Rishabh Pant: ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಗೆ ಸಂಬಂಧಿಸಿದ ದೊಡ್ಡ ಸುದ್ದಿಯೊಂದು ಹೊರಬೀಳುತ್ತಿದೆ. 30 ಡಿಸೆಂಬರ್ 2022 ರಂದು ಕಾರು ಅಪಘಾತದಲ್ಲಿ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಈ ಗಾಯದಿಂದಾಗಿ ಅವರು ಐಪಿಎಲ್ 2023 ರಿಂದಲೂ ಹೊರಗುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ಯಾವಾಗ ಮೈದಾನಕ್ಕೆ ಮರಳುತ್ತಾರೆ ಎಂಬ ಒಂದೇ ಒಂದು ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿದೆ. ರಿಷಬ್ ಪಂತ್ ಮರಳುವಿಕೆಯ ಬಗ್ಗೆ ಭಾರತದ ಮಾಜಿ ನಾಯಕರೊಬ್ಬರು ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 0, 0, 0, 0, 0, 0, 0… ಕೇವಲ 2 ಎಸೆತ...ಮುಗಿದ ಟಿ-20 ಪಂದ್ಯ! ಕ್ರಿಕೆಟ್ ಇತಿಹಾಸದಲ್ಲೇ ನಡೆದಿಲ್ಲ ಇಂಥಾ ಕಳಪೆ ಆಟ!


ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಅವರಿಗೆ ಒಂದು ಕಠಿಣ ಸವಾಲು ಎದುರಾಗಿದೆ. ಅಂದರೆ ಇತ್ತೀಚೆಗೆ ಭೀಕರ ಅಪಘಾತಕ್ಕೀಡಾಗಿ, ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ರಿಷಬ್ ಪಂತ್ ಅವರ ಸ್ಥಾನವನ್ನು ತುಂಬುವುದು.


ಸೌರವ್ ಗಂಗೂಲಿ, “ನಾನು ಅವರೊಂದಿಗೆ ಹಲವು ಬಾರಿ ಮಾತನಾಡಿದ್ದೇನೆ. ಗಾಯಗಳು ಮತ್ತು ಶಸ್ತ್ರಚಿಕಿತ್ಸೆಗಳ ನಂತರ ಅವರು ನಿಸ್ಸಂಶಯವಾಗಿ ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ನಾನು ಅವರಿಗೆ ಶೀಘ್ರ ಚೇತರಿಕೆ ಕಾಣಲಿ ಎಂದು ಹಾರೈಸುತ್ತೇನೆ. ಒಂದು ವರ್ಷ ಅಥವಾ ಕೆಲವೇ ವರ್ಷಗಳಲ್ಲಿ ಅವರು ಮತ್ತೆ ಭಾರತಕ್ಕಾಗಿ ಆಡುವ ಸಾಧ್ಯತೆಯಿದೆ” ಎಂದು ಹೇಳಿದ್ದಾರೆ.


ಸದ್ಯ ಐಪಿಎಲ್ ನ ದೆಹಲಿ ತಂಡವು ಪಂತ್ ಅವರ ಬದಲಿ ಆಟಗಾರನನ್ನು ಇನ್ನೂ. ಯುವ ಅಭಿಷೇಕ್ ಪೊರೆಲ್ ಮತ್ತು ಅನುಭವಿ ಶೆಲ್ಡನ್ ಜಾಕ್ಸನ್ ನಡುವೆ ಯಾರು ಉತ್ತಮ ಎಂದು ಗಂಗೂಲಿ ಇನ್ನೂ ನಿರ್ಧರಿಸಿಲ್ಲ. ಈ ಋತುವಿನಲ್ಲಿ ಅಕ್ಷರ್ ಪಟೇಲ್ ಉಪನಾಯಕನಾಗಿದ್ದರೆ, ಡೇವಿಡ್ ವಾರ್ನರ್ ತಂಡದ ನಾಯಕತ್ವವನ್ನು ವಹಿಸುವ ಸಾಧ್ಯತೆಯಿದೆ.


ಗಂಗೂಲಿ ಅವರ ಮಾರ್ಗದರ್ಶನದಲ್ಲಿ ಕೋಲ್ಕತ್ತಾದಲ್ಲಿ ಮೂರು ದಿನಗಳ ಶಿಬಿರವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಪೃಥ್ವಿ ಶಾ, ಇಶಾಂತ್ ಶರ್ಮಾ, ಚೇತನ್ ಸಕರಿಯಾ, ಮನೀಶ್ ಪಾಂಡೆ ಮತ್ತು ಇತರ ದೇಶೀಯ ಆಟಗಾರರು ಭಾಗವಹಿಸಿದ್ದರು.


ಇದನ್ನೂ ಓದಿ: Virat Kohli : ಇಂದೋರ್ ಟೆಸ್ಟ್‌ನಲ್ಲಿ 'ಟ್ರಿಪಲ್ ಸೆಂಚುರಿ' ಸಿಡಿಸಲಿದ್ದಾರೆ ವಿರಾಟ್ ಕೊಹ್ಲಿ!


ಸೌರವ್ ಗಂಗೂಲಿ, “ಐಪಿಎಲ್‌ಗೆ ಇನ್ನೂ ಒಂದು ತಿಂಗಳು ಬಾಕಿಯಿದೆ. ಸೀಸನ್ ಈಗಷ್ಟೇ ಆರಂಭವಾಗಿದೆ. ಅವರು ಆಡುವ ಕ್ರಿಕೆಟ್ ಪ್ರಮಾಣವನ್ನು ಪರಿಗಣಿಸಿದರೆ, ಎಲ್ಲಾ ಆಟಗಾರರನ್ನು ಒಟ್ಟಿಗೆ ಸೇರಿಸುವುದು ಕಷ್ಟ. ನಾಲ್ಕೈದು ಆಟಗಾರರು ಇರಾನಿ ಟ್ರೋಫಿ ಆಡುತ್ತಿದ್ದಾರೆ. ಸರ್ಫರಾಜ್ ಕೈ ಬೆರಳಿಗೆ ಗಾಯವಾಗಿದೆ. ಹೆಚ್ಚಿನ ಗಾಯವಿಲ್ಲದಿದ್ದರೂ ಸಹ ಐಪಿಎಲ್‌ ಸಂದರ್ಭದಲ್ಲಿ ಫಿಟ್ನೆಸ್ ಕಾಯ್ದುಕೊಳ್ಳಬೇಕು” ಎಂದು ಹೇಳಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.