T20 World Cup 2024 Semi Final Fixtures: ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಇತಿಹಾಸ ಸೃಷ್ಟಿಸಿ, T20 ವಿಶ್ವಕಪ್ 2024 ರ ಸೆಮಿಫೈನಲ್‌’ಗೆ ಪ್ರವೇಶಿಸಿದೆ. ಅಫ್ಘಾನಿಸ್ತಾನ ಸೆಮಿಫೈನಲ್ ತಲುಪುತ್ತಿದ್ದಂತೆ, ಟೂರ್ನಿಯ ಅಗ್ರ-4 ತಂಡಗಳನ್ನು ನಿರ್ಧರಿಸಲಾಗಿದೆ. ಭಾರತ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿಫೈನಲ್‌’ಗೆ ಲಗ್ಗೆ ಇಟ್ಟಿವೆ. ಎರಡೂ ಸೆಮಿಫೈನಲ್ ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ಜೂನ್ 27 ರಂದು ನಡೆಯಲಿದೆ. ಸೆಮಿಫೈನಲ್‌ನಲ್ಲಿ ಯಾವ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ ಎಂಬುದನ್ನು ತಿಳಿಯೋಣ


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅರಮನೆಯೇ ಮಂಕಾಗುವಷ್ಟು ಐಷಾರಾಮಿಯಾಗಿದೆ ರೋಹಿತ್ ಶರ್ಮಾ ಮನೆ: ಹಿಟ್’ಮ್ಯಾನ್ ಹೌಸ್ ಸ್ಪೆಷಾಲಿಟಿ ತಿಳಿದ್ರೆ ಕಳೆದೋಗ್ತೀರ!


T20 ವಿಶ್ವಕಪ್ 2024ರ ಮೊದಲ ಸೆಮಿಫೈನಲ್ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಲಿದೆ. ಈ ಪಂದ್ಯವು ಜೂನ್ 27 ರಂದು ಭಾರತೀಯ ಕಾಲಮಾನ ಬೆಳಿಗ್ಗೆ 6 ಗಂಟೆಗೆ ಟ್ರಿನಿಡಾಡ್‌’ನ ತರೋಬಾದ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆಯಲಿದೆ.


ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಎದುರಿಸಲಿದೆ. ಈ ಪಂದ್ಯ ಕೂಡ ಜೂನ್ 27 ರಂದು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.


ಪಂದ್ಯಾವಳಿಯಲ್ಲಿ ಕಳಪೆ ಆರಂಭ ತೋರಿದ್ದ ಇಂಗ್ಲೆಂಡ್ ತಂಡ ಅದ್ಭುತ ಪುನರಾಗಮನ ಮಾಡಿ ಸೆಮಿಫೈನಲ್‌ಗೆ ಪ್ರವೇಶಿಸಿತು. ಅದೇ ಸಮಯದಲ್ಲಿ, ಟೀಮ್ ಇಂಡಿಯಾ ಇಲ್ಲಿಯವರೆಗೆ ಅಜೇಯವಾಗಿದ್ದು, ತನ್ನ ಕೊನೆಯ ಸೂಪರ್-8 ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಅಗ್ರ-4 ರೊಳಗೆ ಪ್ರವೇಶಿಸಿದೆ. ಅಂದಹಾಗೆ 2022 ರ ಟಿ20 ವಿಶ್ವಕಪ್‌’ನ ಸೆಮಿಫೈನಲ್‌’ನಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು 10 ವಿಕೆಟ್‌’ಗಳಿಂದ ಸೋಲಿಸುವ ಹೊರ ಕಳುಹಿಸಿತ್ತು. ಇದೀಗ ಟೀಂ ಇಂಡಿಯಾಗೆ ಸೇಡು ತೀರಿಸುವ ಸಮಯ ಬಂದಿದೆ.


ಸೆಮಿಫೈನಲ್ ವೇಳಾಪಟ್ಟಿ


ಮೊದಲ ಸೆಮಿಫೈನಲ್: ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ - ಜೂನ್ 27


ಎರಡನೇ ಸೆಮಿಫೈನಲ್: ಭಾರತ vs ಇಂಗ್ಲೆಂಡ್ - 27 ಜೂನ್


ಫೈನಲ್ – ಜೂನ್ 29


ಇದನ್ನೂ ಓದಿ: ಅನುಷ್ಕಾಗೂ ಮುನ್ನ ಈ ನಟಿಯರ ಜೊತೆ ಡೇಟಿಂಗ್ ಮಾಡಿದ್ರು ವಿರಾಟ್! ಅದ್ರಲ್ಲಿ ಒಬ್ಬಳು ಕನ್ನಡದ ಪ್ರಖ್ಯಾತ ಹೀರೋಯಿನ್!!


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.