ಸ್ಥಾನವನ್ನು ಪಡೆಯಲು ಬಯಸುತ್ತಿದ್ದಾರೆ.. ಇಶಾನ್ ಮುಂಬೈ ಪರ ಆಡುತ್ತಿದ್ದು, MI ತನ್ನ ಮೊದಲ ಪಂದ್ಯವನ್ನು ಗುಜರಾತ್ ವಿರುದ್ಧ ಮಾರ್ಚ್ 24 ರಂದು ಆಡಲಿದೆ. ಹಾಗಾಗಿ ಅಯ್ಯರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.


ಇದನ್ನೂ ಓದಿ-Mumbai Indians Women vs Gujarat Giants : ಡೆತ್ ಓವರ್ ಗಳಲ್ಲಿ ಅಬ್ಬರಿಸಿದ ಹರ್ಮನ್ ಪ್ರೀತ್ ಕೌರ್: ಹಲವು ದಾಖಲೆಗಳು ಉಡೀಸ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.