ವಿರಾಟ್ ಸ್ಥಾನದಲ್ಲಿ ಇಶಾನ್ ಬ್ಯಾಟಿಂಗ್ ಮಾಡಿದ್ದೇಕೆ? ಈ ಬದಲಾವಣೆಗೆ ಅಚ್ಚರಿಯ ಕಾರಣ ಕೊಟ್ಟ ರೋಹಿತ್ ಶರ್ಮಾ
Rohit Sharma Statement: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶನ್ ಅವರಿಗೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ನೀಡಿದರು.
Rohit Sharma Statement: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್’ನ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಸ್ಥಾನದಲ್ಲಿ ನಂಬರ್ 4ರಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರನ್ನು ಬ್ಯಾಟ್ ಮಾಡಲು ಕಳುಹಿಸಲಾಗಿತ್ತು. ಇದಕ್ಕೆ ಕಾರಣ ಏನು ಎಂಬುದನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: IND vs WI: ಭಾರತ-ವಿಂಡೀಸ್ 2ನೇ ಟೆಸ್ಟ್ ಪಂದ್ಯ ಡ್ರಾ: ಸತತ 9ನೇ ಸರಣಿ ಗೆದ್ದ ಟೀಂ ಇಂಡಿಯಾಗೆ ಶುಭಾರಂಭ
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶನ್ ಅವರಿಗೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ನೀಡಿದರು. ಈ ಸುವರ್ಣಾವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡ ಇಶಾನ್ ಕಿಶನ್ 34 ಎಸೆತಗಳಲ್ಲಿ 52 ರನ್ ಗಳಿಸಿದರು. ಇಶಾನ್ ಕಿಶನ್ ಅವರ ಇನ್ನಿಂಗ್ಸ್ ನಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ಇಶಾನ್ ಕಿಶನ್ ತಮ್ಮ ಬ್ಯಾಟಿಂಗ್ ಮೂಲಕ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರನ್ನು ನೆನಪಿಸಿದರು.
ಇನ್ನು ಪಂದ್ಯದ ಬಳಿಕ ಇಶಾನ್ ಕಿಶನ್ ಅವರನ್ನು ಹೊಗಳಿದ ನಾಯಕ ರೋಹಿತ್ ಶರ್ಮಾ, “ನಮಗೆ ಇಶಾನ್ ಕಿಶನ್ ಅವರಂತಹ ಆಟಗಾರ ಬೇಕು. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ನಾವು ವೇಗವಾಗಿ ರನ್ ಗಳಿಸಲು ಬಯಸಿದ್ದೆವು, ಆದ್ದರಿಂದ ನಾನು ಆತನಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ನಂಬರ್-4 ಗೆ ಬಡ್ತಿ ನೀಡಿದೆ. ಆದರೆ ಆತ ಹೆದರಲಿಲ್ಲ. ಈ ಜವಾಬ್ದಾರಿಯನ್ನು ಹೊತ್ತ ಮೊದಲ ವ್ಯಕ್ತಿ ಇಶಾನ್ ಕಿಶನ್. ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಮಾಡಿದಂತೆ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸುವ ಜನರು ನಮಗೆ ಬೇಕು. ಅದಕ್ಕೆ ತಕ್ಕಂತೆ ಅದ್ಭುತವಾಗಿ ಆಡಿದ್ದಾರೆ” ಎಂದರು.
ಪಂದ್ಯದ ಐದನೇ ದಿನದಂದು ಮಳೆಯಿಂದಾಗಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಮತ್ತು ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯವು ಸೋಮವಾರ ಡ್ರಾದಲ್ಲಿ ಕೊನೆಗೊಂಡಿತು. ಭಾರತವು ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡಿತು.
ಇದನ್ನೂ ಓದಿ: 1 ಶತಕಕ್ಕೆ 7 ವಿಶ್ವದಾಖಲೆಗಳು ಉಡೀಸ್..! ‘ಕಿಂಗ್’ ಕೊಹ್ಲಿ ಬತ್ತಳಿಕೆ ಸೇರಿದ ಸಚಿನ್, ಜಾಕ್ವೆಸ್ ಕಾಲಿಸ್’ರ ಈ ದಾಖಲೆ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ಡಬ್ಲ್ಯುಟಿಸಿ) ಮೊದಲ ಎರಡು ಸುತ್ತುಗಳಲ್ಲಿ ಫೈನಲ್ ಗೆ ತಲುಪಿದ ಭಾರತ, ಡೊಮಿನಿಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು 141 ರನ್‌ಗಳಿಂದ ಗೆಲ್ಲುವ ಮೂಲಕ ಹೊಸ ಋತುವಿಗೆ ಉತ್ತಮ ಆರಂಭವನ್ನು ನೀಡಿತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ಡಬ್ಲ್ಯುಟಿಸಿ) ಪಾಯಿಂಟ್‌ಗಳ ಪಟ್ಟಿಯಲ್ಲಿ ಭಾರತ ಪ್ರಸ್ತುತ ಶೇಕಡಾ 66.67 ಅಂಕಗಳನ್ನು ಹೊಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.