ಲಂಡನ್ : ಕಾರ್ಲೋಸ್ ಅಲ್ಕಾರಝ್ ಭಾನುವಾರದಂದು ನಡೆದ ಐದು ಸೆಟ್‌ಗಳ ರೋಚಕ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದರು.ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ಕಾರ್ಲೋಸ್ ಅಲ್ಕಾರಝ್ 1-6, 7-6 (8/6), 6-1, 3-6, 6-4 ಗೇಮ್‌ಗಳಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಜೊಕೊವಿಕ್ ಅವರು ಮೊದಲ ಸೆಟ್‌ನಲ್ಲಿ 6-1 ರಿಂದ ಮುನ್ನಡೆ ಸಾಧಿಸಿದರು.ಟೈಬ್ರೇಕರ್‌ನ ಎರಡನೇ ಸೆಟ್‌ನಲ್ಲಿ ಅಲ್ಕರಾಜ್ ತಿರುಗೇಟು ನೀಡಿದರು.ವಿಶ್ವ ನಂಬರ್ 1 ಆಟಗಾರನಾಗಿರುವ ಅಲ್ಕರಾಜ್ 7-6 (8/6) ರಿಂದ ಗೆಲುವು ಸಾಧಿಸಿದರು.ತಮ್ಮ ಪ್ರಾಬಲ್ಯವನ್ನು ಮುಂದುವರಿಸಿಸುವ ಮೂಲಕ ಅವರು ಮೂರನೇ ಸೆಟ್ ಅನ್ನು 6-1 ರಿಂದ ತಮ್ಮದಾಗಿಸಿಕೊಂಡರು. 


COMMERCIAL BREAK
SCROLL TO CONTINUE READING

ಆದಾಗ್ಯೂ, ಜೊಕೊವಿಕ್ ಕೂಡ ಗಮನಾರ್ಹವಾದ ಪುನರಾಗಮನವನ್ನು ಮಾಡಿ ನಾಲ್ಕನೇ ಸೆಟ್‌ನಲ್ಲಿ 6-3 ಗೆಲುವು ಸಾಧಿಸುವುದರೊಂದಿಗೆ ಪಂದ್ಯವನ್ನು ಅಂತಿಮ ಸೆಟ್‌ಗೆ ಕೊಂಡೊಯ್ದರು. ಆದರೆ ಅಲ್ಕರಾಜ್ ಅಂತಿಮ ಸೆಟ್‌ನಲ್ಲಿ ಜೊಕೊವಿಕ್‌ ವಿರುದ್ಧ ಮುನ್ನಡೆ ಸಾಧಿಸುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ