ನವದೆಹಲಿ: ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ 2-1 ರಿಂದ ಟೆಸ್ಟ್ ಸರಣಿ ಗೆದ್ದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರತ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಕುರಿತು ಮೆಚ್ಚುಗೆಯ ಸುರಿಮಳೆಗಳೇ ಹರಿದು ಬಂದಿವೆ.


Ind vs Aus, Test Series: ಐತಿಹಾಸಿಕ ವಿಜಯದೊಂದಿಗೆ ದಾಖಲೆ ನಿರ್ಮಿಸಿದ ಭಾರತ


COMMERCIAL BREAK
SCROLL TO CONTINUE READING

ಹೌದು, ಭಾರತ ತಂಡವು ಮೊದಲ ಟೆಸ್ಟ್ ಪಂದ್ಯದಲ್ಲಿ 36 ರನ್ ಗಳಿಗೆ ಕುಸಿದ ನಂತರ ಇನ್ನೊಳಿದ ಟೆಸ್ಟ್ ಪಂದ್ಯಗಳಲ್ಲಿ ಅದು ಸಿಡಿದು ಬಂದ ರೀತಿ ನಿಜಕ್ಕೂ ಎಲ್ಲರನ್ನೂ ಅಚ್ಚರಿಗೊಳಿಸಿದೆ.ಭಾರತ ತಂಡದ ಬಹುತೇಕ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಟೆಸ್ಟ್ ಸರಣಿಯನ್ನು 2-1 ರಿಂದ ಗೆದ್ದಿರುವ ರೀತಿಗೆ ಇಡೀ ಕ್ರಿಕೆಟ್ ವಲಯದಲ್ಲಿಯೇ ಪ್ರಶಂಸೆಯ ಸುರಿಮಳೆಗಳೆ ಹರಿದು ಬಂದಿವೆ.


Ind vs Aus: ಟೆಸ್ಟ್‌ ಗೆದ್ದ 'ಟೀಮ್‌ ಇಂಡಿಯಾಗೆ' ಬಿಸಿಸಿಐನಿಂದ ಭರ್ಜರಿ ಗಿಫ್ಟ್..!


ಕ್ರೀಡಾ ಬರಹಗಾರರಾದ ವಿಜಯ್ ಲೋಕಪಲ್ಲಿ " ದ್ರಾವಿಡ್ ಅವರು ಟ್ವಿಟ್ಟರ್ ನಲ್ಲಿ ಇಲ್ಲದೆ ಇರಬಹುದು ಆದರೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಹಾಗೂ ಭಾರತ ಎ ತಂಡದ ಕೋಚ್ ಆಗಿ ನಿರ್ವಹಿಸಿದ್ದ ದ್ರಾವಿಡ್  ಮಾರ್ಗದರ್ಶನದಲ್ಲಿ  ಈಗ ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಸಿರಾಜ್, ಸೈನಿ,ಪಂತ್, ಗಿಲ್ ಈ ಎಲ್ಲ ಆಟಗಾರರು ಬೆಳೆದಿದ್ದಾರೆ' ಎಂದು ಕೊಂಡಾಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.