ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರು ಶ್ರೇಷ್ಠರು?..ಇಲ್ಲಿದೆ ಶೇನ್ ವಾರ್ನ್ ಉತ್ತರ
ಒಂದು ವರ್ಷದ ನಿಷೇಧದ ನಂತರ ಕ್ರಿಕೆಟ್ ಗೆ ಮರಳಿರುವ ಸ್ಟೀವ್ ಸ್ಮಿತ್ ಈಗ ಇದುವರೆಗೆ ನಾಲ್ಕು ಇನ್ನಿಂಗ್ಸ್ ಗಳಲ್ಲಿ 589 ರನ್ ಗಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಸಕ್ತ ಕಾಲದಲ್ಲಿ ಕ್ರಿಕೆಟಿನಲ್ಲಿ ಶ್ರೇಷ್ಠ ಆಟಗಾರರು ಯಾರು ಎನ್ನುವ ಪ್ರಶ್ನೆ ಮತ್ತೆ ಮುನ್ನಲೆಗೆ ಬಂದಿದೆ.
ನವದೆಹಲಿ: ಒಂದು ವರ್ಷದ ನಿಷೇಧದ ನಂತರ ಕ್ರಿಕೆಟ್ ಗೆ ಮರಳಿರುವ ಸ್ಟೀವ್ ಸ್ಮಿತ್ ಈಗ ಇದುವರೆಗೆ ನಾಲ್ಕು ಇನ್ನಿಂಗ್ಸ್ ಗಳಲ್ಲಿ 589 ರನ್ ಗಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಸಕ್ತ ಕಾಲದಲ್ಲಿ ಕ್ರಿಕೆಟಿನಲ್ಲಿ ಶ್ರೇಷ್ಠ ಆಟಗಾರರು ಯಾರು ಎನ್ನುವ ಪ್ರಶ್ನೆ ಮತ್ತೆ ಮುನ್ನಲೆಗೆ ಬಂದಿದೆ.
ಆದರೆ ಈಗ ಪ್ರಶ್ನೆಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾರ್ನ್ ಅವರು ಇದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅವರು ಹೇಳುವಂತೆ ಟೆಸ್ಟ್ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಗಿಂತ ಸ್ಟೀವ್ ಸ್ಮಿತ್ ಉತ್ತಮ, ಆದರೆ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಅತ್ತ್ಯುತ್ತಮ ಆಟಗಾರ ಎಂದು ಹೇಳಿದ್ದಾರೆ. ಇನ್ನು ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಅವರು ವಿವಿನ್ ರಿಚರ್ಡ್ಸ್ ಗಿಂತಲೂ ಉತ್ತಮ ಎಂದಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಮಿತ್ ನಡುವೆ ಕಠಿಣ ಸ್ಪರ್ಧೆ ಇದೆ, ಆದರೆ ಈ ಇಬ್ಬರಲ್ಲಿ ಯಾರನ್ನು ಟೆಸ್ಟ್ ಕ್ರಿಕೆಟ್ ಗೆ ಆಯ್ದುಕೊಳ್ಳುತ್ತಿರಿ? ಎಂದರೆ ಅದು ಸ್ಮಿತ್ ಎಂದು ಹೇಳಬಹುದು. ಇಲ್ಲದಿದ್ದರೆ ವಿರಾಟ್, ಅವರು ಲೆಜೆಂಡ್ ಆಗಿರುವುದಕ್ಕೆ ನಿಜಕ್ಕೂ ಖುಷಿಯಾಗಿದೆ ಎಂದರು.
'ನನಗೆ ಅನಿಸುತ್ತೆ ವಿರಾಟ್ ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್, ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ನಾನು ಯಾವುದಾದರೂ ಆಟಗಾರನ್ನು ಆಯ್ಕೆ ಮಾಡುತ್ತೆನೆಂದರೆ ಅದು ವಿರಾಟ್ ಕೊಹ್ಲಿ. ನಾನು ನೋಡಿರುವ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ವಿವಿನ್ ರಿಚರ್ಡ್ಸ್ ಶ್ರೇಷ್ಠ ಕ್ರಿಕೆಟಿಗ ಆದರೆ ವಿರಾಟ್ ಕೊಹ್ಲಿ ಉತ್ತಮ ಏಕದಿನ ಆಟಗಾರ ಬಹುಶಃ ಅವರು ರಿಚರ್ಡ್ಸ್ ಅವರನ್ನು ಹಿಂದೆ ಹಾಕಲಿದ್ದಾರೆ' ಎಂದು ವಾರ್ನ್ ಹೇಳಿದರು.