WPL Auction, Who is Vrinda Dinesh: ಐಪಿಎಲ್’ನಂತೆ, T20 ಲೀಗ್ ಅನ್ನು ಭಾರತದಲ್ಲಿ ಮಹಿಳೆಯರಿಗಾಗಿ ಆಯೋಜಿಸಲಾಗುತ್ತಿದೆ. ಅದುವೇ ಮಹಿಳಾ ಪ್ರೀಮಿಯರ್ ಲೀಗ್. ಈ ಲೀಗ್’ನ ಮುಂದಿನ ಸೀಸನ್ (WPL 2024)ಕ್ಕೂ ಮುನ್ನ ಮುಂಬೈನಲ್ಲಿ ಶುಕ್ರವಾರ ನಡೆದ ಹರಾಜಿನಲ್ಲಿ ವೃಂದಾ ದಿನೇಶ್ ಮೇಲೆ ಕೋಟ್ಯಂತರ ರೂಪಾಯಿಗಳ ಸುರಿಮಳೆಯಾಗಿತ್ತು. ವೃಂದಾ ಅವರನ್ನು ಯುಪಿ ವಾರಿಯರ್ಸ್ ತಂಡ 1.3 ಕೋಟಿ ರೂ. ಗೆ ಖರೀದಿಸಿದೆ. ಕುತೂಹಲಕಾರಿ ವಿಷಯವೆಂದರೆ ವೃಂದಾ ಇದುವರೆಗೆ ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನಾಡಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಂಡಕ್ಕಿ ಜೊತೆ ಇದನ್ನು ಬೆರೆಸಿ ಸೇವಿಸಿದರೆ ತೂಕ ಇಳಿಕೆಯಾಗುತ್ತೆ!


ಮಹಿಳಾ ಪ್ರೀಮಿಯರ್ ಲೀಗ್‌’ನ ಮುಂದಿನ ಋತುವಿನ ಆಟಗಾರರ ಹರಾಜು ಶನಿವಾರ ಮುಂಬೈನಲ್ಲಿ ನಡೆಯಿತು. ಈ ವೇಳೆ 22 ವರ್ಷದ ಆಟಗಾರ್ತಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಆಟಗಾರ್ತಿ ಹೆಸರು ವೃಂದಾ ದಿನೇಶ್. ವೃಂದಾ ದಿನೇಶ್ ಕಳೆದ ಕೆಲವು ತಿಂಗಳುಗಳಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ದೇಶೀಯ ಕ್ರಿಕೆಟ್‌’ನಲ್ಲಿ ಸಂಚಲನ ಮೂಡಿಸಿದ್ದಾರೆ. ಇದರೊಂದಿಗೆ ವೃಂದಾ ದಿನೇಶ್ ಈ ಹರಾಜಿನಲ್ಲಿ ಮಾರಾಟವಾದ ಎರಡನೇ ಅತಿ ದುಬಾರಿ ಅನ್‌ಕ್ಯಾಪ್ಡ್ ಆಟಗಾರ್ತಿ ಎನಿಸಿಕೊಂಡಿದ್ದಾರೆ.


ವೃಂದಾ ದಿನೇಶ್ ದೇಶೀಯ ಕ್ರಿಕೆಟ್‌’ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಮನಗೆದ್ದಿರುವ ವೃಂದಾ ದಿನೇಶ್ ಇದುವರೆಗೂ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಅಗ್ರ ಕ್ರಮಾಂಕದ ಬ್ಯಾಟರ್ ಆಗಿದ್ದು, ತನ್ನ ಪವರ್-ಹಿಟ್ಟಿಂಗ್‌’ನಿಂದಲೇ ಪ್ರಸಿದ್ಧನಾಗುತ್ತಿದ್ದಾರೆ.


ಜೂನ್‌’ನಲ್ಲಿ ನಡೆದ ಅಂಡರ್-23 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡದ ಸದಸ್ಯೆಯಾಗಿದ್ದರು ವೃಂದಾ ದಿನೇಶ್. ಎಸಿಸಿ ಮಹಿಳಾ ಉದಯೋನ್ಮುಖ ಟೀಮ್ ಕಪ್‌’ನ ಫೈನಲ್‌’ನಲ್ಲಿ ಬಾಂಗ್ಲಾದೇಶ ಎ ವಿರುದ್ಧದ ಪಂದ್ಯದಲ್ಲಿ 29 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 36 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ ಎ ತಂಡ 31 ರನ್‌’ಗಳಿಂದ ಗೆದ್ದು  ಚಾಂಪಿಯನ್ ಆಗಿದ್ದರು.


ಇದನ್ನೂ ಓದಿ: 2025ರವರೆಗೆ ಈ ರಾಶಿಯ ಜನರದ್ದು ಬಂಗಾರದಂತಹ ಬಾಳು: ಕಷ್ಟವೆಲ್ಲಾ ಕಳೆದು ಸದಾ ನೆರಳಾಗುತ್ತಾರೆ ಶನಿ-ರಾಹು-ಗುರು


ಈ ವರ್ಷ ಕರ್ನಾಟಕ ತಂಡವನ್ನು ಸೀನಿಯರ್ ಮಹಿಳಾ ಏಕದಿನ ಕಪ್ ಫೈನಲ್‌’ಗೆ ಕೊಂಡೊಯ್ಯುವಲ್ಲಿ ವೃಂದಾ ದಿನೇಶ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. 11 ಇನ್ನಿಂಗ್ಸ್‌ಗಳಲ್ಲಿ 47 ರ ಅತ್ಯುತ್ತಮ ಸರಾಸರಿಯಲ್ಲಿ ಒಟ್ಟು 477 ರನ್ ಗಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ