ಪ್ರಸ್ತುತ ನಡೆಯುತ್ತಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ಮುಕ್ತಾಯ ಹಂತದ ಸನಿಹದಲ್ಲಿದೆ. ಪ್ಲೇ ಆಫ್‌ ಪ್ರವೇಶಿಸಲು ತಂಡಗಳು ಸೆಣಸಾಟ ನಡೆಸುತ್ತಿದ್ದು, ಗುಜರಾತ್‌ ಟೈಟಾನ್ಸ್‌ ತಂಡ ಮಾತ್ರ ಈಗಾಗಲೇ ಪ್ಲೇ ಆಫ್‌ ಸುತ್ತಿಗೆ ಕಾಲಿಟ್ಟಿದೆ. ಇಂದು ಸಂಜೆ 7.30ಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಮುಂಬೈ ಇಂಡಿಯನ್ಸ್‌ ನಡುವೆ ಪಂದ್ಯ ಏರ್ಪಡಲಿದೆ. ಆದರೆ ಎರಡೂ ತಂಡಗಳು ಪ್ಲೇ ಆಪ್‌ ಅವಕಾಶದಿಂದ ಹೊರಬಿದ್ದಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ:  ಸೌತ್ ಸಿನಿ ಇಂಡಸ್ಟ್ರಿ ಎಂಟ್ರಿಗೆ ಆರತಿ ಬೇಡಿ ರೆಡಿ... ಯಾರು ಗೊತ್ತಾ ಈ ಬ್ಯೂಟಿ..?


ಕಳೆದ ಬಾರಿ ಸತತ ಸೋಲುಗಳನ್ನು ಕಂಡು ಎಡವಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಪ್ಲೇ ಆಫ್‌ನಿಂದ ಹೊರಬಿದ್ದಿದೆ. ಕೇನ್‌ ವಿಲಿಯಮ್ಸನ್‌ ನಾಯಕತ್ವದಲ್ಲಿ ಕಣಕ್ಕಿಳಿದಿರುವ ಹೈದರಾಬಾದ್‌ ತಂಡವು ಹನ್ನೆರಡು ಪಂದ್ಯಗಳನ್ನಾಡಿದ್ದು, ಐದರಲ್ಲಿ ಗೆಲುವು ಕಂಡಿದೆ. ಇನ್ನುಳಿದ ಏಳು ಪಂದ್ಯಗಳಲ್ಲಿ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನ ಗಳಿಸಿದೆ. 


ಇನ್ನೊಂದೆಡೆ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ರೋಹಿತ್‌ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡವು ಈವರೆಗೆ ಹನ್ನೆರಡು ಪಂದ್ಯಗಳನ್ನಾಡಿದೆ. ಅದರಲ್ಲಿ ಕೇವಲ ಮೂರು ಪಂದ್ಯ ಗೆದ್ದಿದ್ದು, ಇನ್ನುಳಿದಂತೆ ಒಂಬತ್ತು ಪಂದ್ಯಗಳಲ್ಲಿ ಸೋಲು ಕಂಡಿದೆ. ಒಟ್ಟಾರೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸಿದೆ. 


ಇದನ್ನು ಓದಿ: Harbhajan Vs Symonds: ‘ಮಂಕಿಗೇಟ್’ ಪ್ರಕರಣದ ಬಗ್ಗೆ ನಿಮಗೆಷ್ಟು ಗೊತ್ತು..?


ಸಂಭಾವ್ಯ ಆಟಗಾರರ ಪಟ್ಟಿ: 
ಮುಂಬೈ ಇಂಡಿಯನ್ಸ್:
ಇಶಾನ್ ಕಿಶನ್ (ವಿ.ಕೀ), ರೋಹಿತ್ ಶರ್ಮಾ (ಕ್ಯಾ), ತಿಲಕ್ ವರ್ಮಾ, ರಮಣದೀಪ್ ಸಿಂಗ್, ಟ್ರಿಸ್ಟಾನ್ ಸ್ಟಬ್ಸ್, ಟಿಮ್ ಡೇವಿಡ್, ಹೃತಿಕ್ ಶೋಕೀನ್, ಡೇನಿಯಲ್ ಸಾಮ್ಸ್, ಕುಮಾರ್ ಕಾರ್ತಿಕೇಯ, ಜಸ್ಪ್ರೀತ್ ಬುಮ್ರಾ, ರಿಲೆ ಮೆರೆಡಿತ್


ಸನ್ ರೈಸರ್ಸ್ ಹೈದರಾಬಾದ್:
ಕೇನ್ ವಿಲಿಯಮ್ಸನ್ (ಕ್ಯಾ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ವಿ.ಕೀ), ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.