ವಿರಾಟ್ ಕೊಹ್ಲಿ ಜೊತೆ ಬೌಲರ್ ಗಳು ಜಗಳಕ್ಕಿಳಿಯಬಾರದು ಎಂದು ಪಾಕ್ ಆಟಗಾರ ಹೇಳಿದ್ದೇಕೆ?
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅತ್ಯಂತ ನಿರ್ಣಾಯಕ ಕ್ಷಣಗಳಲ್ಲಿ ದೊಡ್ಡ ಶತಕಗಳನ್ನು ಗಳಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಮೈದಾನದಲ್ಲಿನ ಆಕ್ರಮಣಕಾರಿ ಆಟಕ್ಕೆ ಕೊಹ್ಲಿ ಎತ್ತಿದ ಕೈ, ಈ ಹಿನ್ನಲೆಯಲ್ಲಿ ಈಗ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್, ವಿಡಿಯೋವೊಂದರಲ್ಲಿ, ಕೊಹ್ಲಿಯ ವೃತ್ತಿಜೀವನದ ಎರಡು ನಿದರ್ಶನಗಳನ್ನು ನೆನಪಿಸಿಕೊಂಡರು, ಪಂದ್ಯದ ವೇಳೆ ಬೌಲರ್‌ಗಳು ಭಾರತದ ನಾಯಕನೊಂದಿಗೆ ಏಕೆ ಜಗಳಕ್ಕೆ ಇಳಿಯಬಾರದು ಎಂಬುದನ್ನು ವಿವರಿಸಿದರು.
ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅತ್ಯಂತ ನಿರ್ಣಾಯಕ ಕ್ಷಣಗಳಲ್ಲಿ ದೊಡ್ಡ ಶತಕಗಳನ್ನು ಗಳಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಮೈದಾನದಲ್ಲಿನ ಆಕ್ರಮಣಕಾರಿ ಆಟಕ್ಕೆ ಕೊಹ್ಲಿ ಎತ್ತಿದ ಕೈ, ಈ ಹಿನ್ನಲೆಯಲ್ಲಿ ಈಗ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್, ವಿಡಿಯೋವೊಂದರಲ್ಲಿ, ಕೊಹ್ಲಿಯ ವೃತ್ತಿಜೀವನದ ಎರಡು ನಿದರ್ಶನಗಳನ್ನು ನೆನಪಿಸಿಕೊಂಡರು, ಪಂದ್ಯದ ವೇಳೆ ಬೌಲರ್‌ಗಳು ಭಾರತದ ನಾಯಕನೊಂದಿಗೆ ಏಕೆ ಜಗಳಕ್ಕೆ ಇಳಿಯಬಾರದು ಎಂಬುದನ್ನು ವಿವರಿಸಿದರು.
ಯುಟ್ಯೂಬ್ ವಿಡಿಯೋವೊಂದರಲ್ಲಿ ಮಾತನಾಡಿದ ಲತೀಫ್, 2014 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಭಾರತದ ಟೆಸ್ಟ್ ಸರಣಿಯನ್ನು ನೆನಪಿಸಿಕೊಂಡರು, ಇದರಲ್ಲಿ ಎಂ.ಎಸ್ ಧೋನಿ 3 ನೇ ಟೆಸ್ಟ್ ಪಂದ್ಯದ ನಂತರ ನಿವೃತ್ತರಾಗಿದ್ದರು, ಅದರಲ್ಲಿ ಮೊದಲ ಎರಡು ಭಾರತ ಸೋತಿದೆ ಮತ್ತು ಮೂರನೆಯದು ಡ್ರಾದಲ್ಲಿ ಕೊನೆಗೊಂಡಿತು. ಮೊದಲ ಟೆಸ್ಟ್ ಪಂದ್ಯಕ್ಕೆ ಧೋನಿ ಗಾಯಗೊಂಡರು, ಮತ್ತು ಕೊಹ್ಲಿಯನ್ನು ಪಂದ್ಯದ ಸ್ಟ್ಯಾಂಡ್-ಇನ್ ನಾಯಕನನ್ನಾಗಿ ಮಾಡಲಾಯಿತು. ಧೋನಿ ನಿವೃತ್ತಿ ಘೋಷಿಸಿದ ನಂತರ, ಕೊಹ್ಲಿಯನ್ನು ಮತ್ತೆ 4 ನೇ ಟೆಸ್ಟ್ ಪಂದ್ಯಕ್ಕೆ ನಾಯಕನನ್ನಾಗಿ ಮಾಡಲಾಯಿತು.
'2014 ರ ಸರಣಿಯಲ್ಲಿ, ಧೋನಿ ಎರಡು ಟೆಸ್ಟ್ ಪಂದ್ಯಗಳ ನಂತರ ನಿವೃತ್ತರಾದಾಗ. ನಂತರ ಒಂದು ಟೆಸ್ಟ್ ಇತ್ತು, ಇದರಲ್ಲಿ ವಿರಾಟ್ ಕೊಹ್ಲಿ ಪ್ರತಿ ಇನ್ನಿಂಗ್ಸ್‌ನಲ್ಲಿ ಎರಡು ಶತಕಗಳನ್ನು ಗಳಿಸಿದರು . ಆ ಪಂದ್ಯದಲ್ಲಿ, ಮಿಚೆಲ್ ಜಾನ್ಸನ್ ಕೊಹ್ಲಿಯತ್ತ ಹೆಜ್ಜೆ ಹಾಕಿ ಅವರ ಜೊತೆ ವಾದಕ್ಕಿಳಿದರು.ಕೊಹ್ಲಿಯ ಪ್ರತಿಕ್ರಿಯೆ ರಕ್ಷಣಾತ್ಮಕವಾಗಿಲ್ಲ ಎನ್ನುವುದನ್ನು ನೀವು ನೋಡುತ್ತೀರಿ,' ಎಂದು ಅವರು ಹೇಳಿದರು.
'ನೀವು ನಮ್ಮಲ್ಲಿ ಜಾವೇದ್ ಭಾಯ್, ವಿವ್ ರಿಚರ್ಡ್ಸ್, ಸುನಿಲ್ ಗವಾಸ್ಕರ್ ಜೊತೆಗೆ ವಾದಕ್ಕಿಳಿಯಬಾರದು. ಇಂದು, ವಿರಾಟ್ ಕೊಹ್ಲಿ ಅಂತಹ ಒಬ್ಬ ಆಟಗಾರ, ಎಂದು ಅವರು ಹೇಳಿದರು.