ಆರ್ಸಿಬಿಯಲ್ಲಿ ಡಿವಿಲಿಯರ್ಸ್ ಬದಲಿಗೆ ಯಾರು?: ಈ 3 ಬಲಿಷ್ಠ ಆಟಗಾರರು ರೇಸ್ ನಲ್ಲಿದ್ದಾರೆ..!
ಕ್ರಿಕೆಟ್ ಜಗತ್ತಿನ ಸ್ಫೋಟಕ ಬ್ಯಾಟ್ಸ್ ಮನ್‌ಗಳಲ್ಲಿ ಒಬ್ಬರಾದ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ನವದೆಹಲಿ: ಕ್ರಿಕೆಟ್ ಜಗತ್ತಿನ ಸ್ಫೋಟಕ ಬ್ಯಾಟ್ಸ್ ಮನ್‌ಗಳಲ್ಲಿ ಒಬ್ಬರಾದ ಎಬಿ ಡಿವಿಲಿಯರ್ಸ್(AB De Villiers) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅವರು ಮುಂದಿನ ವರ್ಷ ಐಪಿಎಲ್‌ನಲ್ಲಿ ಆಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ RCBಗೆ ಅವರಂತಹ ಆಟಗಾರನ ಅಗತ್ಯವಿದೆ. ಎಬಿಡಿಗೆ ಎಬಿಡಿಯೇ ಸಾಟಿ. ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ ಕ್ರಿಕೆಟ್ ಪ್ರೇಮಿಗಳ ಮನರಂಜಿಸುತ್ತಿದ್ದ ಎಬಿಡಿ ಈಗ ಬ್ಯಾಟ್ ಹಿಡಿಯುವುದಿಲ್ಲ. ಅವರ ಸ್ಥಾನ ಖಾಲಿಯಾಗಿರುವುದರಿಂದ ಕ್ರಿಕೆಟ್ ಲೋಕವೂ ಖಾಲಿ ಖಾಲಿಯಾಗಿದೆ. ಎಬಿಡಿ ಬದಲಿಗೆ RCB ತಂಡವು ಈ ಮೂವರು ಆಟಗಾರರನ್ನು ತಮ್ಮ ಶಿಬಿರದಲ್ಲಿ ಸೇರಿಸಿಕೊಳ್ಳಬಹುದು. ಅವರು ಯಾರು ಎಂಬುದರ ಮಾಹಿತಿ ಇಲ್ಲಿದೆ ನೋಡಿ…
1. ಡೇವಿಡ್ ವಾರ್ನರ್
ಡೇವಿಡ್ ವಾರ್ನರ್(David Warner) ಅತ್ಯಂತ ಅಪಾಯಕಾರಿ ಬ್ಯಾಟ್ಸ್ ಮನ್. ವಾರ್ನರ್ ಬ್ಯಾಟಿಂಗ್ ಲಯದಲ್ಲಿದ್ದಾಗ ಅವರು ಯಾವುದೇ ಬೌಲಿಂಗ್ ಕ್ರಮಾಂಕವನ್ನು ಧೂಳಿಪಟ ಮಾಡಬಹುದು. ಟಿ-20 ವಿಶ್ವಕಪ್‌ನಲ್ಲಿ ವಾರ್ನರ್ ಬಿರುಸಿನ ಫಾರ್ಮ್ ತೋರಿಸಿದ್ದರು. 7 ಪಂದ್ಯಗಳಲ್ಲಿ ಅವರು 289 ರನ್ ಸಿಡಿಸಿ ಆಸ್ಟ್ರೇಲಿಯಾಗೆ ಚೊಚ್ಚಲ ಟಿ-20 ವಿಶ್ವಕಪ್ ಟ್ರೋಫಿ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ವಾರ್ನರ್ ಅವರಿಗೆ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ನೀಡಲಾಗಿದೆ. ಸಖತ್ ಸಿಕ್ಸರ್‌ಗಳನ್ನು ಹೊಡೆಯುವ ಅವರ ಕಲೆ ಎಲ್ಲರಿಗೂ ತಿಳಿದಿದೆ. ವಾರ್ನರ್ ಐಪಿಎಲ್‌ನಲ್ಲಿ 150 ಪಂದ್ಯಗಳಲ್ಲಿ 5449 ರನ್ ಗಳಿಸಿದ್ದಾರೆ. ಡಿವಿಲಿಯರ್ಸ್‌ನಂತೆ ಬಿರುಸಿನ ಬ್ಯಾಟಿಂಗ್‌ನಲ್ಲಿ ಇವರು ಕೂಡ ನಿಷ್ಣಾತರು.
ಇದನ್ನೂ ಓದಿ: IPL 2022 Mega Auction : ಪ್ರೀತಿ ಜಿಂಟಾ ನೆಚ್ಚಿನ ಆಟಗಾರನ ಮೇಲೆ ಧೋನಿ ಕಣ್ಣು!
2. ಕೆ.ಎಲ್.ರಾಹುಲ್
ಮೆಗಾ ಹರಾಜಿನಲ್ಲಿ ಅತ್ಯುತ್ತಮ ಆರಂಭಿಕ ಬ್ಯಾಟ್ಸ್ ಮನ್ ಕೆ.ಎಲ್.ರಾಹುಲ್(KL Rahul) ಮೇಲೆ ಆರ್‌ಸಿಬಿ ಕಣ್ಣು ಖಂಡಿತವಾಗಿಯೂ ಇರುತ್ತದೆ. ವಿರಾಟ್ ಕೊಹ್ಲಿಯ ವಿಶೇಷ ಆಟಗಾರರಲ್ಲಿ ರಾಹುಲ್ ಅವರನ್ನು ಪರಿಗಣಿಸಲಾಗಿದೆ. ರಾಹುಲ್ ಡಿವಿಲಿಯರ್ಸ್‌ನಷ್ಟೇ ವೇಗವಾಗಿ ಬ್ಯಾಟಿಂಗ್ ಮಾಡಬಲ್ಲರು. ಅವರೊಬ್ಬ ಬಲಿಷ್ಠ ಬ್ಯಾಟ್ಸ್ ಮನ್. ಕನ್ನಡಿಗ ರಾಹುಲ್ ಫಾರ್ಮ್‌ನಲ್ಲಿರುವಾಗ ಯಾವುದೇ ಬೌಲರ್‌ನನ್ನು ಮನಬಂದಂತೆ ದಂಡಿಸಬಹುದು. ವರದಿಗಳ ಪ್ರಕಾರ ಪಂಜಾಬ್ ಕಿಂಗ್ಸ್ ಮುಂದಿನ ವರ್ಷ ರಾಹುಲ್ ಅವರನ್ನು ತಂಡದಿಂದ ಕೈಬಿಡಬಹುದು. ರಾಹುಲ್ ಬ್ಯಾಟಿಂಗ್ ಹಾಗೂ ನಾಯಕತ್ವದಲ್ಲಿ ಕೊಡುಗೆ ನೀಡಬಲ್ಲರು. ಐಪಿಎಲ್‌ನ 94 ಪಂದ್ಯಗಳಲ್ಲಿ ರಾಹುಲ್ 3273 ರನ್ ಗಳಿಸಿದ್ದಾರೆ.
3. ರಾಸ್ಸಿ ವ್ಯಾನ್ ಡೆರ್ ಡ್ಯೂಸೆನ್(Rassie van der Dussen)
ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ತಂಡವು ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ರಾಸ್ಸಿ ವ್ಯಾನ್ ಡೆರ್ ಡ್ಯೂಸೆನ್(Rassie Van Der Dussen) ಮೇಲೆ ಬಾಜಿ ಕಟ್ಟಬಹುದು. ಈ ಆಟಗಾರ ಕಳೆದ ಟಿ-20 ವಿಶ್ವಕಪ್‌ನಲ್ಲಿ ತನ್ನ ಅದ್ಭುತ ಪ್ರದರ್ಶನದ ಮೂಲಕ ಎಲ್ಲಾ ಆಟಗಾರರ ಹೃದಯವನ್ನು ಗೆದ್ದಿದ್ದಾನೆ. ಡ್ಯೂಸೆನ್ ತನ್ನ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಬೌಲರ್‌ಗಳನ್ನು ನಿದ್ದೆಗೆಡಿಸುತ್ತಾರೆ.
ಇದನ್ನೂ ಓದಿ: Women Cricket: ತಾಲಿಬಾನಿಗಳ ಹಸ್ತಕ್ಷೇಪ, ಅಫ್ಘನ್ ಕ್ರಿಕೆಟ್ ಮಂಡಳಿಯನ್ನು ನಿಷೇಧಿಸಲಾಗುತ್ತದೆಯೇ?
ಒಂದೇ ಒಂದು ಐಪಿಎಲ್ ಪಂದ್ಯವನ್ನು ಆಡಿಲ್ಲ
ದಕ್ಷಿಣ ಆಫ್ರಿಕಾದ ರಾಸ್ಸಿ ವ್ಯಾನ್ ಡೆರ್ ಡ್ಯೂಸೆನ್ ಇನ್ನೂ ಐಪಿಎಲ್‌ಗೆ ಪದಾರ್ಪಣೆ ಮಾಡಿಲ್ಲ. ಆದರೆ ಟಿ-20 ಕ್ರಿಕೆಟ್‌ನಲ್ಲಿ ಶ್ರೇಷ್ಠ ದಾಖಲೆ ಹೊಂದಿದ್ದಾರೆ. ಅವರು ಎಲ್ಲಾ ಟಿ-20 ಪಂದ್ಯಾವಳಿಗಳಲ್ಲಿ 140 ಪಂದ್ಯಗಳನ್ನು ಆಡಿದ್ದಾರೆ ಮತ್ತು 3 ಅದ್ಭುತ ಶತಕಗಳನ್ನು ಒಳಗೊಂಡಂತೆ 4129 ರನ್ ಗಳಿಸಿದ್ದಾರೆ. RCB ಖಂಡಿತವಾಗಿಯೂ ಈ ಅಪಾಯಕಾರಿ ಬ್ಯಾಟ್ಸ್ ಮನ್ ಅನ್ನು ತಮ್ಮ ತಂಡಕ್ಕೆ ಸೇರಿಸುವ ಸಾಧ್ಯತೆ ಇದೆ. ಏಕೆಂದರೆ RCBಗೆ ವೇಗದ ಆರಂಭ ನೀಡುವ ಇಂತಹ ಬ್ಯಾಟ್ಸ್ ಮನ್‌ನ ಅಗತ್ಯವಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.