T20 World Cup 2024: 2007 ರಲ್ಲಿ ಮೊದಲ ಬಾರಿಗೆ T20 ವಿಶ್ವಕಪ್ ಪ್ರಾರಂಭವಾಯಿತು. ಅದೇ ವರ್ಷ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಇತಿಹಾಸವನ್ನು ಸೃಷ್ಟಿಸುವ ಮೂಲಕ ಮೊದಲ ಬಾರಿಗೆ T20 ವಿಶ್ವಕಪ್ ಟ್ರೋಫಿಯನ್ನು ಗೆದ್ದಿತ್ತು. 2007ರ T20 ವಿಶ್ವಕಪ್‌’ನ ಫೈನಲ್‌’ನಲ್ಲಿ ಭಾರತ 5 ರನ್‌’ಗಳಿಂದ ಪಾಕಿಸ್ತಾನವನ್ನು ಸೋಲಿಸಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Snake Attract Plants: ಮನೆಯ ಸುತ್ತ ಈ ಗಿಡಗಳನ್ನು ತಪ್ಪಿಯೂ ಬೆಳೆಸಬೇಡಿ… ಹಾವುಗಳು ಬರುತ್ತೆ!


ಆ ಕಾಲದಲ್ಲಿ ಪಾಕಿಸ್ತಾನವು ಅತ್ಯಂತ ಅಪಾಯಕಾರಿ ತಂಡವಾಗಿತ್ತು, ಇದರಲ್ಲಿ ಮೊಹಮ್ಮದ್ ಹಫೀಜ್, ಇಮ್ರಾನ್ ನಜೀರ್, ಮಿಸ್ಬಾ ಉಲ್ ಹಕ್, ಶಾಹಿದ್ ಅಫ್ರಿದಿ ಮತ್ತು ಮೊಹಮ್ಮದ್ ಆಸಿಫ್ ಅವರಂತಹ ಅಪಾಯಕಾರಿ ಟಿ20 ಆಟಗಾರರು ಇದ್ದರು. ಭಾರತ ತಂಡದಲ್ಲಿ ಹಿರಿಯ ಆಟಗಾರರಾದ ಗೌತಮ್ ಗಂಭೀರ್, ಯುವರಾಜ್ ಸಿಂಗ್, ನಾಯಕ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಮತ್ತು ಯೂಸುಫ್ ಪಠಾಣ್ ಕೂಡ ಇದ್ದರು.


ಇದುವರೆಗೆ ಕೇವಲ 6 ದೇಶಗಳು ಟಿ20 ವಿಶ್ವಕಪ್‌ ಪ್ರಶಸ್ತಿ ಗೆದ್ದಿವೆ. ಅವುಗಳೆಂದರೆ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಲಾ 2 ಬಾರಿ ಟಿ20 ವಿಶ್ವಕಪ್ ಟ್ರೋಫಿಯನ್ನು ಗರಿಷ್ಠ ಬಾರಿ ಗೆದ್ದಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಲಾ ಒಂದು ಬಾರಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿವೆ.


ಭಾರತ ಮೊದಲ ಬಾರಿಗೆ 2007ರಲ್ಲಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿತ್ತು. ಇದಾದ ಬಳಿಕ ಪಾಕಿಸ್ತಾನ 2009ರಲ್ಲಿ, ಇಂಗ್ಲೆಂಡ್ ತಂಡ 2010ರಲ್ಲಿ, ವೆಸ್ಟ್ ಇಂಡೀಸ್ 2012 ರಲ್ಲಿ, ಶ್ರೀಲಂಕಾ 2014, ವೆಸ್ಟ್ ಇಂಡೀಸ್ 2016, 2021 ರಲ್ಲಿ, ಆಸ್ಟ್ರೇಲಿಯಾ, 2022 ರಲ್ಲಿ ಇಂಗ್ಲೆಂಡ್ ಎರಡನೇ ಬಾರಿಗೆ ಟಿ 20 ವಿಶ್ವಕಪ್ ಟ್ರೋಫಿಯನ್ನು ವಶಪಡಿಸಿಕೊಂಡಿತು.


ಇಲ್ಲಿಯವರೆಗೆ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ


  • T20 ವಿಶ್ವಕಪ್ 2007: ಭಾರತ (ಪಾಕಿಸ್ತಾನವನ್ನು 5 ರನ್‌ಗಳಿಂದ ಸೋಲಿಸಿತು)

  • T20 ವಿಶ್ವಕಪ್ 2009: ಪಾಕಿಸ್ತಾನ (ಶ್ರೀಲಂಕಾವನ್ನು 8 ವಿಕೆಟ್‌ಗಳಿಂದ ಸೋಲಿಸಿತು)

  • T20 ವಿಶ್ವಕಪ್ 2010: ಇಂಗ್ಲೆಂಡ್ (ಆಸ್ಟ್ರೇಲಿಯಾವನ್ನು 7 ವಿಕೆಟ್‌ಗಳಿಂದ ಸೋಲಿಸಿತು)

  • T20 ವಿಶ್ವಕಪ್ 2012: ವೆಸ್ಟ್ ಇಂಡೀಸ್ (ಶ್ರೀಲಂಕಾವನ್ನು 36 ರನ್‌ಗಳಿಂದ ಸೋಲಿಸಿತು)

  • T20 ವಿಶ್ವಕಪ್ 2014: ಶ್ರೀಲಂಕಾ (ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿತು)

  • T20 ವಿಶ್ವಕಪ್ 2016: ವೆಸ್ಟ್ ಇಂಡೀಸ್ (ಇಂಗ್ಲೆಂಡ್ ಅನ್ನು 4 ವಿಕೆಟ್‌ಗಳಿಂದ ಸೋಲಿಸಿತು)

  • T20 ವಿಶ್ವಕಪ್ 2021: ಆಸ್ಟ್ರೇಲಿಯಾ (8 ವಿಕೆಟ್‌ಗಳಿಂದ ನ್ಯೂಜಿಲೆಂಡ್ ಅನ್ನು ಸೋಲಿಸಿತು)

  • T20 ವಿಶ್ವಕಪ್ 2022: ಇಂಗ್ಲೆಂಡ್ (ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿತು)


 


ಅತಿ ಹೆಚ್ಚು ಟಿ20 ವಿಶ್ವಕಪ್ ಟ್ರೋಫಿ ಗೆದ್ದ ದಾಖಲೆ


  • ವೆಸ್ಟ್ ಇಂಡೀಸ್ - 2 ಬಾರಿ

  • ಇಂಗ್ಲೆಂಡ್ - 2 ಬಾರಿ

  • ಭಾರತ - 1 ಬಾರಿ

  • ಪಾಕಿಸ್ತಾನ - 1 ಬಾರಿ

  • ಶ್ರೀಲಂಕಾ - 1 ಬಾರಿ

  • ಆಸ್ಟ್ರೇಲಿಯಾ - 1 ಬಾರಿ


ಇದನ್ನೂ ಓದಿ: ಮಹಿಳಾ ಕ್ರಿಕೆಟ್ ನಲ್ಲಿ ಇತಿಹಾಸ  ರಚಿಸಿದ ಭಾರತ, 603ರನ್ ಗಳ ದಾಖಲೆ ಬರೆದ ಹರ್ಮನ್ ಪ್ರೀತ್ ಕೌರ್ ಪಡೆ!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್